ತಮಿಳುನಾಡು: ಕೊಯಮತ್ತೂರು ದಕ್ಷಿಣದಿಂದ ಸ್ಪರ್ಧಿಸಲಿರುವ ಕಮಲ್ ಹಾಸನ್

ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ತಮಿಳು ಚಲನಚಿತ್ರ ನಟ ಮಕ್ಕಲ್ ನೀಧಿ ಮಯಂ ಸ್ಥಾಪಕ ಕಮಲ್ ಹಾಸನ್ ಸ್ಪರ್ಧಿಸಲಿದ್ದಾರೆ.

Last Updated : Mar 12, 2021, 04:14 PM IST
  • ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ತಮಿಳು ಚಲನಚಿತ್ರ ನಟ ಮಕ್ಕಲ್ ನೀಧಿ ಮಯಂ ಸ್ಥಾಪಕ ಕಮಲ್ ಹಾಸನ್ ಸ್ಪರ್ಧಿಸಲಿದ್ದಾರೆ.
  • 'ನಾನು ಐಎಎಸ್ ಅಧಿಕಾರಿಯಾಗಬೇಕು ಮತ್ತು ನಂತರ ರಾಜಕೀಯಕ್ಕೆ ಪ್ರವೇಶಿಸಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಅವರ ಕನಸನ್ನು ನನಸಾಗಿಸಲು ಸಾಧ್ಯವಾಗದಿದ್ದರೂ, ನನ್ನ ಪಕ್ಷವು ಅನೇಕ (ಮಾಜಿ) ಐಎಎಸ್ ಅಧಿಕಾರಿಗಳನ್ನು ಒಳಗೊಂಡಿದೆ. ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ'
ತಮಿಳುನಾಡು: ಕೊಯಮತ್ತೂರು ದಕ್ಷಿಣದಿಂದ ಸ್ಪರ್ಧಿಸಲಿರುವ ಕಮಲ್ ಹಾಸನ್  title=
file photo

ನವದೆಹಲಿ: ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ತಮಿಳು ಚಲನಚಿತ್ರ ನಟ ಮಕ್ಕಲ್ ನೀಧಿ ಮಯಂ ಸ್ಥಾಪಕ ಕಮಲ್ ಹಾಸನ್ ಸ್ಪರ್ಧಿಸಲಿದ್ದಾರೆ.

ತಮ್ಮ ಪಕ್ಷದ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವಾಗ ಕಮಲ್ ಹಾಸನ್ (Kamal Hassan) ಇಂದು ಈ ಘೋಷಣೆ ಮಾಡಿದ್ದಾರೆ. ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಕೊಯಮತ್ತೂರು ದಕ್ಷಿಣ ಸ್ಥಾನವನ್ನು ಎಐಎಡಿಎಂಕೆ ಗೆದ್ದುಕೊಂಡಿತು, ಅಮ್ಮನ್ ಕೆ ಅರ್ಜುನನ್ ಪ್ರಸ್ತುತ ಸ್ಥಾನದಲ್ಲಿದ್ದಾರೆ. ಆದಾಗ್ಯೂ, ಹೊಸ ಸ್ಥಾನ ಹಂಚಿಕೆ ಒಪ್ಪಂದದಡಿಯಲ್ಲಿ, ಆಡಳಿತ ಪಕ್ಷವು ತನ್ನ ಮಿತ್ರ ಪಕ್ಷವಾದ ಬಿಜೆಪಿಗೆ ಸ್ಥಾನವನ್ನು ನೀಡಿತು, ಈ ನಡೆ ಎಐಎಡಿಎಂಕೆ ಕಾರ್ಯಕರ್ತರಿಗೆ ಅಸಮಾಧಾನವನ್ನುಂಟು ಮಾಡಿದೆ.

ಇದನ್ನೂ ಓದಿ: 'ರಜನಿಕಾಂತ್ ಮತ್ತು ಕಮಲ್ ಹಾಸನ್ ಪ್ರಮುಖ ರಾಜಕೀಯ ಪ್ಲೇಯರ್ ಗಳಲ್ಲ'

ತಮ್ಮ ದಿವಂಗತ ತಂದೆಯನ್ನು ನೆನಪಿಸಿಕೊಂಡ ಕಮಲ್ ಹಾಸನ್ ಅವರು ಇಂದು ಕ್ಷೇತ್ರದ ಜನರು ತಮ್ಮ ಅಭಿಪ್ರಾಯಗಳನ್ನು ವಿಧಾನಸಭೆಯಲ್ಲಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. "ನಾನು ಐಎಎಸ್ ಅಧಿಕಾರಿಯಾಗಬೇಕು ಮತ್ತು ನಂತರ ರಾಜಕೀಯಕ್ಕೆ ಪ್ರವೇಶಿಸಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಅವರ ಕನಸನ್ನು ನನಸಾಗಿಸಲು ಸಾಧ್ಯವಾಗದಿದ್ದರೂ, ನನ್ನ ಪಕ್ಷವು ಅನೇಕ (ಮಾಜಿ) ಐಎಎಸ್ ಅಧಿಕಾರಿಗಳನ್ನು ಒಳಗೊಂಡಿದೆ. ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ"ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ತಮಿಳುನಾಡಿನಲ್ಲಿ ರಜನಿಕಾಂತ್ ಜೊತೆ ಕೈ ಜೋಡಿಸುತ್ತಾರಾ ಕಮಲ್ ಹಾಸನ್..?

ನಟ ಶರತ್‌ಕುಮಾರ್‌ರ ಅಖಿಲ ಭಾರತ ಸಮತುವಾ ಮಕ್ಕಲ್ ಕಚ್ಚಿ ಮತ್ತು ಇಂದಿಯಾ ಜನನಾಯಾಗ ಕಚ್ಚಿ ಅವರೊಂದಿಗೆ ಎಂಎನ್‌ಎಂ ಮೈತ್ರಿ ಮಾಡಿಕೊಂಡಿದೆ. ಇದು 2019 ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 4 ಪ್ರತಿಶತದಷ್ಟು ಮತಗಳನ್ನು ಗಳಿಸಿದೆ, ನಗರ ಭಾಗಗಳಲ್ಲಿ ಅದರ ಪಾಲು ಶೇಕಡಾ 10 ರಷ್ಟಿದೆ.

ಜನರು ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಲು ಪಕ್ಷವು ಒಂದು ವಿಶಿಷ್ಟವಾದ ಆನ್‌ಲೈನ್ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ, ಅದರ ನಂತರ ಕಿರುಪಟ್ಟಿ ಪಡೆದವರ ಸಂದರ್ಶನಗಳನ್ನು ಅಂತಿಮವಾಗಿ ಚುನಾವಣೆಯಲ್ಲಿ ಕಣಕ್ಕಿಳಿಸಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News