`ರಾತ್ರಿ ಊಟ'ಕ್ಕೆ ನೇರ ಹೊಟೇಲಿಗೆ ಬಂದ `ಸಿಂಹಿಣಿ'..! ಸಿಸಿಟಿವಿಯಲ್ಲಿ ಎದೆ ಝಲ್ಲೆನಿಸುವ ದೃಶ್ಯ.!

ಇದೊಂದು ದಿಗಿಲು ಹುಟ್ಟಿಸುವ ದೃಶ್ಯ. ದಟ್ಟ ಕಾಡಿನಲ್ಲಿ ಇರಬೇಕಾದ ಸಿಂಹಿಣಿ (Lioness) ಒಂದು ಮುಂಜಾನೆ 5 ಗಂಟೆಗೆ ಆಹಾರ ಹುಡುಕುತ್ತಾ ವಾಕಿಂಗ್ ಹೊರಟಿದೆ. 

Written by - Ranjitha R K | Last Updated : Feb 11, 2021, 10:05 AM IST
  • ಮುಂಜಾನೆ 5 ಗಂಟೆಗೆ ಹೊಟೇಲಿಗೆ ನುಗ್ಗಿದ ಸಿಂಹಿಣಿ
  • ಹೊಟೇಲ್ ಪರಿಸರದಲ್ಲಿ ಮುಂಜಾನೆ `ಸಿಂಹಿಣಿ ಸಂಚಾರ'
  • ಸಿಸಿಟಿವಿ ದೃಶ್ಯ ನೋಡಿ ದಿಗಿಲುಗೊಂಡ ಹೊಟೇಲ್ ಸಿಬ್ಬಂದಿ.
`ರಾತ್ರಿ ಊಟ'ಕ್ಕೆ ನೇರ ಹೊಟೇಲಿಗೆ ಬಂದ `ಸಿಂಹಿಣಿ'..! ಸಿಸಿಟಿವಿಯಲ್ಲಿ ಎದೆ ಝಲ್ಲೆನಿಸುವ ದೃಶ್ಯ.! title=
ಮುಂಜಾನೆ 5 ಗಂಟೆಗೆ ಹೊಟೇಲಿಗೆ ನುಗ್ಗಿದ ಸಿಂಹಿಣಿ (photo ANI)

ಜುನಾಗಢ : ಇದೊಂದು ದಿಗಿಲು ಹುಟ್ಟಿಸುವ ದೃಶ್ಯ. ದಟ್ಟ ಕಾಡಿನಲ್ಲಿ ಇರಬೇಕಾದ ಸಿಂಹಿಣಿ (Lioness) ಒಂದು ಮುಂಜಾನೆ 5 ಗಂಟೆಗೆ ಆಹಾರ ಹುಡುಕುತ್ತಾ ವಾಕಿಂಗ್ ಹೊರಟಿದೆ. ವಾಕಿಂಗ್ ಹೊತ್ತಿಗೆ ದಾರಿ ತಪ್ಪಿದೆಯೋ, ಅಥವಾ ಹೊಟ್ಟೆಯ ತಾಪ ಹೆಚ್ಚಾಗಿತ್ತೋ ಗೊತ್ತಿಲ್ಲ.  ಏಕಾಂಗಿ ಸಿಂಹಿಣಿ ಬಂದು ಸೇರಿದ್ದು ಸೀದಾ ಹೊಟೇಲ್ (Hotel) ಪರಿಸರಕ್ಕೆ.  ಈ ಸಿಂಹಿಣಿ ಯಾಕಾಗಿ ಜನವಸತಿಯ ಪ್ರದೇಶಕ್ಕೆ ಬಂತೋ..ಗೊತ್ತಿಲ್ಲ. 

ಮುಂಜಾನೆ 5 ಗಂಟೆಗೆ ಯಾರೋ ಗೇಟ್ ಮೇಲೆ ಹಾರಿದ ಸದ್ದು.!
ಹಸಿದ ಸಿಂಹಿಣಿಯೊಂದು ಹೊಟೇಲ್ (Hotel) ಪರಿಸರದಲ್ಲಿ ವಾಕ್ ಮಾಡುತ್ತಿರುವ ಮಾಹಿತಿ ಅಲ್ಲಿನ ಸಿಬ್ಬಂದಿಗೆ ಇರಲೇ ಇಲ್ಲ. ಬೆಳಗ್ಗಿನ ಹೊತ್ತು ಮುಖ್ಯದ್ವಾರದ ಬಳಿ ಯಾರೋ ಛಂಗನೇ ಜಿಗಿದ ಸದ್ದಾಯಿತು. ಕೂಡಲೇ ಎಚ್ಚೆತ್ತ ಸೆಕ್ಯೂರಿಟಿ ಸಿಬ್ಬಂದಿ ಕ್ಯಾಬಿನ್ನಿಂದ ಹೊರಗೆ ಓಡಿ ಬಂದು ನೋಡಿದ್ದೇನು..? ಹೊಟೇಲ್ ಮೈನ್ ಗೇಟ್ ಮೇಲಿಂದ ಹೊರಗೆ ಜಿಗಿದ ಸಿಂಹಿಣಿ (Lion) ರಾಣಿಯಂತೆ ರಸ್ತೆ ಕ್ರಾಸ್ ಮಾಡುತ್ತಿದೆ. ಸಿಬ್ಬಂದಿ ಜೀವ ಕೈಗೆ ಬಂದಿದೆ. ವನರಾಣಿ ಹೊಟೇಲ್ ಪರಿಸರ ಸೇರಿದ ಮಾಹಿತಿ ಸಿಬ್ಬಂದಿಗೆ ಅರ್ಥವಾಗಿದ್ದು ಆಗಲೇ. 

