UP Madrasa Weekly Holiday: ಉತ್ತರ ಪ್ರದೇಶ ಸರ್ಕಾರವು ಮದರಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಅನೇಕ ನಿಯಮಗಳನ್ನು ಬದಲಾಯಿಸಿದೆ. ಲಕ್ನೋದಲ್ಲಿ ನಡೆದ ಮದರಸಾ ಮಂಡಳಿ ಸಭೆಯಲ್ಲಿ ಎಲ್ಲಾ ಮದರಸಾಗಳ ವಾರದ ರಜೆಯನ್ನು ಬದಲಾಯಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಲ್ಲದೇ ಮದರಸಾಗಳಲ್ಲೂ ಸಮವಸ್ತ್ರ ಧರಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Viral News: ₹400 ದುಡಿಯುವ ದಿನಗೂಲಿಗೆ 14 ಕೋಟಿ ತೆರಿಗೆ ಕಟ್ಟುವಂತೆ ಐಟಿ ಅಧಿಕಾರಿಗಳ ನೋಟಿಸ್!
ಶುಕ್ರವಾರದ ಬದಲು ಭಾನುವಾರ ರಜೆ:
ಮದರಸಾ ಮಂಡಳಿಯ ಅಧ್ಯಕ್ಷ ಇಫ್ತಿಕಾರ್ ಅಹಮದ್ ಜಾವೇದ್ ಅವರು ಈ ಸಭೆ ಕರೆದಿದ್ದು, ವಾರದ ರಜೆಯಲ್ಲಿ ಬದಲಾವಣೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗ ಯುಪಿಯ ಮದರಸಾಗಳಲ್ಲಿ ಶುಕ್ರವಾರ ರಜೆ ಇರುವುದಿಲ್ಲ. ಅದರ ಬದಲಿಗೆ ಭಾನುವಾರದಂದು ಮದರಸಾಗಳಿಗೆ ರಜೆ ಇರುತ್ತದೆ. ಈ ಆದೇಶವು ಯುಪಿಯ ಎಲ್ಲಾ ಅನುದಾನಿತ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಮದರಸಾಗಳಲ್ಲಿ ಅನ್ವಯಿಸುತ್ತದೆ ಎಂದು ಹೇಳಲಾಗಿದೆ
ಇದನ್ನೂ ಓದಿ: ಕೊರೊನಾ ಮತ್ತೆ ಮರಳುತ್ತಿದೆಯೇ? 5 ದೇಶಗಳಲ್ಲಿ ವೈರಸ್ ಹಾವಳಿಯಿಂದ ಭಾರತದಲ್ಲಿ ಹೈ ಅಲರ್ಟ್!
ಮದರಸಾಗಳಲ್ಲಿ ಬೆಳೆಯುವ ಮಕ್ಕಳಿಗೆ ಡ್ರೆಸ್ ಕೋಡ್:
ಇನ್ನು ಉತ್ತರ ಪ್ರದೇಶದ ಮದರಸಾಗಳಲ್ಲಿಯೂ ಸಮವಸ್ತ್ರ ಇರಲಿದೆ. ಉತ್ತರ ಪ್ರದೇಶ ಮದರಸಾ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಡಾ. ಇಫ್ತೆಕರ್ ಅಹಮದ್ ಜಾವೇದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ಮದರಸಾಗಳಲ್ಲಿ ವಸ್ತ್ರ ಸಂಹಿತೆ ಅನ್ವಯವಾಗುವಂತೆ ನಿರ್ಣಯ ಕೈಗೊಳ್ಳಲಾಯಿತು. ಇದಲ್ಲದೇ ಅರೇಬಿಕ್-ಪರ್ಷಿಯನ್ ಪರೀಕ್ಷೆಗಳ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕವೂ ಜಮಾ ಮಾಡಲು ವ್ಯವಸ್ಥೆ ಮಾಡಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.