ಕಳೆದ 5 ವರ್ಷದ ಸಂಸತ್ತಿನ ಅವಧಿಯಲ್ಲಿ ಅಡ್ವಾಣಿ ಮಾತನಾಡಿದ್ದು 365 ಪದಗಳು ಮಾತ್ರ..!

ಒಂದು ಕಾಲದಲ್ಲಿ ಬಿಜೆಪಿಯ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ ಈಗ ಸಂಸತ್ತಿನಲ್ಲಿ ಶೇ 92 ರಷ್ಟು ಹಾಜರಾತಿ ಹೊಂದಿದ್ದರೂ ಸಹಿತ ಇದುವರೆಗೆ  ಕಳೆದ ಐದು ವರ್ಷದಲ್ಲಿ ಕೇವಲ 365 ಪದಗಳಷ್ಟು ಮಾತ್ರ ಮಾತನಾಡಿದ್ದಾರೆ ಎನ್ನುವ ವಿಷಯ ಈಗ ಬೆಳಕಿಗೆ ಬಂದಿದೆ.

Last Updated : Feb 8, 2019, 02:11 PM IST
ಕಳೆದ 5 ವರ್ಷದ ಸಂಸತ್ತಿನ ಅವಧಿಯಲ್ಲಿ ಅಡ್ವಾಣಿ ಮಾತನಾಡಿದ್ದು 365 ಪದಗಳು ಮಾತ್ರ..! title=

ನವದೆಹಲಿ: ಒಂದು ಕಾಲದಲ್ಲಿ ಬಿಜೆಪಿಯ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ ಈಗ ಸಂಸತ್ತಿನಲ್ಲಿ ಶೇ 92 ರಷ್ಟು ಹಾಜರಾತಿ ಹೊಂದಿದ್ದರೂ ಸಹಿತ ಇದುವರೆಗೆ  ಕಳೆದ ಐದು ವರ್ಷದಲ್ಲಿ ಕೇವಲ 365 ಪದಗಳಷ್ಟು ಮಾತ್ರ ಮಾತನಾಡಿದ್ದಾರೆ ಎನ್ನುವ ವಿಷಯ ಈಗ ಬೆಳಕಿಗೆ ಬಂದಿದೆ.

2009 -14 ರ ಅವಧಿಯಲ್ಲಿ ಅಡ್ವಾಣಿಯವರು ಒಟ್ಟು 42 ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆ.ಅಲ್ಲದೆ ಒಟ್ಟು 35,926 ಪದಗಳನ್ನು ಅವರು ಮಾತನಾಡಿದ್ದಾರೆ.ಕಳೆದ ಡಿಸೆಂಬರ್ 19,2014 ರಿಂದ ಲೋಕಸಭಾ ಸದನದಲ್ಲಿ ಮಾತನಾಡಿದ್ದು ತೀರಾ ವಿರಳ ಎಂದು ಹೇಳಬಹುದು. ಅಷ್ಟಕ್ಕೂ ಅಡ್ವಾಣಿ ಕಡಿಮೆ ಮಾತನಾಡುವ ವ್ಯಕ್ತಿಯಂತೂ ಕಂಡಿತ ಅಲ್ಲ, ಅವರ ಪುಸ್ತಕ ನನ್ನ ದೇಶ ನನ್ನ ಜೀವನ 1000 ಕ್ಕೂ ಅಧಿಕ ಪುಟಗಳನ್ನು ಹೊಂದಿದೆ.

2009 ರ ಅವಧಿಯಲ್ಲಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ಅಡ್ವಾಣಿ, ನಂತರದ  ದಿನಗಳಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಾಗಿ ಬಿಜೆಪಿ ಮಾರ್ಗದರ್ಶಕ ಮಂಡಳಿಗೆ ಸೀಮಿತರಾದರು.

Trending News