Lok Sabha Election Results 2024 Live: ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ರಚಿಸಲಿದೆ- ಮೋದಿ

Lok Sabha Election Results 2024 Live Updates: ಲೋಕಸಭೆ ಚುನಾವಣೆ 2024 ರ ಫಲಿತಾಂಶ ಇಂದು ಹೊರ ಬೀಳಲಿದೆ. ಮತದಾರ ಯಾರಿಗೆ ಒಲಿದಿದ್ದಾನೆ ಎಂಬುದು ತಿಳಿಯಲಿದೆ. 

Written by - Chetana Devarmani | Last Updated : Jun 4, 2024, 10:38 PM IST
Lok Sabha Election Results 2024 Live: ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ರಚಿಸಲಿದೆ- ಮೋದಿ
Live Blog

Lok Sabha Election Results 2024 Live Updates: ಲೋಕಸಭೆ ಚುನಾವಣೆ 2024 ರ ಫಲಿತಾಂಶ ಇಂದು ಹೊರ ಬೀಳಲಿದೆ. ರಾಜಕೀಯ ನಾಯಕರ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಇಂದು ಮತ ಎಣಿಕೆ ನಡೆಯುತ್ತಿದೆ. 543 ಅಭ್ಯರ್ಥಿಗಳ ಹಣೆಬರಹ ಇಂದು ಹೊರ ಬೀಳಲಿದೆ. ದೇಶದ ಅಧಿಕಾರದ ಗದ್ದುಗೆ ಏರುವುದು ಯಾರು, ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಜೀ ಕನ್ನಡ ನ್ಯೂಸ್‌  ಡಿಜಿಟಲ್​ನಲ್ಲಿ ಲಭ್ಯ. ಯಾವ ಸ್ಥಾನದಿಂದ ಯಾರು ಮುಂದಿದ್ದಾರೆ, ಯಾರು ಗೆದ್ದಿದ್ದಾರೆ? ಅಧಿಕೃತ ಅಂಕಿಅಂಶಗಳನ್ನು ಇಲ್ಲಿ ನೋಡಿ....

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

4 June, 2024

  • 22:37 PM

    Lok Sabha Election Results 2024 Live : ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ ಸರ್ವನಾಶ

    ಈ ಬಾರಿಯ ಚುನಾವಣಾ ಜನಾದೇಶದಲ್ಲಿ ಹಲವು ಅಂಶಗಳಿದ್ದು, 1962ರ ನಂತರ ಮೊದಲ ಬಾರಿಗೆ ಎರಡು ಅವಧಿ ಪೂರೈಸಿ ಮೂರನೇ ಬಾರಿಗೆ ಸರ್ಕಾರ ರಚನೆಯಾಗುತ್ತಿದೆ. ಎಲ್ಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ, ಆದರೆ ಅರುಣಾಚಲ ಪ್ರದೇಶ, ಒಡಿಶಾ, ಆಂಧ್ರಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ ಎಂದು ನಮೋ ಹೇಳಿದರು.

  • 22:27 PM

    Lok Sabha Election Results 2024 Live : ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ..!

    ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದ್ದು, ಒಡಿಶಾ ಲೋಕಸಭಾ ಚುನಾವಣೆಯಲ್ಲಿಯೂ ಉತ್ತಮ ಸಾಧನೆ ಮಾಡಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಹಾಪ್ರಭು ಜಗನ್ನಾಥನ ನಾಡಿನಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿರುವುದು ಇದೇ ಮೊದಲು. ಕೇರಳದಲ್ಲಿ ಒಂದು ಸ್ಥಾನವನ್ನು ಗೆದ್ದಿದ್ದಾರೆ ಹೌದು, ನಮ್ಮ ಕೇರಳದ ಕಾರ್ಯಕರ್ತರು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ ಮತ್ತು ಅನೇಕ ತಲೆಮಾರುಗಳಿಂದ ಹೋರಾಡುತ್ತಿದ್ದಾರೆ ಮತ್ತು ಅವರು ಕಾಯುತ್ತಿದ್ದ ಕ್ಷಣ ಇಂದು ಬಂದಿದೆ ಎಂದು ನಮೋ ಮಾತನಾಡಿದರು.
     

  • 20:56 PM

    Lok Sabha Election Results 2024 Live : ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ರಚಿಸಲಿದೆ- ಮೋದಿ

    ಗೆಲುವಿನ ನಂತರ ಪ್ರಧಾನಿ ನರೇಂದ್ರ ಮೋದಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು, ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ದೇಶದ ಜನತೆ ಬಿಜೆಪಿಗೆ ಅದ್ಭುತ ಗೆಲುವು ನೀಡಿದ್ದಾರೆ. ಮೂರನೇ ಬಾರಿಗೆ ಎನ್‌ಡಿಎ ಸರ್ಕಾರ ರಚಿಸಲಿದೆ ಎಂದರು.
     

