ಲೋಕಸಭೆ ಚುನಾವಣೆ 2019: ಈ ಬಾರಿ 24 ಮುಸ್ಲಿಂ ಸಂಸದರು ಪಾರ್ಲಿಮೆಂಟಿಗೆ ಎಂಟ್ರಿ!

ಉತ್ತರಪ್ರದೇಶದಿಂದ ಆರು ಮಂದಿ ಮುಸ್ಲಿಂ ಸಂಸದರು ಈ ಬಾರಿ ಲೋಕಸಭೆ ಪ್ರವೇಶಿಸಿದ್ದು, ದೇಶಾದ್ಯಂತ ಒಟ್ಟು 24 ಸಂಸದರು ಸಂಸದರಾಗಿ ಆಯ್ಕೆಯಾಗಿದ್ದಾರೆ.

Last Updated : May 24, 2019, 09:51 AM IST
ಲೋಕಸಭೆ ಚುನಾವಣೆ 2019: ಈ ಬಾರಿ 24 ಮುಸ್ಲಿಂ ಸಂಸದರು ಪಾರ್ಲಿಮೆಂಟಿಗೆ ಎಂಟ್ರಿ! title=

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಬಹುತೇಕ ಖಚಿತವಾಗಿದ್ದು, 2014ರ ಲೋಕಸಭಾ ಚುನಾವಣೆ ಬಳಿಕ ಮತ್ತೆ 2019ರಲ್ಲಿ ಮೋದಿ ಸರ್ಕಾರದ ಮೇಲೆ ಜನತೆ ಭರವಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎರಡನೇ ಅವಧಿಗೆ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ.

ಆದರೆ ಉತ್ತರಪ್ರದೇಶದಲ್ಲಿ ಮಾತ್ರ ಚುನಾವಣಾ ಫಲಿತಾಂಶ ಬದಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ 73 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ಈವರೆಗೆ 61 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಈಥ್ವಾ ಮತ್ತು ಕರಾನಾ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಅಲ್ಲದೆ, ರಾಜ್ಯದಿಂದ ಆರು ಮಂದಿ ಮುಸ್ಲಿಂ ಸಂಸದರು ಈ ಬಾರಿ ಲೋಕಸಭೆ ಪ್ರವೇಶಿಸಿದ್ದು, ದೇಶಾದ್ಯಂತ ಒಟ್ಟು 24 ಸಂಸದರು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಉತ್ತರಪ್ರದೇಶದಲ್ಲಿ 2014ರಲ್ಲಿ ಏಕೈಕ ಮುಸ್ಲಿಂ ಸಂಸದ ಆಯ್ಕೆ ಆಗಿರಲಿಲ್ಲ
2014ರ ಲೋಕಸಭಾ ಚುನಾವಣೆಯಲ್ಲಿ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಿಂದ ಏಕೈಕ ಮುಸ್ಲಿಂ ಸಂಸದ ಕೂಡ ಆಯ್ಕೆ ಆಗಿರಲಿಲ್ಲ. ಆದರೆ ಈ ಬಾರಿ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿಕೂಟ  ಭಾರೀ ಪ್ರಭಾವ ಬೀರದಿದ್ದರೂ, ಕೆಲವು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಉತ್ತರಪ್ರದೇಶದಲ್ಲಿ 6 ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಉತ್ತರ ಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದಿಂದ ಎಸ್ಪಿ ಅಭ್ಯರ್ಥಿ ಅಜಂ ಖಾನ್ ಜಯಪ್ರದಾ ವಿರುದ್ಧ,  ಮೊರಾದಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಎಚ್ಟಿ ಹಾಸನ್, ಅಮರೋಹ್ ಲೋಕಸಭಾ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿ ಡ್ಯಾನಿಷ್ ಅಲಿ, ಸಂಭಾಲ್ ಲೋಕಸಭಾ ಕ್ಷೇತ್ರದಲ್ಲಿ ಡಾ. ಶಫೀಖರ್ ರಹಮಾನ್ ಬರ್ಕ್, ಸಹರಾನ್ಪುರ ಲೋಕಸಭೆ ಕ್ಷೇತ್ರದಲ್ಲಿ ಹಾಜಿ ಫಾಝಲುರ್ಹಮಾನ್, ಗಾಜೀಪುರ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಅಫ್ಜಲ್ ಅನ್ಸಾರಿ ಆಯ್ಕೆಯಾಗಿದ್ದಾರೆ. 

2014 ರ ಲೋಕಸಭೆ ಚುನಾವಣೆಯಲ್ಲಿ 23 ಮುಸ್ಲಿಂ ಸಂಸದರು ಲೋಕಸಭೆಗೆ ಆಯ್ಕೆಯಾಗಿದ್ದರು. ಇ ವರ್ಷ ಕೇವಲ ಒಂದು ಸ್ಥಾನ ಮಾತ್ರ ಹೆಚ್ಚಾಗಿದೆ. ಸ್ವತಂತ್ರ ಭಾರತದ ಇತಿಹಾಸವನ್ನು ವೀಕ್ಷಿಸಿದಾಗ 1971 ರಲ್ಲಿ,11 ಮುಸ್ಲಿಂ ಸಂಸದರು, 1957 ರಲ್ಲಿ 19, 1962 ರಲ್ಲಿ 20, 1967 ರಲ್ಲಿ 25 ಮುಸ್ಲಿಂ ಸಂಸದರು, 1971 ರಲ್ಲಿ 28 ಸಂಸದರು, 1980 ರಲ್ಲಿ 49, 1984ರಲ್ಲಿ  42, 2004ರಲ್ಲಿ 34, 2009ರಲ್ಲಿ 30 ಮತ್ತು 2014ರಲ್ಲಿ 23 ಮುಸ್ಲಿಂ ಸಂಸದರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದರು.
 

Trending News