ಹನುಮಾನ್ ಆದಿವಾಸಿ ಸಮುದಾಯಕ್ಕೆ ಸೇರಿದವನು- ನಂದ ಕುಮಾರ್ ಸಾಯಿ

 ಉತ್ತರ ಪ್ರದೇಶದ ಸಿಎಂ ಹನುಮಾನ್ ದಲಿತ ಎಂದು ಹೇಳಿಕೆ ನೀಡಿದ ನಂತರ ಈಗ ರಾಷ್ಟ್ರೀಯ ಪ.ಪಂಗಡ ಆಯೋಗದ ಅಧ್ಯಕ್ಷ ನಂದ ಕುಮಾರ್ ಸಾಯಿ ಹನುಮಾನ್ ಆದಿವಾಸಿ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೆ ನೀಡಿದ್ದಾರೆ.

Last Updated : Nov 30, 2018, 08:21 PM IST
 ಹನುಮಾನ್ ಆದಿವಾಸಿ ಸಮುದಾಯಕ್ಕೆ ಸೇರಿದವನು- ನಂದ ಕುಮಾರ್ ಸಾಯಿ  title=

ನವದೆಹಲಿ: ಉತ್ತರ ಪ್ರದೇಶದ ಸಿಎಂ ಹನುಮಾನ್ ದಲಿತ ಎಂದು ಹೇಳಿಕೆ ನೀಡಿದ ನಂತರ ಈಗ ರಾಷ್ಟ್ರೀಯ ಪ.ಪಂಗಡ ಆಯೋಗದ ಅಧ್ಯಕ್ಷ ನಂದ ಕುಮಾರ್ ಸಾಯಿ ಹನುಮಾನ್ ಆದಿವಾಸಿ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೆ ನೀಡಿದ್ದಾರೆ.

ಗುರುವಾರ ಲಖನೌದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ನಂದ ಕುಮಾರ್ ಸಾಯಿ "ನಾನು ಇದನ್ನು  ಸ್ಪಷ್ಟಪಡಿಸಬೇಕೆಂದು ಬಯಸುತ್ತೇನೆ ರಾಮನ ಸೈನ್ಯದಲ್ಲಿ ಕೋತಿಗಳು, ಹಿಮಕರಡಿಗಳು ಮತ್ತು ರಣಹದ್ದುಗಳು ಇದ್ದವು ಎಂದು ಜನರು ಭಾವಿಸಿದ್ದಾರೆ. ಓರಾನ್ ಬುಡಕಟ್ಟು ಸಮುದಾಯದ ಜನರು ಮಾತನಾಡುವ ಕುರಾಖ್ ಭಾಷೆಯಲ್ಲಿ  'ಟಿಗ್ಗಾ' (ಒಂದು ಗೋತ್ರ) ಎಂದರೆ 'ವಾನರ್' (ಮಂಗ) ಎಂದರ್ಥ. ನಾನು ಕನ್ವರ್ ಬುಡಕಟ್ಟು ಸಮುದಾಯಕ್ಕೆ ಸೇರಿದ್ದೇನೆ ಅದರಲ್ಲಿ 'ಹನುಮಾನ್' ಎಂದು ಕರೆಯಲಾಗುವ ಗೋತ್ರ ಇದೆ.ಅದೇ ರೀತಿಯಾಗಿ ಗಿಡ್ಡ ಅಥವಾ ರಣಹದ್ದು ಇತರ ಪರಿಶಿಷ್ಟ ಪಂಗಡಗಳಲ್ಲಿ ಒಂದು ಗೋತ್ರವಾಗಿದ್ದು, ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ಕೂಡ ರಾಮನ ಸೈನ್ಯದ ಭಾಗವಾಗಿದ್ದರು ಎಂದು ಹೇಳಲು ಇಚ್ಚಿಸುತ್ತೇನೆ" ಎಂದು ತಿಳಿಸಿದರು.

ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ "ಹನುಮಾನ್ ಅರಣ್ಯ ನಿವಾಸಿ ಮತ್ತು ದಲಿತ. ಬಜರಂಗ ಬಲಿ ಹನುಮಾನ್ ಉತ್ತರದಿಂದ ದಕ್ಷಿಣಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಾ ಭಾರತೀಯ ಸಮುದಾಯಗಳನ್ನು ಒಂದು ಗೂಡಿಸಲು ಶ್ರಮಿಸಿದ್ದರು " ಎಂದು ಅವರು ಹೇಳಿಕೆ ನೀಡಿದ್ದರು.

Trending News