  • 20:52 PM

    Lok Sabha Election Results 2024 Live : ಜನರು ಎನ್‌ಡಿಎ ಮೇಲೆ ನಂಬಿಕೆ ಇಟ್ಟಿದ್ದಾರೆ- ಪ್ರಧಾನಿ ಮೋದಿ

    ದೇಶದ ಜನತೆ ಎನ್‌ಡಿಎ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಕಚೇರಿಗೆ ಆಗಮಿಸಿದ ಮೋದಿ, ಪಕ್ಷದ ಪ್ರಮುಖರನ್ನು ಭೇಟಿಯಾದ ಬಳಿಕ ಜನರನ್ನುದ್ದೇಶಿಸಿ ಮಾತನಾಡಿದರು. ಮತದಾರರಿಗೆ ಋಣಿಯಾಗಿದ್ದೇನೆ ಎಂದರು. ಚುನಾವಣಾ ಆಯೋಗಕ್ಕೂ ಅಭಿನಂದನೆ ಸಲ್ಲಿಸಿದರು.
     

  • 20:48 PM

    Lok Sabha Election Results 2024 Live : ರಾಯ್ ಬರೇಲಿ ಜನರ ಋಣ ತೀರಿಸಲಾಗದು : ಪ್ರಿಯಾಂಕಾ ಗಾಂಧಿ

    ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಪ್ರಿಯಾ ಗಾಂಧಿ, "ರಾಯಬರೇಲಿಯ ಕುಟುಂಬದ ಸದಸ್ಯರೇ, ನನ್ನ ಪ್ರೀತಿಯ ಕಾರ್ಯಕರ್ತ ಸ್ನೇಹಿತರೇ, ನೀವು ಮತ್ತೊಮ್ಮೆ ನಮ್ಮನ್ನು ಆಶೀರ್ವದಿಸಿದ್ದೀರಿ, ನಿಮ್ಮ ಋಣವನ್ನು ಎಂದಿಗೂ ಮರೆಯಲಾಗದು" ಎಂದು ಟ್ವೀಟ್‌ ಮೂಲಕ ಪ್ರಿಯಾಂಕಾ ಗಾಂಧಿ ಧನ್ಯವಾದ ಅರ್ಪಿಸಿದ್ದಾರೆ. 
     

  • 20:20 PM

    Lok Sabha Election Results 2024 Live : ಕಾರ್ಯಕರ್ತರ ಅವಿರತ ಶ್ರಮದ ಫಲವೇ ಈ ಗೆಲುವು

    "ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಮೂರನೇ ಬಾರಿಗೆ ಬಿಜೆಪಿಗೆ ಗೆಲುವು ದಕ್ಕಿದೆ, ಈ ವಿಜಯಕ್ಕಾಗಿ ನಾನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಶ್ರಮಿಸುತ್ತಿರುವ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ದೇಶದ ಪ್ರತಿಯೊಂದು ಭಾಗವು ಬಿಜೆಪಿಗೆ, ಅದರ ಕಾರ್ಯಕರ್ತರು ಅದರ ದೊಡ್ಡ ಆಸ್ತಿಯಾಗಿದ್ದು, ನೀವೆಲ್ಲರೂ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಮನೆ ಮನೆಗೆ ತೆರಳಿ ಜನರ ಆಶೀರ್ವಾದವನ್ನು ಕೋರಿದ್ದೀರಿ. ಇದು ನಿಜಕ್ಕೂ ಶ್ಲಾಘನೀಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.
     

  • 19:44 PM

    Lok Sabha Election Results 2024 Live : ನಾಳೆ ಭಾರತೀಯ ಮೈತ್ರಿಕೂಟದ ಸಭೆ, ಪತ್ರಿಕಾಗೋಷ್ಠಿ ರದ್ದು ಪಡಿಸಿದ್ದ ಟಿಡಿಪಿ

    ಹಂಗ್ ಸಂಸತ್ತಿನ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ನಾಳೆ ದೆಹಲಿಯಲ್ಲಿ ನಡೆಯಲಿರುವ ಭಾರತೀಯ ಮೈತ್ರಿಕೂಟದ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಭಾಗವಹಿಸಲಿದೆ ಎಂದು ಘೋಷಿಸಿದ್ದಾರೆ. ಅದೇ ರೀತಿ ತೆಲುಗು ದೇಶಂ ಪಕ್ಷವನ್ನು ಭಾರತ ಮೈತ್ರಿಕೂಟದಲ್ಲಿ ವಿಲೀನಗೊಳಿಸುವ ಕುರಿತು ವಿವಿಧ ನಾಯಕರು ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತುಕತೆ ನಡೆಸುತ್ತಿರುವಾಗಲೇ ತೆಲುಗು ದೇಶಂ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. 

  • 19:35 PM

    Lok Sabha Election Results 2024 Live : ಭಾರತದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಸಾಧನೆ ಎಂದ ನಮೋ 

    ಭಾರತದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಸಾಧನೆ. ಈ ಪ್ರೀತಿಗಾಗಿ ನಾನು ಸಾರ್ವಜನಿಕರಿಗೆ ವಂದಿಸುತ್ತೇನೆ ಮತ್ತು ಜನರ ಆಶೋತ್ತರಗಳನ್ನು ಈಡೇರಿಸಲು ಕಳೆದ ದಶಕದಲ್ಲಿ ಮಾಡಿದ ಉತ್ತಮ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ. ನಾನು ನಮ್ಮ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರ ಅಸಾಧಾರಣ ಪ್ರಯತ್ನಗಳಿಗೆ ಪದಗಳು ಎಂದಿಗೂ ನ್ಯಾಯ ಸಲ್ಲಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
     

