ATM ಬಳಸುವಾಗ ಇವುಗಳನ್ನು ನೆನಪಿಡಿ; ಇಲ್ಲದಿದ್ರೆ ಖಾಲಿ ಆಗುತ್ತೆ ನಿಮ್ಮ ಖಾತೆ

ಎಟಿಎಂ ವಂಚನೆಗೆ ಸಂಬಂಧಿಸಿದ ಇಂತಹ ಪ್ರಕರಣಗಳು ಬಹುತೇಕ ಇವೆ. ಆದ್ದರಿಂದ ಎಟಿಎಂ ಬಳಸುವಾಗ ಯಾವಾಗಲೂ ಎಚ್ಚರಿಕೆ ವಹಿಸಬೇಕು.

Written by - Yashaswini V | Last Updated : Feb 10, 2020, 10:25 AM IST
ATM  ಬಳಸುವಾಗ ಇವುಗಳನ್ನು ನೆನಪಿಡಿ; ಇಲ್ಲದಿದ್ರೆ ಖಾಲಿ ಆಗುತ್ತೆ ನಿಮ್ಮ ಖಾತೆ title=

ನವದೆಹಲಿ: ಇಂದು ಎಟಿಎಂ ಕಾರ್ಡ್ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆಯಾಗಿದೆ. ಎಟಿಎಂ ಕಾರ್ಡ್ ಮನುಷ್ಯನಿಗೆ ಎಷ್ಟು ಅಗತ್ಯವಿದೆಯೋ, ಅದಕ್ಕೆ ಸಂಬಂಧಿಸಿದ ವಂಚನೆಗಳು ವೇಗವಾಗಿ ಸಂಭವಿಸಲು ಪ್ರಾರಂಭಿಸಿವೆ. ಎಟಿಎಂ ವಂಚನೆಗೆ ಸಂಬಂಧಿಸಿದ ಇಂತಹ ಪ್ರಕರಣಗಳು ಬಹುತೇಕ ಇವೆ. ಆದ್ದರಿಂದ ಎಟಿಎಂ ಬಳಸುವಾಗ ಯಾವಾಗಲೂ ಎಚ್ಚರಿಕೆ ವಹಿಸಬೇಕು.

* ATM ಫ್ರಾಡ್:
ಆಗಾಗ್ಗೆ ಎಟಿಎಂ ವಂಚನೆ ಪ್ರಕರಣಗಳ ಬಗ್ಗೆ ಕೇಳುತ್ತಿರುತ್ತೇವೆ. ಈ ಸಂದರ್ಭದಲ್ಲಿ, ಗ್ರಾಹಕರ ಖಾತೆಗಳಿಂದ ಹೆಚ್ಚಿನ ಹಣವನ್ನು ಹಿಂಪಡೆಯಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಹಜವಾಗಿ ಮೂಡುವ ಪ್ರಶ್ನೆ, ಜನರು ಎಟಿಎಂ ಒಳಗೆ ಮಾಡುವ ತಪ್ಪೇನು? ಆ ಮೂಲಕ ಹ್ಯಾಕರ್‌ಗಳು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಒಂದೇ ಹೊಡೆತದಲ್ಲಿ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ನೀವು ಬ್ಯಾಂಕನ್ನು ದೂಷಿಸಲು ಸಾಧ್ಯವಿಲ್ಲ. ನಿಮ್ಮ ಹಣವನ್ನು ಬ್ಯಾಂಕಿನಲ್ಲಿಯೇ ನೀವು ರಕ್ಷಿಸಿಕೊಳ್ಳಬೇಕು.

* ಎಟಿಎಂ ಬಳಕೆ:
ಎಟಿಎಂ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಸಲಹೆ ನೀಡಿದೆ. ಎಟಿಎಂಗಳಲ್ಲಿ ನೀವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಎಸ್‌ಬಿಐ ಹೇಳಿದೆ. ಬ್ಯಾಂಕ್ ಖಾತೆಯಲ್ಲಿ ಹಣವನ್ನು ಸುರಕ್ಷಿತವಾಗಿಡಲು ಎಟಿಎಂ ಬಳಸುವಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ನಮಗೆ ತಿಳಿಸಿದೆ.

* ಸ್ಕ್ರೀನ್ ಮೇಲೆ Welcome:
ಎಟಿಎಂನಲ್ಲಿ ಪಿನ್ ನಮೂದಿಸುವಾಗ ನಿಮ್ಮ ಸನಿಹದಲ್ಲಿ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ಎಟಿಎಂನಿಂದ ಅಥವಾ ಯಾವುದೇ ರೀತಿಯ ವಹಿವಾಟಿನ ಸಮಯದಲ್ಲಿ ಹಣವನ್ನು ಹಿಂತೆಗೆದುಕೊಳ್ಳುವಾಗ, ಸ್ವಾಗತ(Welcome) ಸಂದೇಶವು ಪರದೆಯ ಮೇಲೆ ಬಂದಿದೆಯೆ ಎಂದು ಮೊದಲು ಪರಿಶೀಲಿಸಿ.

