BJP Candidate Kissing Woman Voter During Campaign Election 2024: ಪಶ್ಚಿಮ ಬಂಗಾಳದ ಮಾಲ್ಡಾ ಉತ್ತರ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಖಗೆನ್ ಮುರ್ಮು ಅವರು ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಟ್ಟಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಘಟನೆಯ ಚಿತ್ರಗಳು ಬುಧವಾರ ವೈರಲ್ ಆಗಿವೆ. ವರದಿಗಳ ಪ್ರಕಾರ, ಸೋಮವಾರ ಮುರ್ಮು ಪಶ್ಚಿಮ ಬಂಗಾಳದ ಚಂಚಲ್‌ನ ಶ್ರೀಹಿಪುರ್ ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಪ್ರಚಾರದ ನೇರ ಪ್ರಸಾರದ ಮೂಲಕ ಬಿಜೆಪಿ ಅಭ್ಯರ್ಥಿಯ ಫೇಸ್‌ಬುಕ್ ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ ಆದರೆ ನಂತರ ಅದನ್ನು ತೆಗೆದುಹಾಕಲಾಗಿದೆ.
ಇದನ್ನೂ ಓದಿ-Lok Sabha Election 2024: ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಕುರಿತು ಭವಿಷ್ಯ ನುಡಿದ ಗಿಳಿ, ಜೋತಿಷಿ ಅಂದರ್!
ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಈ ಘಟನೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿ ನಿಮಗೂ ಕೂಡ ನಿಮ್ಮ ಕಣ್ಣುಗಳ ಮೇಲೆ ನಂಬಿಕೆ ಹೊರಟು ಹೋಗಬಹುದು ಎಂದಿದೆ. ಹೌದು, ಬಿಜೆಪಿ ಸಂಸದ ಹಾಗೂ ಮಾಲ್ಡಾ ಉತ್ತರ ಅಭ್ಯರ್ಥಿ ಖಗೇನ್ ಮುರ್ಮು ಅವರೇ ಪ್ರಚಾರದ ವೇಳೆ ಸ್ವಂತ ಇಚ್ಛೆಯಂತೆ ಮಹಿಳೆಯೊಬ್ಬರಿಗೆ ಮುತ್ತಿಕ್ಕಿದ್ದಾರೆ. ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಸಂಸದರಿಂದ ಹಿಡಿದು ಬಂಗಾಳಿ ಮಹಿಳೆಯರ ಬಗ್ಗೆ ಅಶ್ಲೀಲ ಹಾಡುಗಳನ್ನು ಹಾಡುವ ನಾಯಕರವರೆಗೂ ಬಿಜೆಪಿ ಪಾಳಯದಲ್ಲಿ ಮಹಿಳಾ ವಿರೋಧಿ ನಾಯಕರಿಗೆ ಕೊರತೆಯಿಲ್ಲ. ಮಹಿಳೆಯರನ್ನು ಸನ್ಮಾನಿಸಲು ಮೋದಿ ಕುಟುಂಬ ಸೇರಿದ್ದು ಹೀಗೆ! ಅವರು ಅಧಿಕಾರಕ್ಕೆ ಬಂದರೆ ಏನು ಮಾಡುತ್ತಾರೆ ಎಂದು ಯೋಚಿಸಿ ಈ ಪೋಸ್ಟ್ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ-Viral Video: ಆಶ್ಚರ್ಯ! ಪಾರ್ಸಲ್ ಕಳ್ಳತನದ ಇಂಥಾ ಭಯಂಕರ ಐಡಿಯಾ ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ!
ಟಿಎಂಸಿ ಮಾಲ್ಡಾ ಉಪಾಧ್ಯಕ್ಷ ದುಲಾಲ್ ಸರ್ಕಾರ್ ಘಟನೆಯನ್ನು ಖಂಡಿಸಿದ್ದು, ಇದು ಬಂಗಾಳಿ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಅಭ್ಯರ್ಥಿ ಮತ ಯಾಚಿಸುವಾಗ ಇಂತಹ ಕೃತ್ಯ ನಡೆದಿದೆಯೇ ಎಂದು ಪ್ರಶ್ನಿಸಲಾಗಿ. ಮುರ್ಮು ಘಟನೆಯನ್ನು ನಿರಾಕರಿಸಿಲ್ಲ ಮತ್ತು ಯುವತಿ ತನ್ನ ಮಗುವಿನಂತೆ ಎಂದು ಹೇಳಿದ್ದಾರೆ.
If you cannot believe what you just saw, let us clarify. Yes, this is BJP MP & Maldaha Uttar candidate @khagen_murmu kissing a woman on his own accord on his campaign trail.
From MPs that sexually harass women wrestlers to leaders who make obscene songs about Bengali women, BJP… pic.twitter.com/f0PKdaDDn5
— All India Trinamool Congress (@AITCofficial) April 9, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