  • 19:31 PM

    Lok Sabha Election Results 2024 Live : ನರೇಂದ್ರ ಮೋದಿ, ಅಮೇಥಿ ಜನರಿಗೆ ಧನ್ಯವಾದ ಸಲ್ಲಿಸಿದ ಸ್ಮೃತಿ ಇರಾನಿ

    ಇಂದು ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನೆಗಳು. ಅವರೂ ಜನರ ಸಮಸ್ಯೆಗಳನ್ನು ಆಲಿಸಿ ಜನರಿಗಾಗಿ ಕೆಲಸ ಮಾಡುತ್ತಾರೆ ಎಂದು ಆಶಿಸುತ್ತೇನೆ. ಐದು ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಅಮೇಥಿಯ ಜನರಿಗೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸ್ಮೃತಿ ಇರಾನಿ ಧನ್ಯವಾದ ತಿಳಿಸಿದ್ದಾರೆ.
     

  • 19:19 PM

    Lok Sabha Election Results 2024 Live : ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್‌ಗೆ ಭರ್ಜರಿ ಗೆಲುವು.

    ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಯೂಸುಫ್‌ 2024 ರ ಲೋಕಸಭಾ ಚುನಾವಣೆಗೆ ಬಹರಂಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ತೃಣಮೂಲ ಕಾಂಗ್ರೆಸ್ (ಎಐಟಿಸಿ) ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯೂಸುಫ್ ಪಠಾಣ್ ಅವರು ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
     

  • 19:12 PM

    Lok Sabha Election Results 2024 Live : 2019 ರಲ್ಲಿ 1 ಸ್ಥಾನವನ್ನು ಮಾತ್ರ ಗೆದ್ದಿದ್ದೇವು, ಈ ಬಾರಿ ನಮ್ಮ ಮತಗಳು ಹೆಚ್ಚಾಗಿದೆ

    ಕರ್ನಾಟಕದ ಎಲ್ಲಾ ಮತದಾರರಿಗೆ ಮತ್ತು ದೇಶದ ಮತದಾರರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದಲ್ಲಿ ಮತದಾನ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇದೇ ವೇಳೆ ರಾಜ್ಯದ ಗೆದ್ದ ಎಲ್ಲಾ ಲೋಕಸಭಾ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ... ನಾವು 2019 ರಲ್ಲಿ 1 ಸ್ಥಾನವನ್ನು ಮಾತ್ರ ಗೆದ್ದಿದ್ದೇವು, ಈ ಬಾರಿ ನಮ್ಮ ಮತಗಳು ಹೆಚ್ಚಾಗಿದೆ ಎಂದರು..
     

     

     

  • 19:09 PM

    Lok Sabha Election Results 2024 Live : ಮತದಾರರಿಗೆ ಧನ್ಯವಾದ ಅರ್ಪಿಸಿದ ಅಸಾದುದ್ದೀನ್ ಓವೈಸಿ 

    ಜನರು ಐದನೇ ಬಾರಿಗೆ ಯಶಸ್ಸನ್ನು ನೀಡಿದ್ದಾರೆ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಶೇಷವಾಗಿ AIMIM ಪಕ್ಷಕ್ಕೆ ಐತಿಹಾಸಿಕ ಯಶಸ್ಸನ್ನು ನೀಡಿದಕ್ಕಾಗಿ ಹೈದರಾಬಾದ್‌ನ ಜನರಿಗೆ, ಯುವಕರಿಗೆ, ಮಹಿಳೆಯರು, ಮೊದಲ ಬಾರಿಗೆ ಮತದಾನ ಮಾಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದರು.

     

     

  • 19:02 PM

    Lok Sabha Election Results 2024 Live : ಅಖಿಲೇಶ್ ಯಾದವ್ ಅವರನ್ನು ಅಭಿನಂದಿಸಿದ ರಾಹುಲ್ ಗಾಂಧಿ 

    ಲೋಕಸಭಾ ಚುನಾವಣಾ ಫಲಿತಾಂಶದ ನಡುವೆಯೇ ರಾಹುಲ್ ಗಾಂಧಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಅಭಿನಂದಿಸಿದ್ದಾರೆ. ಉಭಯ ನಾಯಕರ ನಡುವೆ ದೂರವಾಣಿ ಸಂಭಾಷಣೆ ನಡೆದಿದ್ದು, ನಾಳೆ ಭಾರತೀಯ ಮೈತ್ರಿಕೂಟದ ಪ್ರಮುಖ ಸಭೆ ಕರೆಯಲಾಗಿದೆ ಎನ್ನಲಾಗಿದೆ. 

  • 18:56 PM

    Lok Sabha Election Results 2024 Live : ಪ್ರಧಾನಿಗೆ ಬಹುಮತ ಸಿಗದಿದ್ದಕ್ಕೆ ನನಗೆ ಖುಷಿಯಾಗಿದೆ 

    ಪ್ರಧಾನಿ ಮೋದಿ ಬಹುಮತ ಗಳಿಸದಿರುವುದು ನನಗೆ ಸಂತಸ ತಂದಿದೆ. ಈಗ ಅವರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ, ಈ ಬಾರಿ 400 ಸ್ಥಾನಗಳನ್ನು ದಾಟುವ ಅವರ ಹಿಂದಿನ ಪ್ರತಿಪಾದನೆಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ರಾಜೀನಾಮೆ ನೀಡಬೇಕು ಎಂದು ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹೇಳಿದರು.
     