* ಮೊಬೈಲ್ ಫೋನ್‌ನಲ್ಲಿ ಎಸ್‌ಎಂಎಸ್:
ನೀವು ಹಣವನ್ನು ಹಿಂತೆಗೆದುಕೊಂಡಿದ್ದರೆ, ನಿಮ್ಮ ಮೊಬೈಲ್ ಫೋನ್‌ನಲ್ಲಿ ಹಣವನ್ನು ಹಿಂಪಡೆದ SMS ಬಂದಿದೆಯೇ ಎಂದು ಪರಿಶೀಲಿಸಿ. ನೀವು ಎಟಿಎಂನಿಂದ ಹಣವನ್ನು ಹಿಂತೆಗೆದುಕೊಂಡ ತಕ್ಷಣವೇ ಬ್ಯಾಂಕ್ ನಿಮ್ಮ ನೋಂದಾಯಿತ ಫೋನ್ ಸಂಖ್ಯೆಗೆ ಸಂದೇಶವನ್ನು ಕಳುಹಿಸುತ್ತದೆ.

* ಅಪರಿಚಿತರ ಬಗ್ಗೆ ಎಚ್ಚರದಿಂದಿರಿ:
ಎಟಿಎಂ ಬಳಸುವಾಗ ಅಪರಿಚಿತರೊಂದಿಗೆ ಜಾಗರೂಕರಾಗಿರಿ. ಅವರೊಂದಿಗೆ ಮಾತನಾಡಬೇಡಿ. ನಿಮ್ಮ ಖಾತೆಯ ಬಗ್ಗೆ ಯಾರಿಗೂ ಮಾಹಿತಿ ನೀಡಬೇಡಿ. ಎಟಿಎಂ ಬಳಸುವಾಗ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅಲ್ಲಿರುವ ಭದ್ರತಾ ಸಿಬ್ಬಂದಿಯ ಸಹಾಯವನ್ನು ಪಡೆಯಿರಿ.

* ಬ್ಯಾಂಕಿಗೆ ಮಾಹಿತಿ ನೀಡಿ:
ಪಿನ್ ನಮೂದಿಸಿದ ನಂತರ ಮತ್ತು ಎಟಿಎಂನಲ್ಲಿ ಎಲ್ಲಾ ಮಾಹಿತಿಯನ್ನು ನೀಡಿದ ನಂತರವೂ, ನಗದು ಹೊರಬರದಿದ್ದರೆ ಅಥವಾ 'ನಗದು ಇಲ್ಲ' ಎಂಬ ಸಂದೇಶವು ಪರದೆಯ ಮೇಲೆ ಇದ್ದರೆ, ನಂತರ ಬ್ಯಾಂಕಿಗೆ ತಿಳಿಸಿ. ನಿಮ್ಮ ಡೆಬಿಟ್ ಕಾರ್ಡ್ ಅನ್ನು ಹತ್ತಿರದಲ್ಲಿ ನಿಂತಿರುವ ಅಪರಿಚಿತರಿಗೆ ಎಂದಿಗೂ ನೀಡಬೇಡಿ.

* ಪಿನ್ ಬರೆದಿಟ್ಟುಕೊಳ್ಳಬೇಡಿ:
ನಿಮ್ಮ ಪಿನ್ ಅನ್ನು ಎಟಿಎಂ ಅಥವಾ ಡೆಬಿಟ್ ಕಾರ್ಡ್‌ನಲ್ಲಿ ಬರೆಯಬೇಡಿ. ಎಟಿಎಂ ಅಥವಾ ಡೆಬಿಟ್ ಕಾರ್ಡ್‌ನ ಪಿನ್ ಗೌಪ್ಯವಾಗಿರುತ್ತದೆ. ಪಿನ್ ಬಗ್ಗೆ ಬ್ಯಾಂಕ್ ಉದ್ಯೋಗಿಗಳಿಗೆ ಅಥವಾ ಯಾವುದೇ ಅಪರಿಚಿತರಿಗೆ ಹೇಳಬೇಡಿ.

ATM  ಬಳಸುವಾಗ  ಈ ಎಲ್ಲಾ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡರೆ ಸಾಧ್ಯವಾದಷ್ಟು ವಂಚನೆಯಿಂದ ದೂರವಿರಬಹುದು.

Trending News