Aadhaar-PAN Card: ಮಾ.31ರೊಳಗೆ ಪ್ಯಾನ್ 'ಕಾರ್ಡ್ ಗೆ ಆಧಾರ್' ಜೋಡಿಸದಿದ್ದರೆ ಏನೆಲ್ಲ ಪ್ರಾಬ್ಲಮ್ ಗೊತ್ತ?

ಒಂದು ವೇಳೆ ಈ ಎರಡೂ ಸಂಖ್ಯೆಗಳ ಜೋಡಣೆ ಮಾಡದೆ ಹೋದರೆ ನೀವು 1,000 ರೂ.ವರೆಗೂ ದಂಡ

Last Updated : Mar 25, 2021, 05:14 PM IST
  • ಆಧಾರ್ ಸಂಖ್ಯೆಯೊಂದಿಗೆ ಕಾಯಂ ಖಾತೆ ಸಂಖ್ಯೆಯನ್ನು (Pan) ಜೋಡಿಸುವ ಗಡುವು ಹಲವು ಬಾರಿ ವಿಸ್ತರಣೆಯಾದ ಬಳಿಕ ಇದೇ ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತಿದೆ.
  • ಒಂದು ವೇಳೆ ಈ ಎರಡೂ ಸಂಖ್ಯೆಗಳ ಜೋಡಣೆ ಮಾಡದೆ ಹೋದರೆ ನೀವು 1,000 ರೂ.ವರೆಗೂ ದಂಡ
  • ನಿಮ್ಮ ಪ್ಯಾನ್ ಸಂಖ್ಯೆ ಅಮಾನ್ಯಗೊಳ್ಳಬಹುದು
Aadhaar-PAN Card: ಮಾ.31ರೊಳಗೆ ಪ್ಯಾನ್ 'ಕಾರ್ಡ್ ಗೆ ಆಧಾರ್' ಜೋಡಿಸದಿದ್ದರೆ ಏನೆಲ್ಲ ಪ್ರಾಬ್ಲಮ್ ಗೊತ್ತ? title=

ನವದೆಹಲಿ: ಆಧಾರ್ ಸಂಖ್ಯೆಯೊಂದಿಗೆ ಕಾಯಂ ಖಾತೆ ಸಂಖ್ಯೆಯನ್ನು (Pan) ಜೋಡಿಸುವ ಗಡುವು ಹಲವು ಬಾರಿ ವಿಸ್ತರಣೆಯಾದ ಬಳಿಕ ಇದೇ ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತಿದೆ. ಒಂದು ವೇಳೆ ಈ ಎರಡೂ ಸಂಖ್ಯೆಗಳ ಜೋಡಣೆ ಮಾಡದೆ ಹೋದರೆ ನೀವು 1,000 ರೂ.ವರೆಗೂ ದಂಡಕ್ಕೆ ಒಳಗಾಗಬಹುದು ಮತ್ತು ನಿಮ್ಮ ಪ್ಯಾನ್ ಸಂಖ್ಯೆ ಅಮಾನ್ಯಗೊಳ್ಳಬಹುದು.

ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆಗೊಂಡ ಹಣಕಾಸು ಮಸೂದೆ 2021(Finance Commission)ರಲ್ಲಿನ ಹೊಸ ತಿದ್ದುಪಡಿಯಲ್ಲಿ ಈ ನಿಯಮ ಅಳವಡಿಸಲಾಗಿದೆ. ಹಣಕಾಸು ಮಸೂದೆ 2021ಅನ್ನು ಅಂಗೀಕರಿಸುವಾಗ ಸರ್ಕಾರವು 1961ರ ಆದಾಯ ತೆರಿಗೆ ಕಾಯ್ದೆಗೆ ಹೊಸ ಸೆಕ್ಷನ್ (ಸೆಕ್ಷನ್ 234ಎಚ್) ಅಳವಡಿಸಿದೆ. ಇದರ ಪ್ರಕಾರ 2021ರ ಮಾರ್ಚ್ 31ರ ಒಳಗೆ ಪ್ಯಾನ್‌ಅನ್ನು ಆಧಾರ್ ಜತೆ ಜೋಡಣೆ ಮಾಡದ ಜನರಿಗೆ ದಂಡ ವಿಧಿಸಬಹುದು.

SBI Alert : ಮೋಸದ ಜಾಲವಿದೆ ಹಣದ ಆಸೆಗೆ ಮರುಳಾಗಬೇಡಿ..!