     

     

  • 18:03 PM

    Lok Sabha Election Results 2024 Live : ಮೋದಿ ಸರ್ಕಾರದ ನೀಚ ಉದ್ದೇಶವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ : ಖರ್ಗೆ

    ಮುಂದಿನ ದಾಳಿ ಸಂವಿಧಾನದ ಮೇಲೆಯೇ ಎಂಬ ಮೋದಿ ಸರ್ಕಾರದ ನೀಚ ಉದ್ದೇಶವನ್ನು ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿ ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಖರ್ಗೆ ಹೇಳಿದರು.
     

  • 17:57 PM

    Lok Sabha Election Results 2024 Live : ಚಿಕ್ಕೋಡಿಯಲ್ಲಿ ಮೊಳಗಿತು ಪಾಕ್​ ಪರ ಘೋಷಣೆ

    ಸಚಿವ ಸತೀಶ್ ಜಾರಕಿಹೊಳಿ ತಮ್ಮ ಪುತ್ರಿ ಪ್ರಿಯಾಂಕ ಜಾರಕಿಹೊಳಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಸಾಹೇಬ್ ಜೊಲ್ಲೆ ಪ್ರಿಯಾಂಕ ವಿರುದ್ಧ 96,253 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇನ್ನು ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದೇ ವೇಳೆ ಸಂಭ್ರಮಾಚರಣೆಯಲ್ಲಿ ಕಿಡಿಗೇಡಿಯೊಬ್ಬ ಪಾಕ್ ಪರ ಘೋಷಣೆ ಕೂಗಿದ್ದಾನೆ. ವ್ಯಕ್ತಿಯನ್ನು ಜಮೀರ್ ನಾಯಿಕವಾಡಿ ಎಂದು ಗುರುತಿಸಲಾಗಿದೆ.
     

  • 17:49 PM

    Lok Sabha Election Results 2024 Live : ನಟಿ ಕಂಗನಾ ರಣಾವತ್‌ಗೆ ಭರ್ಜರಿ ಗೆಲುವು

    ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್‌ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರನ್ನು ಸೋಲಿಸುವ ಮೂಲಕ 72,088 ಮತಗಳೊಂದಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. 
     

  • 17:29 PM

    Lok Sabha Election Results 2024 Live : 1.5 ಲಕ್ಷ ಮತಗಳ ಅಂತರದಿಂದ ಗೆದ್ದ ಪ್ರಧಾನಿ ನಮೋ..

    ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಮತ್ತೊಮ್ಮೆ ಜಯ ಭೇರಿ ಬಾರಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಅಜಯ್ ರೈ ಅವರನ್ನು 1,52,513 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಇನ್ನು 2014 ಹಾಗೂ 2019ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿಯಾಗಿದ್ದ ಮೋದಿ ಈ ಬಾರಿ ತಮ್ಮ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.  ಪ್ರಧಾನಿ ಮೋದಿ ಅವರು ಒಟ್ಟು 612970 ಮತಗಳನ್ನು ಪಡೆದರೆ ಅಜಯ್ ರೈ 460457 ಮತಗಳನ್ನು ಪಡೆದರು. ಬಿಎಸ್ಪಿಯ ಅಥರ್ ಜಮಾಲ್ 33766 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. 

  • 16:49 PM

    Lok Sabha Election Results 2024 Live: ಚುನಾವಣಾ ಫಲಿತಾಂಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

    ಬಹುತೇಕ ಎಲ್ಲಾ ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಇಂದು ಸಂಜೆ 7 ಗಂಟೆಗೆ ಲೋಕಸಭಾ ಚುನಾವಣಾ ಫಲಿತಾಂಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಲಿದ್ದಾರೆ.
     

  • 16:38 PM

    Lok Sabha Election Results 2024 Live: ಮತ್ತೇ ಪ್ರಜ್ವಲಿಸಿದ ತೇಜಸ್ವಿ ಸೂರ್ಯ, ಸೋಲು ಕಂಡ ಸೌಮ್ಯಾ ರೆಡ್ಡಿ

    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರ ಬಿದ್ದಿದೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ 265649 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸೋಲು ಕಂಡಿದ್ದಾರೆ.
     

  • 16:32 PM

    Lok Sabha Election Results 2024 Live: ಬಿಜೆಪಿ ಭದ್ರ ಕೋಟೆ ಛಿದ್ರ ಮಾಡಿದ 26 ವರ್ಷದ ಸಾಗರ್‌ ಖಂಡ್ರೆ 

    ಬಿಜೆಪಿಯ ಭದ್ರಕೋಟೆಯಾಗಿದ್ದ ಬೀದರ್​ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನ ಪ್ರಾಭಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸಚಿವ ಈಶ್ವರ್​ ಖಂಡ್ರೆ ಪುತ್ರ ಸಾಗರ ಖಂಡ್ರೆ ಘಟಾನುಘಟಿ ನಾಯಕ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ 26 ವರ್ಷದ ಸಾಗರ ಖಂಡ್ರೆ ಸಂಸತ್ತು ಪ್ರವೇಶಿಸಿದ ಕರ್ನಾಟಕದ ಅತ್ಯಂತ ಕಿರಿಯ ವಯಸ್ಸಿನ ಸಂಸದರಾಗಿ ದಾಖಲೆ ನಿರ್ಮಿಸಿದ್ದಾರೆ.
     

