ನವದೆಹಲಿ: ಚಂಡಿಗಢದ ಬಿಜೆಪಿಯ ಅಭ್ಯರ್ಥಿ ಕಿರಣ್ ಖೇರ್ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡಿದ್ದಕ್ಕಾಗಿ ಈಗ ಚುನಾವಣಾ ಆಯೋಗದ ಕ್ಷಮೆಯಾಚಿಸಿದ್ದಾರೆ.
ಈ ವೀಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡ ನಂತರ ಚುನಾವಣಾ ಆಯೋಗ ಅವರಿಗೆ 24 ಗಂಟೆಗಳ ಒಳಗೆ ಉತ್ತರಿಸಲು ನೋಟಿಸ್ ಜಾರಿ ಮಾಡಿತ್ತು.ಈ ಹಿನ್ನಲೆಯಲ್ಲಿ ಅವರು ಕ್ಷಮೆಯಾಚಿಸಿದ್ದಾರೆ. "ಏನೆಲ್ಲಾ ಇದುವರೆಗೆ ಸಂಭವಿಸಿದೆ ಅದು ತಪ್ಪು, ಯಾರೋ ನಮಗೆ ಅದನ್ನು ಶೇರ್ ಮಾಡಿದರು. ಅದನ್ನೇ ನಮ್ಮ ತಂಡವು ಮರು ಹಂಚಿಕೊಂಡು ನಂತರ ಅದನ್ನು ಅಳಿಸಿ ಹಾಕಿದೆ, ಈ ರೀತಿ ನಡೆಯಬಾರದಾಗಿತ್ತು, ಆದರೆ ಇದಕ್ಕೆ ಕ್ಷಮೆ ಕೋರುತ್ತೇನೆ" ಎಂದು ತಿಳಿಸಿದ್ದಾರೆ.
Kirron Kher, BJP Chandigarh candidate: Whatever happened was wrong, that children were used. Somebody sent it to us, my team shared it and later deleted it, very sorry, it happened, it should not have happened. https://t.co/AFo6jlndAD
— ANI (@ANI) May 4, 2019
ಈಗ ಅಳಿಸಲಾಗಿರುವ ವೀಡಿಯೋವೊಂದರಲ್ಲಿ ಮಕ್ಕಳು ಪ್ರಚಾರದಲ್ಲಿ ಭಾಗಿಯಾಗಿ ಘೋಷಣೆ ಕೂಗುತ್ತಾ ಮತಯಾಚಿಸುತ್ತಿದ್ದಾರೆ. ಇದಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿ ಮಕ್ಕಳನ್ನು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ಗಮನ ಸೆಳೆದಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ಕಿರಣ್ ಖೇರ್ ಅವರಿಗೆ ನೋಟಿಸ್ ಜಾರಿ ಮಾಡಿ 24 ಘಂಟೆಗಳ ಒಳಗೆ ಉತ್ತರಿಸುವಂತೆ ಸೂಚನೆ ನೀಡಿತ್ತು.
ಕಿರಣ್ ಖೇರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಪವನ್ ಕುಮಾರ್ ಬನ್ಸಾಲ್ ವಿರುದ್ಧ ಚಂಡೀಗಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.