ಇದನ್ನೂ ಓದಿ : FasTag : NHAI ನಿಯಮದಲ್ಲಿ ಬದಲಾವಣೆ; Minimum ಬಾಲೆನ್ಸ್ ಬಗ್ಗೆ ಇನ್ನು ಚಿಂತೆ ಬಿಟ್ಟು ಬಿಡಿ

ಸಿಸಿಟಿವಿಯಲ್ಲಿತ್ತು ಎದೆ ಝಲ್ಲೆನಿಸುವ ದೃಶ್ಯ.!
ಸಿಂಹಿಣಿ ಸಂಚಾರ ನೋಡಿದ ಸೆಕ್ಯೂರಿಟಿ ಗಾರ್ಡ್ (Security guard)  ಕೂಡಲೇ ಎಲ್ಲರನ್ನೂ ಅಲರ್ಟ್ ಮಾಡಿದ್ದಾರೆ. ಹೊಟೆಲ್ ಪರಿಸರದ ಒಳಗೆ ಮತ್ತೇನಾದರೂ ಸಿಂಹಗಳು ಇರಬಹುದಾ ಎಂದು ಸಿಸಿಟಿವಿ (CCTV)ಇರುವ ರೂಮಿಗೆ ಎಲ್ಲರೂ ಓಡಿದ್ದಾರೆ. ಸಿಸಿಟಿವಿ ದೃಶ್ಯ ದಿಗಿಲು ಹುಟ್ಟಿಸುತ್ತಿತ್ತು.

 

ಮುಖ್ಯ ದ್ವಾರದಿಂದಲೇ ಬಂದಿತ್ತು ಸಿಂಹಿಣಿ.!
ಬೆಳಗ್ಗೆ 5.04 ಗಂಟೆಗೆ ಮುಖ್ಯದ್ವಾರದಿಂದಲೇ ಜಿಗಿದು ಒಳಗೆ ಪ್ರವೇಶಿಸಿದೆ ಸಿಂಹಿಣಿ. ಸುಮಾರು ಒಂದು ನಿಮಿಷ ಹೊಟೇಲ್ ಆವರಣದಲ್ಲಿ ಠಳಾಯಿಸಿದೆ. ಹೊಟೇಲ್ ಪೋರ್ಟಿಕೋಗೆ ಒಂದು ಸುತ್ತು ಹಾಕಿದೆ. ಪಾರ್ಕಿಂಗ್ (Parking) ಏರಿಯಾಗೂ ಬಂದಿದೆ. ಕಾರುಗಳ ಮಧ್ಯೆ ಏನನ್ನೋ ಹುಡುಕಿದೆ. ಕೊನೆಗೆ ಏನೂ ಸಿಗದೇ ಬಂದ ದಾರಿಯಲ್ಲೇ ಹಿಂತಿರುಗಿದೆ. ಮೈನ್ ಗೇಟ್ ಬಳಿ ಬಂದು ಛಂಗನೇ ಹೊರಕ್ಕೆ ಜಿಗಿದಿದೆ. ಆ ಶಬ್ದ ಕೇಳಿದ ರಕ್ಷಣಾ ಸಿಬ್ಬಂದಿ ಆಲರ್ಟ್ ಆಗಿದೆ. ಒಂದು ನಿಮಿಷದಲ್ಲಿ ಇಷ್ಟೆಲ್ಲಾ ಆಗಿದೆ. 

ಇದನ್ನೂ ಓದಿ : NEET ಪರೀಕ್ಷೆಯಲ್ಲಿ ಫೆಲಾದ್ರೆ ಚಿಂತೆ ಬೇಡ, ಪ್ರಕಟಗೊಂಡಿದೆ Supreme Court ಮಹತ್ವದ ತೀರ್ಪು

60 ಕಿ.ಮಿ ದೂರದಲ್ಲಿದೆ ಗಿರ್ ಸಿಂಹಧಾಮ : 
ಜುನಾಗಢ ಏಷ್ಯಾಟಿಕ್ ಸಿಂಹಗಳ (Asiatic Lion) ನೆಲೆ. ಇಲ್ಲಿಂದ ಸುಮಾರು 60 ಕಿ.ಮಿ. ದೂರದಲ್ಲಿದೆ ಗಿರ್ ಅಭಯಾರಣ್ಯ (Gir National Park). ಭಾರತದಲ್ಲಿ ಸಿಂಹಗಳಿರುವುದು ಇದೇ ಗಿರ್ ಅಭಯಾರಣ್ಯದಲ್ಲಿ. ಇದೊಂದು ಪ್ರವಾಸಿತಾಣವೂ ಹೌದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News