  • 16:25 PM

    Lok Sabha Election Results 2024 Live: ರಾಮನೂರಿನಲ್ಲಿ ಬಿಜೆಪಿಗೆ ಹೀನಾಯ ಸೋಲು 

    ಒಂಬತ್ತು ಬಾರಿ ಶಾಸಕರಾಗಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ಅವರು ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ಲಲ್ಲು ಸಿಂಗ್ ಅವರನ್ನು ಸೋಲಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ 35 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ರಾಮ ಮಂದಿರ ನಿರ್ಮಾಣ ಮಾಡಿದ್ದ ಬಿಜೆಪಿ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಹಿಂದುತ್ವ ರಾಜಕಾರಣದ ಕೇಂದ್ರ ಬಿಂದು ಆಗಿದ್ದ ಈ ಕ್ಷೇತ್ರದಲ್ಲಿ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಒಲಿದು ಬಂದಿತ್ತು.
     

  • 16:12 PM

    Lok Sabha Election Results 2024 Live: ಜೂನ್‌ 9 ರಂದು ಎಪಿ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ ಸ್ವೀಕಾರ..!

    ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ, ಬಿಜೆಪಿ, ಜನಸೇನಾ ಒಕ್ಕೂಟ ಭರ್ಜರಿ ಜಯ ಸಾಧಿಸಿದ ನಂತರ ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದರು. ನಾಯ್ಡು ಅವರು ಜೂನ್ 9 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಟಿಡಿಪಿ-ಜನಸೇನೆ-ಬಿಜೆಪಿ ಮೈತ್ರಿಕೂಟವು 175 ವಿಧಾನಸಭಾ ಸ್ಥಾನಗಳ ಪೈಕಿ 162 ಸ್ಥಾನಗಳಲ್ಲಿ ಗೆದ್ದಿದೆ ಅಥವಾ ಮುನ್ನಡೆ ಸಾಧಿಸಿದೆ. 
     

  • 16:01 PM

    Lok Sabha Election Results 2024 Live: ಕಿಂಗ್ ಮೇಕರ್‌​ಗಳ ಜೊತೆ ಮೋದಿ ಮಾತುಕತೆ 

    ಪ್ರಸ್ತುತ ಟ್ರೆಂಡ್‌ ಪ್ರಕಾರ, ಬಿಜೆಪಿ 240 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕು. ಈ ಹಿನ್ನೆಲೆ NDA ಒಕ್ಕೂಟದ ಮೂಲಕ ಬಿಜೆಪಿ ಸರ್ಕಾರ ರಚಿಸಬೇಕಿದೆ. ಹೀಗಾಗಿ ಮೋದಿ ಈಗ ಕಿಂಗ್ ಮೇಕರ್‌​ಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. 

  • 16:00 PM

    Lok Sabha Election Results 2024 Live: ಬಿಜೆಪಿ ಮ್ಯಾಜಿಕ್‌ ನಂಬರ್‌ ಪಡೆಯಲು ವಿಫಲ

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮ್ಯಾಜಿಕ್‌ ನಂಬರ್‌ ಪಡೆಯಲು ವಿಫಲವಾಗಿದೆ. ಬಿಜೆಪಿಗೆ ಬಹುಮತದ ಕೊರತೆ ಎದುರಾಗಿದೆ. ಈ ಹಿನ್ನೆಲೆ ಮಿತ್ರ ಪಕ್ಷಗಳ ನೆರವಿನಿಂದ ಸರ್ಕಾರ ರಚಿಸುವ ಅಗತ್ಯ ಬಿಜೆಪಿಗೆ ಎದುರಾಗಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಮಾಜಿ ಸಿಎಂ ಮತ್ತು ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಬೆಂಬಲ ಪಡೆಯಲು ಮುಂದಾಗಿದ್ದು, ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ. 

  • 15:50 PM

    Lok Sabha Election Results 2024 Live: ನಾಳೆ ದೆಹಲಿಯಲ್ಲಿ NDA ಸಭೆ 

    NDA ನಾಳೆ ಸಭೆ ನಡೆಯಲಿದೆ. ಕರ್ನಾಟಕದಲ್ಲಿ ಜೆಡಿಎಸ್‌ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯುವ ಸಭೆಯಲ್ಲಿ ಜೆಡಿಎಸ್ ಕೂಡ ಭಾಗಿಯಾಗಲಿದೆ. ಸಭೆಗೆ ಆಹ್ವಾನಿಸಿದ್ದಾರೆ ಎಂದು ಮಂಡ್ಯ ಲೋಕಸಭೆ ಕ್ಷೇತ್ರದ ನೂತನ ಸಂಸದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

  • 15:48 PM

    Lok Sabha Election Results 2024 Live: ಇಂದೇ ಸಭೆ ಸೇರಲಿರುವ INDIA ನಾಯಕರು

    ವಿಪಕ್ಷಗಳ INDIA ಒಕ್ಕೂಟ ಇಂದು ಸಭೆ ಸೇರಲಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಚರ್ಚೆ ನಡೆಯಲಿದೆ. 