ಪಿಎಫ್‌ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ? ದಂಡವಲ್ಲದೆ, ವ್ಯಕ್ತಿಯ ಪ್ಯಾನ್(PAN) ನಿಷ್ಕ್ರಿಯಗೊಳ್ಳಲಿದೆ. ಅಂತಹ ಸಂದರ್ಭದಲ್ಲಿ ವ್ಯಕ್ತಿಗಳು ತಮ್ಮ ಪ್ಯಾನ್ ಅಗತ್ಯವಿರುವ ಕಡೆಗಳಲ್ಲಿ ಪ್ಯಾನ್ ಸಂಖ್ಯೆ ಉಲ್ಲೇಖಿಸಿ ಹಣಕಾಸು ವ್ಯವಹಾರ ನಡೆಸುವುದು ಸಾಧ್ಯವಾಗುವುದಿಲ್ಲ. ಪ್ಯಾನ್-ಆಧಾರ್ ಜೋಡಣೆಯಲ್ಲಿ ವಿಫಲವಾದರೆ ವಿಧಿಸುವ ದಂಡ 1,000 ರೂ.ಗಿಂತ ಕಡಿಮೆ ಇರಬಹುದು. ಆದರೆ ಅದಕ್ಕಿಂತ ಹೆಚ್ಚಿರಲು ಸಾಧ್ಯವಿಲ್ಲ. ನಿರ್ದಿಷ್ಟ ಗಡುವಿನ ಅವಧಿಯಲ್ಲಿ ಪ್ಯಾನ್- ಆಧಾರ್ ಜೋಡಿಸಲು ವಿಫಲವಾದ ವ್ಯಕ್ತಿಗಳಿಗೆ ಅದಕ್ಕೆ ಅನುಗುಣವಾಗಿ ದಂಡ ವಿಧಿಸಲಾಗುತ್ತದೆ.

Tax Saving: 'ತೆರಿಗೆ ಉಳಿಸಲು' ಉದ್ಯೋಗಿಗಳಿಗೆ ತಿಳಿದಿರಲೆಬೇಕು ಈ ಸಂಗತಿಗಳನ್ನ!

ಈ ಎರಡೂ ಕಾರ್ಡ್‌ಗಳ ಜೋಡಣೆಗೆ ಸರ್ಕಾರ(Government) ಅನೇಕ ಬಾರಿ ಗಡುವುಗಳನ್ನು ವಿಸ್ತರಿಸಿತ್ತು. ಆದರೆ ಈ ಬಾರಿ ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲ. ಜತೆಗೆ ಪ್ರಕ್ರಿಯೆ ಪೂರ್ಣಗೊಳಿಸದವರಿಗೆ ದಂಡ ವಿಧಿಸಲು ಬಯಸಿದೆ.

ಕಡಿಮೆ ಬಡ್ಡಿ ದರದಲ್ಲಿ Personal Loan ನೀಡುತ್ತಿದೆ ಈ ಬ್ಯಾಂಕ್ ಗಳು

ಪ್ಯಾನ್ ಅಮಾನ್ಯಗೊಂಡರೆ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್(IT Returns) ಸಲ್ಲಿಸಲು ಸಹ ಸಾಧ್ಯವಾಗುವುದಿಲ್ಲ. ಅಲ್ಲದೆ, ಅದನ್ನು ಮಾಡದ ಕಾರಣಕ್ಕೆ ಭಾರಿ ದಂಡ ಎದುರಿಸಬೇಕಾಗುತ್ತದೆ. ನಿಷ್ಕ್ರಿಯ ಪ್ಯಾನ್ ಟಿಡಿಎಸ್‌ನಲ್ಲಿ ಅಧಿಕ ಪ್ರಮಾಣದ ಕಡಿತಕ್ಕೆ ಕಾರಣವಾಗಲಿದೆ. ಆದಾಯ ತೆರಿಗೆ ಕಾಯ್ದೆ ಪ್ರಕಾರ ಪ್ಯಾನ್ ನೀಡದವರು ಅಥವಾ ನಿಷ್ಕ್ರಿಯ ಪ್ಯಾನ್ ನೀಡುವವರು ಅಧಿಕ ಟಿಡಿಎಸ್ ಅಥವಾ ಟಿಸಿಎಸ್ ವಿಧಿಸಲಾಗುತ್ತದೆ.

LPG Gas Cylinder: 819 ರೂ. ಗ್ಯಾಸ್ ಸಿಲಿಂಡರ್ ಅನ್ನು 119 ರೂ.ಗೆ ಖರೀದಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News