Jobs : ಸ್ಟಾಂಡರ್ಡ್ ಚಾರ್ಟರ್ಡ್ ನಲ್ಲಿ ಹೊಸಬರಿಗೆ ಅವಕಾಶ, ವರ್ಷಕ್ಕೆ ಸಿಟಿಸಿ 6.1 ಲಕ್ಷ

ಬ್ಯಾಂಕಿಂಗ್ ವ್ಯವಹಾರ ನಡೆಸುವ ಸ್ಟಾಂಡರ್ಡ್ ಚಾರ್ಟರ್ಡ್  ಕಂಪನಿಯಲ್ಲಿ ಉದ್ಯೋಗಾವಕಾಶಗಳಿವೆ. ಕೆಲಸದ ಲೊಕೇಶನ್ ಬೆಂಗಳೂರು ಮತ್ತು ಚೆನ್ನೈ ಆಗಿದೆ. ನೀವು ಈಗಷ್ಟೇ ಪದವಿ ಪಡೆದ ಫ್ರೆಶರ್ಸ್ ಆಗಿದ್ದರೆ ಕೂಡಲೇ ಅರ್ಜಿ ಸಲ್ಲಿಸಬಹುದು.  

Written by - Ranjitha R K | Last Updated : Feb 28, 2021, 11:55 AM IST
  • ಬ್ರಿಟನ್ ಮೂಲದ ಸ್ಟಾಂಡರ್ಡ್ ಚಾರ್ಟರ್ಡ್ ನಲ್ಲಿ ಹೊಸಬರಿಗೆ ಅವಕಾಶ
  • ಕೆಲಸದ ಲೊಕೇಶನ್ ಬೆಂಗಳೂರು ಮತ್ತು ಚೆನ್ನೈ
  • ಹೊಸಬರಿಗೆ ವರ್ಷಕ್ಕೆ 6.1 ಲಕ್ಷ ಸಿಟಿಸಿ ನೀಡಲಿದೆ ಕಂಪನಿ
Jobs : ಸ್ಟಾಂಡರ್ಡ್ ಚಾರ್ಟರ್ಡ್ ನಲ್ಲಿ ಹೊಸಬರಿಗೆ ಅವಕಾಶ, ವರ್ಷಕ್ಕೆ ಸಿಟಿಸಿ 6.1 ಲಕ್ಷ title=
ಸ್ಟಾಂಡರ್ಡ್ ಚಾರ್ಟರ್ಡ್ ನಲ್ಲಿ ಹೊಸಬರಿಗೆ ಅವಕಾಶ (file photo)

ಬೆಂಗಳೂರು : ನೀವು ಟೆಕ್ನಿಕಲ್ ಹಿನ್ನೆಲೆ ಹೊಂದಿದ್ದು, ಈಗಷ್ಟೇ ಕಾಲೇಜಿನಿಂದ ಪದವಿ ಮುಗಿಸಿರುವ ಫ್ರೆಶರ್ಸ್ (Freshers)ಆಗಿದ್ದರೆ ನಿಮಗಿಲ್ಲಿ ಉದ್ಯೋಗಾವಕಾಶಗಳಿವೆ. ಅದೂ ಕೂಡಾ ಬೆಂಗಳೂರು (Bengaluru) ಮತ್ತು ಚೆನ್ನೈನಲ್ಲಿ (Chennai) ಈ ಕೆಲಸ. ಮಲ್ಟಿನ್ಯಾಶನಲ್ ಬ್ಯಾಂಕ್ ಗಳಲ್ಲಿ  (Multinational Bank) ಉದ್ಯೋಗ ಪಡೆಯಲು ಸುವರ್ಣಾವಕಾಶ ಇಲ್ಲಿದೆ. ಇಂಗ್ಲೆಂಡ್ ಮೂಲದ ಮಲ್ಟಿ ನ್ಯಾಷನಲ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕಂಪನಿಯಾದ ಸ್ಟಾಂಡರ್ಡ್ ಚಾರ್ಟರ್ಡ್ ನಲ್ಲಿ ಉದ್ಯೋಗಾವಕಾಶಗಳಿವೆ. 

ಬ್ಯಾಂಕಿಂಗ್ (Banking) ವ್ಯವಹಾರ ನಡೆಸುವ ಈ  ಕಂಪನಿ, ವಿಶ್ವಾದ್ಯಂತ 1200 ಬ್ರಾಂಚ್ ಗಳನ್ನು ಹೊಂದಿದೆ. 70 ದೇಶಗಳಲ್ಲಿ ವ್ಯವಹಾರ ನಡೆಸುತ್ತಿದೆ. 87ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಇದೊಂದು ಹೈಪ್ರೊಫೈಲ್ ಮಲ್ಟಿ ನ್ಯಾಷನಲ್ (Multi national) ಕಂಪನಿಯಾಗಿದ್ದು, ಉದ್ಯೋಗಿಗಳಿಗೆ ಉತ್ತಮ ಸೌಲಭ್ಯ ನೀಡುತ್ತಿದೆ.  ನೀವು ಈಗಷ್ಟೇ ಪದವಿ ಪಡೆದ ಫ್ರೆಶರ್ಸ್ (Freshers) ಆಗಿದ್ದರೆ ಕೂಡಲೇ ಅರ್ಜಿ ಸಲ್ಲಿಸಬಹುದು.  ಕೆಲಸದ ಲೊಕೇಶನ್ ಬೆಂಗಳೂರು (Bengaluru) ಮತ್ತು ಚೆನ್ನೈ ಆಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣ ಆನ್ ಲೈನ್ ನಡೆಯಲಿದೆ. ನೇಮಕಾತಿಯ ವಿವರ ಹೀಗಿದೆ.

ಇದನ್ನೂ ಓದಿ : ಮಾಸಿಕ ವ್ಯಾಸಾಂಗ ವೇತನ ಫೆಲೋಶೀಪ್‍ಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

1. ಜಾಬ್ ಪ್ರೊಫೈಲ್ : ಡೆವಲಪರ್ (Developer)
2.  ಬೇಕಾದ ಪದವಿ: ಬಿಇ/ಬಿಟೆಕ್ (BE/BTech)
3.  ಪದವಿ ಪಡೆದ ವರ್ಷ : 2020 /2021
4.  ಕೆಲಸದ ಸ್ಥಳ : ಬೆಂಗಳೂರು, ಚೆನ್ನೈ
5. ವೇತನ (ಸಿಟಿಸಿ): 6.1 LPA

ಆಯ್ಕೆ ಪ್ರಕ್ರಿಯೆ : 
ಬ್ಯಾಂಕ್ (Bank) ಪೋರ್ಟಲ್ ನಲ್ಲಿರುವ ಲಿಂಕ್ ಮೂಲಕ Online ಅಪ್ಲೈ ಮಾಡಬೇಕು. ಮೂರು ಸುತ್ತಿನ Aptitude Test ಇರುತ್ತದೆ. ಕೋಡಿಂಗ್ ಟೆಸ್ಸ್ (Coding Test), ಹೆಕಾಥಾನ್, ಪ್ರೆಸೆಂಟೇಶನ್ ಇರಲಿದೆ. ಹಾಗಾಗಿ, ತಡ ಮಾಡಬೇಡಿ. ಇವತ್ತೇ ಅಪ್ಲೈ ಮಾಡಿ. www.sc.taleo.net ಈ website ಮೂಲಕ ಅಪ್ಲೈ ಮಾಡಿ.. 

ಇದನ್ನೂ ಓದಿ : Bank Jobs : RBIನಲ್ಲಿ ಕಚೇರಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News