  • 15:36 PM

    Lok Sabha Election Results 2024 Live: ನಾನು ನಿತೀಶ್ ಜೊತೆ ಮಾತನಾಡಿಲ್ಲ: ಶರದ್ ಪವಾರ್ ಸ್ಪಷ್ಟನೆ 

    ಪತ್ರಿಕಾಗೋಷ್ಠಿಯಲ್ಲಿ ಶರದ್ ಪವಾರ್ ಅವರು ನಿತೀಶ್ ಕುಮಾರ್ ಅಥವಾ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಸೀತಾರಾಂ ಯೆಚೂರಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು.

  • 15:33 PM

    Lok Sabha Election Results 2024 Live: ಜೆಪಿ ನಡ್ಡಾ ನಿವಾಸದಲ್ಲಿ ಹಿರಿಯ ನಾಯಕರ ಸಭೆ

    ಲೋಕಸಭಾ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯಗೊಂಡಿದೆ. ಇದೀಗ ಸರ್ಕಾರ ರಚಿಸಲು ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳ ನಾಯಕರು ಪೈಪೋಟಿ ನಡೆಸಿದ್ದಾರೆ. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆಯುತ್ತಿದೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಎಲ್ ಸಂತೋಷ್ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.

  • 15:29 PM

    Chitradurga Lok Sabha Election Results 2024 Live: ಗೋವಿಂದ ಕಾರಜೋಳ ಜಯಭೇರಿ 

    ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾರಜೋಳಗೆ 47958 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಗೋವಿಂದ ಕಾರಜೋಳ 681217 ಮತ, ಬಿ.ಎನ್.ಚಂದ್ರಪ್ಪ 634152 ಮತ ಪಡೆದುಕೊಂಡಿದ್ದಾರೆ.

  • 15:23 PM

    Lok Sabha Election Results 2024 Live: ನಿತೀಶ್ ಕುಮಾರ್ NDA ಜೊತೆಯಲ್ಲಿಯೇ ಇರುತ್ತಾರೆ - ಜೆಡಿಯು

    ಜೆಡಿಯು ನಾಯಕ ಕೆ.ಸಿ.ತ್ಯಾಗಿ ಮಾತನಾಡಿ, ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ನಿನ್ನೆ ಪಾಟ್ನಾಗೆ ಮರಳಿದ್ದಾರೆ. ನಾವು ನಮ್ಮ ಹಳೆಯ ನಿಲುವಿನ ಮೇಲೆಯೇ ದೃಢವಾಗಿ ನಿಲ್ಲುತ್ತೇವೆ. ಜೆಡಿಯು ಮತ್ತೊಮ್ಮೆ ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್‌ಡಿಎಯ ಮೇಲೆ ನಂಬಿಕೆಯಿಟಿದೆ. ನಾವು ಎನ್‌ಡಿಎಯಲ್ಲಿಯೇ ಇರುತ್ತೇವೆ ಎಂದಿದ್ದಾರೆ. 

  • 15:20 PM

    Lok Sabha Election Results 2024 Live: ಬುಧವಾರ ದೆಹಲಿಯಲ್ಲಿ ಎನ್‌ಡಿಎ ಸಭೆ

    ಲೋಕಸಭೆ ಚುನಾವಣೆಯ ಮತ ಎಣಿಕೆಯ ನಡುವೆ ತೆರೆಮರೆಯಲ್ಲಿ ರಾಜಕೀಯ ಆಟ ಶುರುವಾಗಿದೆ. ಮೂಲಗಳ ಪ್ರಕಾರ, ಆಡಳಿತಾರೂಢ ಎನ್‌ಡಿಎಯ ಮಿತ್ರ ಪಕ್ಷಗಳ ಸಭೆಯನ್ನು ಬುಧವಾರ ದೆಹಲಿಯಲ್ಲಿ ಕರೆಯಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಳೆ ನಡೆಯಲಿರುವ ಸಭೆಯಲ್ಲಿ ಇಬ್ಬರೂ ನಾಯಕರನ್ನು ಭೇಟಿಯಾಗಲು ಕರೆ ನೀಡಲಾಗಿದೆ.

  • 15:13 PM

    Lok Sabha Election Results 2024 Live: ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ವಿಜಯ 

    ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ 3,19,256 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ವಯನಾಡಿನಲ್ಲಿಯೂ ರಾಹುಲ್ ಗಾಂಧಿ ಜಯ ಗಳಿಸಿದ್ದಾರೆ. 

  • 15:03 PM

    Lok Sabha Election Results Live: ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಜಯಭೇರಿ 

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ ಗೌಡ ಪರಾಭವಗೊಂಡಿದ್ದಾರೆ.

  • 14:59 PM

    Lok Sabha Election Results Live: ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ ಜಯಭೇರಿ 

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ ಗೌಡ ಪರಾಭವಗೊಂಡಿದ್ದಾರೆ.

