List of Dry Days in 2020: ಮದ್ಯ ಪ್ರೀಯರಿಗೊಂದು ಉಪಯುಕ್ತ ಮಾಹಿತಿ

ಪ್ರತಿ ವರ್ಷದಂತೆ 2020ರಲ್ಲಿಯೂ ಕೂಡ ಇಂತಹ ಹಲವು ದಿನಗಳಿದ್ದು, ಈ ದಿನಗಳಂದು ಸಾರಾಯಿ ಅಂಗಡಿ, ಮುಂಗಟ್ಟುಗಳು ಬಂದ್ ಇರಲಿವೆ. 

Written by - Nitin Tabib | Last Updated : Dec 25, 2019, 07:16 PM IST
List of Dry Days in 2020: ಮದ್ಯ ಪ್ರೀಯರಿಗೊಂದು ಉಪಯುಕ್ತ ಮಾಹಿತಿ title=

ನವದೆಹಲಿ: ಒಂದು ಕ್ಯಾಲೆಂಡರ್ ವರ್ಷದಲ್ಲಿ ಸಾರಾಯಿ ಅಂಗಡಿಗಳು ಬಂದ್ ಇರುವ ದಿನಗಳನ್ನು ಡ್ರೈ ಡೇಸ್ ಎಂದು ಹೇಳಲಾಗುತ್ತದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಪ್ರಮುಖ ಹಬ್ಬ ಹಾಗೂ ರಾಷ್ಟ್ರೀಯ ದಿನಾಚರಣೆಯ ವೇಳೆ ಇರುತ್ತವೆ. ಜನರ ಧಾರ್ಮಿಕ ಹಾಗೂ ದೇಶಭಕ್ತಿಯನ್ನು ಗೌರವಿಸಲು ರಾಜ್ಯ ಸರ್ಕಾರಗಳು ಈ ದಿನಗಳನ್ನು ಡ್ರೈಡೇಸ್ ಆಗಿ ಘೋಷಣೆ ಮಾಡುತ್ತವೆ. ಭಾರತದಲ್ಲಿನ ಅಲ್ಕೋಹಾಲ್ ಕಾನೂನಿನ ಪ್ರಕಾರ ಅಬಕಾರಿ ವಿಭಾಗ ಮುಂಚಿತವಾಗಿಯೇ ಈ ದಿನಗಳ ಪಟ್ಟಿ ಸಿದ್ಧಪಡಿಸಿ ಬಿಡುಗಡೆಗೊಳಿಸುತ್ತದೆ.

ಪ್ರತಿ ವರ್ಷದಂತೆ 2020ರಲ್ಲಿಯೂ ಕೂಡ ಇಂತಹ ಹಲವು ದಿನಗಳಿದ್ದು, ಈ ದಿನಗಳಂದು ಸಾರಾಯಿ ಅಂಗಡಿ, ಮುಂಗಟ್ಟುಗಳು ಬಂದ್ ಇರಲಿವೆ. ಒಂದು ವೇಳೆ ನಿಮಗೆ ಈ ಡ್ರೈಡೇಸ್ ಗಳ ಕುರಿತು ಮುಂಚಿತವಾಗಿಯೇ ಮಾಹಿತಿ ಇದ್ದರೆ, ನೀವು ಪಾರ್ಟಿಗಳಿಗಾಗಿ ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳಬಹುದು. ಹೀಗಾಗಿ ನಾವು 2020ನೇ ಸಾಲಿನ ಒಟ್ಟು ಡ್ರೈಡೇಸ್ ಗಳ ಪಟ್ಟಿಯನ್ನು ನಿಮಗಾಗಿಯೇ ಇಲ್ಲಿ ಪ್ರಕಟಿಸುತ್ತಿದ್ದೇವೆ.

15 ಜನವರಿ- ಮಕರ ಸಂಕ್ರಾಂತಿ
26 ಜನವರಿ-ಗಣರಾಜ್ಯೋತ್ಸವ
30 ಜನವರಿ-ಮಹಾತ್ಮಾ ಗಾಂಧಿ ಪುಣ್ಯತಿಥಿ
10 ಫೆಬ್ರುವರಿ-ಸ್ವಾಮಿ ದಯಾನಂದ್ ಸರಸ್ವತಿ ಜಯಂತಿ
21 ಫೆಬ್ರುವರಿ-ಮಹಾ ಶಿವರಾತ್ರಿ
10 ಮಾರ್ಚ್-ಹೋಳಿ ಹಬ್ಬ
2 ಏಪ್ರಿಲ್-ರಾಮನವಮಿ
6 ಏಪ್ರಿಲ್-ಮಹಾವೀರ್ ಜಯಂತಿ
10 ಏಪ್ರಿಲ್-ಗುಡ್ ಫ್ರೈಡೆ
1 ಮೇ-ಮಹಾರಾರಾಷ್ಟ್ರ ದಿನಾಚರಣೆ
7 ಮೇ-ಬೌದ್ಧ ಪೌರ್ಣಿಮೆ
24 ಮೇ-ಈದ್ ಉಲ್ ಫಿತ್ರ
31 ಜುಲೈ-ಈದ್ ಉಲ್ ಅಜಹಾ
11 ಆಗಸ್ಟ್-ಜನ್ಮಾಷ್ಟಮಿ
15 ಆಗಸ್ಟ್-ಸ್ವಾತಂತ್ರ್ಯ ದಿನಾಚರಣೆ
30 ಆಗಸ್ಟ್-ಮೊಹರಮ್
2 ಅಕ್ಟೋಬರ್-ಗಾಂಧಿ ಜಯಂತಿ
25 ಅಕ್ಟೋಬರ್-ವಿಜಯದಶಮಿ/ದಸರಾ
30 ಅಕ್ಟೋಬರ್-ಈದ್ ಮಿಲಾದ್ ಉನ್ ನಬಿ
14 ನವೆಂಬರ್-ದೀಪಾವಳಿ
30 ನವೆಂಬರ್-ಗುರು ನಾನಕ್ ಜಯಂತಿ
25 ಡಿಸೆಂಬರ್-ಕ್ರಿಸ್ಮಸ್
ಈ ದಿನಗಳಲ್ಲಿ ದೇಶಾದ್ಯಂತ ಸಾರಾಯಿ ಅಂಗಡಿ ಹಾಗೂ ಮುಂಗಟ್ಟುಗಳು ಬಂದ್ ಇರಲಿವೆ. ಆದರೆ, ಕೆಲ ರಾಜ್ಯಗಳಲ್ಲಿ ಇತರೆ ಹಲವು ಅವಸರಗಳಲ್ಲಿ ಸಾರಾಯಿ ಅಂಗಡಿಗಳು ಬಂದ್ ಇರುವ ಸಾಧ್ಯತೆ ಇರುತ್ತದೆ. ಆದರೆ, ಈ ನೀತಿಗಳು ಸಂಪೂರ್ಣ ರಾಜ್ಯಸರ್ಕಾರಗಳ ನಿರ್ಧಾರದ ಮೇಲೆ ಅವಲಂಭಿತವಾಗಿವೆ.

Trending News