ಕಿರಣ್ ಬೇಡಿ ಪುಟ್ಬಾಲ್ ಟ್ವೀಟ್ ಗೆ, ಕಾಲೆಳೆದ ಟ್ರೋಲಿಗರು

                     

Updated: Jul 16, 2018 , 05:46 PM IST
ಕಿರಣ್ ಬೇಡಿ ಪುಟ್ಬಾಲ್ ಟ್ವೀಟ್ ಗೆ, ಕಾಲೆಳೆದ ಟ್ರೋಲಿಗರು

ನವದೆಹಲಿ: ಕ್ರೋಷಿಯಾ ವಿರುದ್ದ ಫ್ರಾನ್ಸ್ ತಂಡವು 4-2 ರ ಅಂತರದಲ್ಲಿ ಫಿಫಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಕಿರಣ್ ಬೇಡಿ ಟ್ವೀಟ್ ಮಾಡಿ ಈಗ ಟ್ವಿಟರಿಗರ ಟ್ರೋಲ್ ಗೆ ಗುರಿಯಾಗಿದ್ದಾರೆ. 

ಪುದುಚೆರಿ ಲೆಫ್ಟಿನೆಂಟ್ ಗವರ್ನೆರ್ ಆಗಿರುವ ಕಿರಣ್ ಬೇಡಿ ಪುದುಚೆರಿಗೆ ಇರುವ ಫ್ರೆಂಚ್ ಸಂಬಂಧವನ್ನು ಪ್ರಸ್ತಾಪಿಸುತ್ತಾ ಫ್ರಾನ್ಸ್ ತಂಡದ ಗೆಲುವನ್ನು ಸಂಭ್ರಮಿಸಿದ್ದಾರೆ.ಆದರೆ ಅದಕ್ಕೆ ಅವರನ್ನು ಟ್ವಿಟ್ಟರ್ ನ್ನಲ್ಲಿ ಕಾಲೆಳೆಯಲಾಗಿದೆ.  

ಕಿರಣ್ ಬೇಡಿ ಸುದ್ದಿಗಾರರೊಂದಿಗೆ ಮಾಡುತ್ತಾ " ನೀವು ಪಾಂಡಿಚೆರಿಯನ್ನು ನಿನ್ನೆ ನೋಡಿರಬಹುದು ಪುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಜನರು ಕುಣಿದು ಕುಪ್ಪಳಿಸಿದರು, ಪಾಂಡಿಚೆರಿಯಲ್ಲಿರುವ  ಜನರು ತಮ್ಮ ಫ್ರೆಂಚ್ ಪರಂಪರೆಯ ಬಗ್ಗೆ ಹೆಮ್ಮೆ ಇದೆ. ಇಲ್ಲಿನ ಜನರು ತಮ್ಮನ್ನು ಫ್ರೆಂಚ್ ತಂಡಕ್ಕೆ ಹೋಲಿಸಿ  ತಾವೇ ವಿಶ್ವಕಪ್ ಗೆದ್ದಿರುವಂತೆ ಭಾವಿಸಿದ್ದಾರೆ " ಎಂದು ತಿಳಿಸಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಯೋಗೇಂದ್ರ ಯಾದವ್  ಕಿರಣ್ ಬೇಡಿ  ನ್ಯಾಶನಲಿಸಂ ಏನಾಗಿದೆ ಎಂದು  ವ್ಯಂಗ್ಯವಾಡಿದ್ದಾರೆ.

ಇನ್ನೊಂದೆಡೆ ಟ್ವೀಟ್ ನಲ್ಲಿ ಕಾಲೆಳೆದಿರುವ ಟ್ರೋಲ್ ನಲ್ಲಿ ಒಬ್ಬ " ನಾವು  ಭಾರತೀಯರು ಮೇಡಂ,ನಿಮ್ಮ ಈ ಪಬ್ಲಿಸಿಟಿ ಸ್ಟಂಟ್ ನನ್ನು ನಿಲ್ಲಿಸಿ" ಎಂದು  ಟ್ವೀಟ್ ಮಾಡಿದ್ದಾನೆ.