  • 14:47 PM

    Lok Sabha Election Results Live: ಜಲಂಧರ್‌ನಿಂದ ಚನ್ನಿ ಗೆಲುವು 

    ಜಲಂಧರ್ ಲೋಕಸಭಾ ಕ್ಷೇತ್ರದಿಂದ ಪಂಜಾಬ್ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಚರಣ್‌ಜಿತ್ ಸಿಂಗ್ ಚನ್ನಿ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಸುಶೀಲ್ ಕುಮಾರ್ ರಿಂಕು ಸೋಲುಂಡಿದ್ದಾರೆ.  

  • 14:42 PM

    Lok Sabha Election Results Live: ಒಮರ್ ಅಬ್ದುಲ್ಲಾಗೆ ಸೋಲು

    ಉತ್ತರ ಕಾಶ್ಮೀರದಲ್ಲಿ ಜೆಕೆಎನ್‌ಸಿ ಉಪಾಧ್ಯಕ್ಷ ಮತ್ತು ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಒಮರ್ ಅಬ್ದುಲ್ಲಾ ಪರಾಜಯಗೊಂಡಿದ್ದಾರೆ. ಇವರ ವಿರುದ್ಧ ರಶೀದ್ ಗೆಲುವು ಕಂಡಿದ್ದಾರೆ. 

  • 14:19 PM

    Amethi Lok Sabha Election Results 2024 LIVE: ಅಮೇಥಿಯಲ್ಲಿ ಸೋಲುಂಡ ಸ್ಮೃತಿ ಇರಾನಿ 

    ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಸೋಲುಂಡಿದ್ದಾರೆ. ಗಾಂಧಿ ಕುಟುಂಬದ ಆಪ್ತ ಕಾಂಗ್ರೆಸ್‌ ಕುಟುಂಬದ ಅಭ್ಯರ್ಥಿ ಕೆ.ಎಲ್‌ ಶರ್ಮಾ ಭರ್ಜರಿ ಗೆಲುವು. 

  • 14:10 PM

    Mumbai Lok Sabha Election Results 2024 LIVE: ಮತದಾರರಿಗೆ ಧನ್ಯವಾದ ಅರ್ಪಿಸಿದ ಪಿಯೂಷ್ ಗೋಯಲ್ 

    ಕೇಂದ್ರ ಸಚಿವ ಮತ್ತು ಮುಂಬೈ ಉತ್ತರದ ಬಿಜೆಪಿ ಅಭ್ಯರ್ಥಿ ಪಿಯೂಷ್ ಗೋಯಲ್, "ನಮಗೆ ಆಶೀರ್ವಾದ ಮಾಡಿದ್ದಕ್ಕಾಗಿ ಉತ್ತರ ಮುಂಬೈನ ಮತದಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಸರ್ಕಾರವನ್ನು ರಚಿಸುತ್ತದೆ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸುತ್ತದೆ" ಎಂದಿದ್ದಾರೆ. 

     

     

  • 14:06 PM

    Rajasthan Lok Sabha Election Results 2024 LIVE: ಬಿಜೆಪಿ ಅಭ್ಯರ್ಥಿ ಗೆಲುವು

    ರಾಜಸ್ಥಾನದ ಜೈಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಂಜು ಶರ್ಮಾ ಗೆಲುವು. ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರನ್ನು 3,31,767 ಮತಗಳ ಅಂತರದಿಂದ ಸೋಲಿಸಿದ್ದಾರೆ.
     

  • 14:04 PM

    Lok Sabha Election Results 2024 LIVE: ಚಂದ್ರಬಾಬು ನಾಯ್ಡುಗೆ ಪ್ರಧಾನಿ ಮೋದಿ ಕರೆ 

    ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರೂ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ ಎಂದು ಟಿಡಿಪಿ ಮೂಲಗಳು ತಿಳಿಸಿವೆ. 

    ಕೇಂದ್ರ ಚುನಾವಣಾ ಆಯೋಗದ ಅಧಿಕೃತ ಟ್ರೆಂಡ್‌ಗಳ ಪ್ರಕಾರ, ಟಿಡಿಪಿ 16 ಲೋಕಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಂಧ್ರಪ್ರದೇಶದಲ್ಲಿ 131 ಅಸೆಂಬ್ಲಿ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎರಡೂ ಚುನಾವಣೆಗಳ ಮತ ಎಣಿಕೆ ನಡೆಯುತ್ತಿದೆ. 

     

     

  • 13:56 PM

    Lok Sabha Election Results 2024 LIVE: ಮೂರು ಸ್ಥಾನಗಳಿಗೆ ಉಪ ಚುನಾವಣೆ ಫಿಕ್ಸ್‌ 

    ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಳ್ಳಾರಿಯಲ್ಲಿ ಇ.ತುಕಾರಾಂ, ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವಿನ ಬಳಿಕ ಕರ್ನಾಟಕ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದು ಪಕ್ಕಾ ಆಗಿದೆ. ಮೂವರೂ ಹಾಲಿ ಶಾಸಕರಾಗಿದ್ದು, ಈಗ ಸಂಸದರಾಗಿ ಬಡ್ತಿ ಪಡೆದ ಕಾರಣ ಮೂರೂ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. 

