ಅಫಿಡವಿಟ್ ನಲ್ಲಿ ನಿರುದ್ಯೋಗಿ ಎಂದು ಘೋಷಿಸಿಕೊಂಡ ಕನ್ನಯ್ಯ ಕುಮಾರ್..!

 ಬಿಹಾರದ ಬೆಗುಸಾರೈ ನಿಂದ ಎಡಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಈಗ ನಾಮಪತ್ರ ಸಲ್ಲಿಸುವ ವೇಳೆ ತಮ್ಮನ್ನು ನಿರುದ್ಯೋಗಿ ಎಂದು ಘೋಷಿಸಿಕೊಂಡಿದ್ದಾರೆ.

Last Updated : Apr 10, 2019, 09:17 PM IST
ಅಫಿಡವಿಟ್ ನಲ್ಲಿ ನಿರುದ್ಯೋಗಿ ಎಂದು ಘೋಷಿಸಿಕೊಂಡ ಕನ್ನಯ್ಯ ಕುಮಾರ್..!   title=

ನವದೆಹಲಿ:  ಬಿಹಾರದ ಬೆಗುಸಾರೈ ನಿಂದ ಎಡಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ಈಗ ನಾಮಪತ್ರ ಸಲ್ಲಿಸುವ ವೇಳೆ ತಮ್ಮನ್ನು ನಿರುದ್ಯೋಗಿ ಎಂದು ಘೋಷಿಸಿಕೊಂಡಿದ್ದಾರೆ.

2016 ರಲ್ಲಿ ಜೇನ್ಯು ಪ್ರಕರಣದಲ್ಲಿ ದೇಶವ್ಯಾಪಿ ಖ್ಯಾತಿ ಗಳಿಸಿದ್ದ ಕನ್ನಯ್ಯ ಕುಮಾರ್ ಈಗ ಅಧಿಕೃತವಾಗಿ ಚುನಾವಣಾ ಕಣಕ್ಕೆ ಕಾಲಿಟ್ಟಿದ್ದಾರೆ.ಈಗ ಬೆಗುಸಾರೈನಲ್ಲಿ ಬಿಜೆಪಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಪ್ರಮುಖ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದಾರೆ. ತಮ್ಮ ಆದಾಯವನ್ನು 8.5 ಲಕ್ಷ ಎಂದು ಘೋಷಿಸಿಕೊಂಡಿರುವ ಅವರು ತಮ್ಮನ್ನು ನಿರುದ್ಯೋಗಿ ಎಂದು ಹೇಳಿಕೊಂಡಿದ್ದಾರೆ.ಜೀವನಕ್ಕಾಗಿ ಹಲವಾರು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.ಬಹುತೇಕ ಆದಾಯವು ಬಿಹಾರ್ ಟು ತಿಹಾರ್ ಪುಸ್ತಕದಿಂದ ಬಂದಿದೆ ಎಂದು ಕನ್ನಯ್ಯ ತಿಳಿಸಿದ್ದಾರೆ.

ಈಗ ಕ್ಯಾಶ್ ರೂಪದಲ್ಲಿ 24 ಸಾವಿರ ರೂಪಾಯಿ ಇದ್ದರೆ, ಉಳಿತಾಯ ಖಾತೆಯಲ್ಲಿ 3,57,848 ರೂ ಇದೆ. ಬಿಹಾರದ ಬೆಗುಸರೈ ನಲ್ಲಿರುವ ಪೂರ್ವಜರ ಮನೆ ಎರಡು ಲಕ್ಷ ಬೆಲೆ ಬಾಳುತ್ತದೆ.ಯಾವುದೇ ರೀತಿ ಕೃಷಿ ಭೂಮಿಯನ್ನು ಹೊಂದಿಲ್ಲ ಎಂದು ಕನ್ನಯ್ಯ ಘೋಷಿಸಿಕೊಂಡಿದ್ದಾರೆ.ತಂದೆ ಕೃಷಿಕರಾಗಿದ್ದು ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.
 

Trending News