ಮೇವು ಹಗರಣದಲ್ಲಿ ಲಾಲು ಆರೋಪಿ ಎಂದು ತೀರ್ಪು ನೀಡಿದ ಸಿಬಿಐ ನ್ಯಾಯಾಲಯ

      

Last Updated : Dec 23, 2017, 05:08 PM IST
  • ಮೇವು ಹಗರಣಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳಲ್ಲಿ ಬಿಹಾರದ ಮಾಜಿ ಲಾಲು ಪ್ರಸಾದರವರನ್ನು ಆರೋಪಿ ಎಂದು ಪ್ರಕರಣ ದಾಖಲಿಸಲಾಗಿತ್ತು.
  • ಈ ಪ್ರಕರಣವನ್ನು ಸಿಬಿಐ 1996 ರಲ್ಲಿ ಮೊದಲ ಬಾರಿಗೆ ತನಿಖೆ ಆರಂಭಿಸಿತು.
  • ಜಾನುವಾರುಗಳಿಗೆ ಮೇವು ಖರೀದಿ ಮಾಡುವ ನಿಮಿತ್ತ ಹಣವನ್ನು ದುರುಪಯೋಗ ಪಡಿಸಿಕೊಂದಿದ್ದಕ್ಕಾಗಿ ಲಾಲು ಪ್ರಸಾದ್ ರವರ ಮೇಲೆ 50 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದನ್ನು ನಾವು ಗಮನಿಸಬಹುದು.
ಮೇವು ಹಗರಣದಲ್ಲಿ ಲಾಲು ಆರೋಪಿ ಎಂದು ತೀರ್ಪು ನೀಡಿದ ಸಿಬಿಐ ನ್ಯಾಯಾಲಯ  title=

ಪಾಟ್ನಾ: ಮಾಜಿ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ರಣಜಿ ವಿಶೇಷ ಸಿಬಿಐ ನ್ಯಾಯಾಲಯವು ಮೇವು ಹಗರಣದಲ್ಲಿ ಶನಿವಾರ ಆರೋಪಿ ಎಂದು ತೀರ್ಪು ನೀಡಿದೆ.ಇದೆ ಜನವರಿ 3, 2018 ರಂದು ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಿದೆ.

ಈ ಸಿಬಿಐ ತೀರ್ಪಿನ ನಂತರ ಪೊಲೀಸರು ಲಾಲು ಪ್ರಸಾದ ಯಾದವರನ್ನು ತಕ್ಷಣ ಬಂಧಿಸಿದರು. ವಿಶೇಷ ಸಿಬಿಐ ನ್ಯಾಯಾಧೀಶ ಶಿವಪಾಲ್ ಸಿಂಗ್ ರವರು ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಮತ್ತು ಇತರ ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ಆದಾಗ್ಯೂ, ಹದಿನಾಲ್ಕು ಜನರನ್ನು  ನ್ಯಾಯಾಲಯವು ತಪ್ಪಿತಸ್ಥರೆಂದು ಹೇಳಿದೆ. ಈ ಪ್ರಕರಣವು ದಿಯೋಘರ್ ಜಿಲ್ಲೆಯ ಖಜಾನೆಯಿಂದ 84.5 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದ ಕುರಿತಾಗಿತ್ತು ಎಂದು ತಿಳಿದು ಬಂದಿದೆ.

ಅಕ್ಟೋಬರ್ 2013 ರಲ್ಲಿ, ಮೇವು ಹಗರಣ ಪ್ರಕರಣದಲ್ಲಿ ಮೊದಲ ಬಾರಿಗೆ ಶಿಕ್ಷೆ ವಿಧಿಸಿದಾಗ, ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿರುವುದಕ್ಕೆ ಮುಂಚಿತವಾಗಿ ಲಾಲು  ಎರಡು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಈ ಹಗರಣದ ಬಗ್ಗೆ ಲಾಲುಗೆ ತಿಳಿದಿದ್ದರೂ ಕೂಡಾ ಪ್ರಜ್ಞಾಪೂರಕವಾಗಿ ಲೂಟಿ ಮುಂದುವರಿಸಲು ಅವಕಾಶ ನೀಡಿದ್ದರು ಎಂದು  ಸಿಬಿಐ ಆರೋಪಿಸಿದೆ. ಈ ಮೇವು ಹಗರಣದ ಪ್ರಕರಣದ ವಿಚಾರಣೆಯು ಡಿಸೆಂಬರ್ 13 ರಂದು ಮುಕ್ತಾಯವಾಗಿತ್ತು. ಆದರೆ ಮತ್ತು ಎಲ್ಲ ಆರೋಪಿಗಳನ್ನು ಅಂತಿಮ ತೀರ್ಪಿನ ಸಂದರ್ಭದಲ್ಲಿ  ಹಾಜರಾಗಲು ನ್ಯಾಯಾಲಯ ಆಜ್ಞೆ ವಿಧಿಸಿತ್ತು. 

ಮೇವು ಹಗರಣಕ್ಕೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳಲ್ಲಿ  ಬಿಹಾರದ ಮಾಜಿ  ಲಾಲು ಪ್ರಸಾದ ರವರನ್ನು ಎಂದು ಪ್ರಕರಣ ದಾಖಲಿಸಲಾಗಿತ್ತು , ಈ ಪ್ರಕರಣವನ್ನು ಸಿಬಿಐ 1996 ರಲ್ಲಿ ಮೊದಲ ಬಾರಿಗೆ ತನಿಖೆ ಆರಂಭಿಸಿತು. ಜಾನುವಾರುಗಳಿಗೆ ಮೇವು ಖರೀದಿ ಮಾಡುವ ನಿಮಿತ್ತ ಹಣವನ್ನು ದುರುಪಯೋಗ ಪಡಿಸಿಕೊಂದಿದ್ದಕ್ಕಾಗಿ  ಲಾಲು ಪ್ರಸಾದ್ ರವರ ಮೇಲೆ  50 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದನ್ನು ನಾವು ಗಮನಿಸಬಹುದು. 

Trending News