  • 13:53 PM

    Bidar Lok Sabha Election Results 2024 LIVE: ಸಾಗರ್ ಖಂಡ್ರೆಗೆ ಭರ್ಜರಿ ಗೆಲುವು 

    ಬೀದರ್‌ನಲ್ಲಿ ಈಶ್ವರ್‌ ಖಂಡ್ರೆ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ 1 ಲಕ್ಷ 25 ಸಾವಿರ ಅಧಿಕ ಮತಗಳಿಂದ ಕೇಂದ್ರ ಸಚಿವ ಭಗವಂತ ‌ಖೂಬಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. 26 ವರ್ಷದ ಸಾಗರ್ ಖಂಡ್ರೆ ದೇಶದ ಅತಿ ಚಿಕ್ಕ ಸಂಸದನಾಗಿ ಸಂಸತ್‌ ಪ್ರವೇಶಿಸಲಿದ್ದಾರೆ. ಸಾಗರ್ ಖಂಡ್ರೆ ಅವರು ಮಾಜಿ ಸಚಿವ ಭೀಮಣ್ಣ ಖಂಡ್ರೆ ಮೊಮ್ಮಗ, ಸಚಿವ ಈಶ್ವರ ಖಂಡ್ರೆ ಪುತ್ರ ಪ್ರಥಮ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ಮೊದಲ ಪ್ರಯತ್ನದಲ್ಲೇ ಗೆಲುವು ದಾಖಲಿಸಿದ್ದಾರೆ. 

  • 13:50 PM

    Himachal Pradesh Lok Sabha Result 2024 Live: ಹಿಮಾಚಲದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

    ಹಿಮಾಚಲಪ್ರದೇಶದಲ್ಲಿ ಎಲ್ಲಾ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಎನ್‌ಡಿಎ ಸದ್ಯ ಮುಂಚೂಣಿಯಲ್ಲಿದೆ. ಮತ್ತೆ ಸರ್ಕಾರ ರಚಿಸಲಿದ್ದೇವೆ ಎಂದು ಅನುರಾಗ್ ಠಾಕೂರ್​ ಹೇಳಿದ್ದಾರೆ.

  • 13:49 PM

    Kerala Lok Sabha Election Results 2024 Live: ಕೇರಳದಲ್ಲಿ ಅರಳಿದ ಕಮಲ 

    ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕೇರಳದಲ್ಲಿ ತನ್ನ ಖಾತೆ ತೆರೆಯಲಿದೆ. ಕೇರಳದಲ್ಲಿ ಬಿಜೆಪಿ 2 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. 

  • 13:46 PM

    Bagalkote Lok Sabha Election Results 2024 Live: ಬಾಗಲಕೋಟೆಯಲ್ಲಿ ಬಿಜೆಪಿಗೆ ಗೆಲುವು

    ಬಾಗಲಕೋಟೆ ಲೋಕಸಭಾ ‌ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಸೋಲುಂಡಿದ್ದಾರೆ.

  • 13:43 PM

    Lok Sabha Election Results 2024 Live : ಮೆಹಬೂಬಾ ಮುಫ್ತಿ ಸೋಲು ಖಚಿತ!

    ಪಿಡಿಪಿ ಮುಖ್ಯಸ್ಥೆ ಮತ್ತು ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೆಹಬೂಬಾ ಮುಫ್ತಿ ಹಿನ್ನಡೆ ಅನುಭವಿಸಿದ್ದಾರೆ. ಈ ಕ್ಷೇತ್ರದಿಂದ ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಮಿಯಾನ್ ಅಲ್ತಾಫ್ ಅಹ್ಮದ್ 1,84,726 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಕೇಂದ್ರ ಸಚಿವ ಮತ್ತು ಉಧಮ್‌ಪುರದ ಬಿಜೆಪಿ ಅಭ್ಯರ್ಥಿ ಡಾ. ಜಿತೇಂದ್ರ ಸಿಂಗ್ ಅವರು ಉಧಮ್‌ಪುರ ಲೋಕಸಭಾ ಕ್ಷೇತ್ರದಿಂದ 56,316 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

  • 13:25 PM

    Lok Sabha Election Results 2024 Live : ಅಣ್ಣಾಮಲೈಗೆ ಕೊಯಮತ್ತೂರಿನಲ್ಲಿ ಸೋಲು

    ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಡಿಎಂಕೆ ಅಭ್ಯರ್ಥಿ ಗಣಪತಿ ವಿರುದ್ಧ 17 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. 

  • 13:14 PM

    Lok Sabha Election Results 2024 Live : ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರಗೆ ಜಯ 

    ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಜಯ ಸಾಧಿಸಿದ್ದು, ಕಾಂಗ್ರೆಸ್‌ ಅಭ್ಯರ್ಥ ಗೀತಾ ಶಿವರಾಜ್‌ಕುಮಾರ್‌ಗೆ ಹೀನಾಯ ಸೋಲು ಕಂಡಿದ್ದಾರೆ. 

  • 13:12 PM

    Lok Sabha Election Results 2024 Live : ಪ್ರಹ್ಲಾದ್ ಜೋಶಿ, ರಾಜಶೇಖರ್‌ ಹಿಟ್ನಾಳ್‌ ಗೆಲುವು

    ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ , ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ, ಉಡುಪಿ ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಕೊಪ್ಪಳದಲ್ಲಿ ರಾಜಶೇಖರ್‌ ಹಿಟ್ನಾಳ್‌ ಗೆಲುವಿನ ನಗೆ ಬೀರಿದ್ದಾರೆ. 

Trending News