ʼನಿತ್ಯಾನಂದನ ಕೈಲಾಸʼ ದೇಶದ ಜೊತೆ USA ಒಪ್ಪಂದ..! ಯಾಕೆ ಗೊತ್ತಾ..?

ನಿತ್ಯಾನಂದನ ಕೈಲಾಸ ಎಂಬ ಸ್ವಂತ ದೇಶವನ್ನು ಅಮೇರಿಕಾ, ದೈವಾನುಭೂತಿ ಹೊಂದಿರುವ ನಾಡಾಗಿ ಅಮೇರಿಕಾ ಅಂಗೀಕರಿಸಿದೆ ಎಂದು ನಿತ್ಯಾನಂದ ತಿಳಿಸಿದ್ದಾರೆ. ಅಮೇರಿಕಾ ಸರ್ಕಾರದಿಂದ ಇದುವರೆಗೂ ಯಾವುದೇ ಅಧಿಕೃತವಾದ ಮಾಹಿತಿ ಪ್ರಕಟವಾಗದ ಹಿನ್ನೆಲೆಯಲ್ಲಿ, ಮೇಯರ್ ಒಬ್ಬರೊಡನೆ ನಡೆಸಿದ ಒಪ್ಪಂದವು ಒಂದರ ಆಧಾರದ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಮಾಹಿತಿ ಹರಿದಾಡುತ್ತಿದೆ.

Written by - Krishna N K | Last Updated : Jan 14, 2023, 02:06 PM IST
  • ನಿತ್ಯಾನಂದನ ಕೈಲಾಸ ಎಂಬ ಸ್ವಂತ ದೇಶವನ್ನು ಅಮೇರಿಕಾ, ದೈವಾನುಭೂತಿ ಹೊಂದಿರುವ ನಾಡಾಗಿ ಅಮೇರಿಕಾ ಅಂಗೀಕರಿಸಿದೆ.
  • ಕೈಲಾಸ ದೇಶವನ್ನು ಅಮೇರಿಕಾ ಅಂಗೀಕರಿಸಿರುವುದಾಗಿ ನಿತ್ಯಾನಂದ ಮಾಹಿತಿ ನೀಡಿದ್ದಾರೆ.
  • ಆದ್ರೆ ಅಮೇರಿಕಾ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತವಾದ ಮಾಹಿತಿ ಪ್ರಕಟವಾಗಿಲ್ಲ.
ʼನಿತ್ಯಾನಂದನ ಕೈಲಾಸʼ ದೇಶದ ಜೊತೆ USA ಒಪ್ಪಂದ..! ಯಾಕೆ ಗೊತ್ತಾ..? title=

Nithyananda Kailasa : ನಿತ್ಯಾನಂದನ ಕೈಲಾಸ ಎಂಬ ಸ್ವಂತ ದೇಶವನ್ನು ಅಮೇರಿಕಾ, ದೈವಾನುಭೂತಿ ಹೊಂದಿರುವ ನಾಡಾಗಿ ಅಮೇರಿಕಾ ಅಂಗೀಕರಿಸಿದೆ ಎಂದು ನಿತ್ಯಾನಂದ ತಿಳಿಸಿದ್ದಾರೆ. ಅಮೇರಿಕಾ ಸರ್ಕಾರದಿಂದ ಇದುವರೆಗೂ ಯಾವುದೇ ಅಧಿಕೃತವಾದ ಮಾಹಿತಿ ಪ್ರಕಟವಾಗದ ಹಿನ್ನೆಲೆಯಲ್ಲಿ, ಮೇಯರ್ ಒಬ್ಬರೊಡನೆ ನಡೆಸಿದ ಒಪ್ಪಂದವು ಒಂದರ ಆಧಾರದ ಮೇಲೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಮಾಹಿತಿ ಹರಿದಾಡುತ್ತಿದೆ.

ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಜನಿಸಿದ ನಿತ್ಯಾನಂದ, ಕರ್ನಾಟಕದಲ್ಲಿ ಬೆಂಗಳೂರು ಬಳಿ ಬಿಡದಿಯಲ್ಲಿ ಆಶ್ರಮ ನಡೆಸುತ್ತಿದ್ದರು. ಅವರ ಮೇಲೆ ಮಕ್ಕಳ ಕಳ್ಳತನ, ಲೈಂಗಿಕ ಕಿರುಕುಳ ಮುಂತಾದವುಗಳು ಆರೋಪಗಳು ಕೇಳಿ ಬಂದವು. ಅಲ್ಲದೆ, ನಟಿ ರಂಜಿತಾ ಮತ್ತು ನಿತ್ಯಾನಂದ ಅವರ ಖಾಸಗಿ ವೀಡಿಯೊ ಒಂದನ್ನು ಬಿಡುಗಡೆಯಾಗಿತ್ತು. ದೇಶಾದ್ಯಂತ ಈ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. 

ಇದನ್ನೂ ಓದಿ: Weather Update: ಈ ರಾಜ್ಯಗಳಲ್ಲಿ ಮಿತಿ ಮೀರಿದ ಚಳಿ ಪ್ರಮಾಣ: ಶೂನ್ಯ ಡಿಗ್ರಿ ತಲುಪುವ ಸಾಧ್ಯತೆ

ಅಲ್ಲದೆ, ಬೇರೆ ಬೇರೆ ಪ್ರಕರಣಗಳು, ವಿವಾದಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋದವು. ಬೇರೆ ದಾರಿಯಿಲ್ಲದೆ ನಿತ್ಯಾನಂದ ತಲೆಮರೆಸಿಕೊಂಡವರು. ತಲೆಮರೆಸುವ ಸ್ಥಿತಿಯಲ್ಲಿ ಹೊಸ ದೇಶವನ್ನು ಖರೀದಿಸಿ ಅದಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ. ಅಲ್ಲದೆ, ಕೈಲಾಸ ಹಿಂದೂಗಳ ಪವಿತ್ರ ಭೂಮಿ ಎಂದು ಹೇಳಿಕೊಂಡಿದ್ದರು. ಈ ಕುರಿತ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿವೆ. 

ಕೈಲಾಸವನ್ನು ಅಮೇರಿಕಾ ಅಂಗೀಕರಿಸಿದೆ ಎಂದು ನಿತ್ಯಾನಂದ ಹೇಳಿದರೂ, ಕೈಲಾಸ ಎಲ್ಲಿಯೂ ಇದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಿರುವಾಗ ಕೈಲಾಸ ಅಮೇರಿಕಾ ಅಂಗೀಕಾರಗೊಂಡಿದೆ ಎಂದು ತನ್ನ ಟ್ವಿಟರ್ ಪುಟದಲ್ಲಿ ನಿತ್ಯಾನಂದ ಹೇಳಿದ್ದಾರೆ. ಇನ್ನೂ ಎರಡು ದೇಶಗಳು ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ತಿಳಿಸಿದ್ದಾರೆ. ಆದ್ರೆ ಇಲ್ಲಿ ಎಲ್ಲರಿಗೂ ಕಾಡುತ್ತಿರುವ ವಿಚಾರ ಅಂದ್ರೆ ನಿತ್ಯಾನಂದನ ಕೈಲಾಸ ಎಲ್ಲಿದೆ..? ಯಾತಕ್ಕಾಗಿ ಒಪ್ಪಂದಗಳು ನಡೆಯುತ್ತಿವೆ. ಅಸಲಿಗೆ ನಿತ್ಯಾನಂದ ಅವರು ಎಲ್ಲಿದ್ದಾರೆ ಎನ್ನುವುದೇ ಮಾರ್ಮಿಕ ಪ್ರಶ್ನೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News