ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶಿವಸೇನಾ ನೇತೃತ್ವದ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ

ಹಲವು ದಿನಗಳ ರಾಜಕೀಯ ನಾಟಕೀಯ ಬೆಳವಣಿಗೆ ನಂತರ ಈಗ ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಮೈತ್ರಿಕೂಟದ ಸರ್ಕಾರ ರಚನೆಗೆ ಸನ್ನದ್ದವಾಗಿದೆ.

Last Updated : Nov 11, 2019, 07:47 PM IST
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶಿವಸೇನಾ ನೇತೃತ್ವದ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲ  title=
Photo courtesy: ANI

ನವದೆಹಲಿ: ಹಲವು ದಿನಗಳ ರಾಜಕೀಯ ನಾಟಕೀಯ ಬೆಳವಣಿಗೆ ನಂತರ ಈಗ ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಮೈತ್ರಿಕೂಟದ ಸರ್ಕಾರ ರಚನೆಗೆ ಸನ್ನದ್ದವಾಗಿದೆ.

ಕಾಂಗ್ರೆಸ್ ಪಕ್ಷದ ಬೆಂಬಲದ ನಿರೀಕ್ಷೆಯಲ್ಲಿದ್ದ ಶಿವಸೇನಾ ಇಂದು ಪಕ್ಷದ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿದ ನಂತರ ಕಾಂಗ್ರೆಸ್ ಪಕ್ಷ ಶಿವಸೇನಾಗೆ ಬೆಂಬಲ ನೀಡಲು ಮುಂದಾಗಿದೆ. ಈಗ ರಾಜ್ಯಪಾಲರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು 40 ನಿಮಿಷಗಳ ಗಡುವನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಶಿವಸೇನಾ ಮುಖಂಡ ಆದಿತ್ಯ ಠಾಕ್ರೆ, ಇತರ ಪಕ್ಷದ ಮುಖಂಡರೊಂದಿಗೆ ಹಕ್ಕು ಪಡೆಯಲು ರಾಜ್ ಭವನಕ್ಕೆ ತೆರಳಿದ್ದಾರೆ.

ಅಕ್ಟೋಬರ್ 24 ರ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಮತ್ತು ಶಿವಸೇನಾ ನಡುವೆ 50:50 ಸೂತ್ರದ ವಿಚಾರವಾಗಿ ಶೀತಲ ಸಮರ ನಡೆದಿತ್ತು. ಆದರೆ ಬಿಜೆಪಿ ಪಕ್ಷ ಮಾತ್ರ ಶಿವಸೇನಾ ಪಕ್ಷದ ಬೇಡಿಕೆ ಮಣೆ ಹಾಕದ್ದಿದ್ದರಿಂದಾಗಿ ಬಿಕ್ಕಟ್ಟು ಉಲ್ಬಣವಾಯಿತು. ಇದಾದ ನಂತರ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ಆದರೆ ಬಿಜೆಪಿ ಕೊನೆ ಕ್ಷಣದಲ್ಲಿ ತಾನೂ ಸರ್ಕಾರ ರಚಿಸುವುದಿಲ್ಲ ಎಂದು ಹೇಳಿತು.

ಇದಾದ ಬೆನ್ನಲ್ಲೇ ಶಿವಸೇನಾ ಈಗ ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಿದೆ.

Trending News