Makara Jyothi 2023 Timing: ಶಬರಿಮಲೆಯಲ್ಲಿ ಇಂದು ಈ ಸಮಯದಲ್ಲಿ ಕಾಣಿಸಿಕೊಳ್ಳಲಿದೆ ಮಕರ ಜ್ಯೋತಿ!

Makara Jyothi 2023 Timing: ಮಕರ ಜ್ಯೋತಿಯಂದು ಶಬರಿಮಲೆ ದೇವಸ್ಥಾನಕ್ಕೆ ಲಕ್ಷಾಂತರ ಅಯ್ಯಪ್ಪ ಭಕ್ತರು ಆಗಮಿಸುತ್ತಾರೆ. ಜನವರಿ 14 ಬಂತೆಂದರೆ ಇವರಿಗೆ ಎಲ್ಲಿಲ್ಲದ ಸಂತೋಷ. ಪರಂಜ್ಯೋತಿ ರೂಪದಲ್ಲಿ ಕಾಣಿಸಿಕೊಳ್ಳುವ ಮಣಿಕಂಠನನ್ನು ಕಣ್ತುಂಬಿಕೊಂಡು ನಮ್ಮ ಸಂಕಷ್ಟಗಳನ್ನೆಲ್ಲಾ ಪರಿಹಾರ ಮಾಡು ಎನ್ನುತ್ತಾ ಬೇಡಿಕೊಳ್ಳುವ ಭಕ್ತರ ಸಮೂಹವನ್ನು ಇಲ್ಲಿ ಕಾಣಬಹುದು.

Written by - Bhavishya Shetty | Last Updated : Jan 14, 2023, 06:49 AM IST
    • ಇಂದು ಮಕರ ಸಂಕ್ರಮಣದ ಮೊದಲ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ
    • ಮಕರವಿಳಕ್ಕು ಅಥವಾ ಮಕರ ಜ್ಯೋತಿ ಕಾಣಿಸಿಕೊಳ್ಳುವ ಸುದಿನ
    • ಮಕರ ಜ್ಯೋತಿಯಂದು ಶಬರಿಮಲೆ ದೇವಸ್ಥಾನಕ್ಕೆ ಲಕ್ಷಾಂತರ ಅಯ್ಯಪ್ಪ ಭಕ್ತರು ಆಗಮಿಸುತ್ತಾರೆ
Makara Jyothi 2023 Timing: ಶಬರಿಮಲೆಯಲ್ಲಿ ಇಂದು ಈ ಸಮಯದಲ್ಲಿ ಕಾಣಿಸಿಕೊಳ್ಳಲಿದೆ ಮಕರ ಜ್ಯೋತಿ!  title=
Makara Jyothi 2023

Makara Jyothi 2023 Timing: ಇಂದು ಮಕರ ಸಂಕ್ರಮಣ. ದೇಶಾದ್ಯಂತ ಇಂದು ಮಕರ ಸಂಕ್ರಮಣದ ಮೊದಲ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಒಂದೊಂದು ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಕೆಲವೆಡೆ ಜನವರಿ 14ರಂದು ಮಕರ ಸಂಕ್ರಮಣ ಆಚರಿಸಿದರೆ, ಇನ್ನೂ ಕೆಲವೆಡೆ ಜನವರಿ 15 ಅಂದರೆ ನಾಳೆ ಸಂಕ್ರಾಂತಿಯನ್ನು ಬರಮಾಡಿಕೊಳ್ಳುತ್ತಾರೆ. ಇಂದು ಮುಖ್ಯವಾಗಿ ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಕರವಿಳಕ್ಕು ಅಥವಾ ಮಕರ ಜ್ಯೋತಿ ಕಾಣಿಸಿಕೊಳ್ಳುವ ಸುದಿನ. ಈ ವರ್ಷ ಮಕರ ಜ್ಯೋತಿ ಯಾವ ಸಮಯದಲ್ಲಿ ಕಾಣಿಸಿಕೊಳ್ಳಲಿದೆ, ಯಾವ ದಿನದಂದು ಕಾಣಿಸಿಕೊಳ್ಳಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಮಕರ ಜ್ಯೋತಿಯಂದು ಶಬರಿಮಲೆ ದೇವಸ್ಥಾನಕ್ಕೆ ಲಕ್ಷಾಂತರ ಅಯ್ಯಪ್ಪ ಭಕ್ತರು ಆಗಮಿಸುತ್ತಾರೆ. ಜನವರಿ 14 ಬಂತೆಂದರೆ ಇವರಿಗೆ ಎಲ್ಲಿಲ್ಲದ ಸಂತೋಷ. ಪರಂಜ್ಯೋತಿ ರೂಪದಲ್ಲಿ ಕಾಣಿಸಿಕೊಳ್ಳುವ ಮಣಿಕಂಠನನ್ನು ಕಣ್ತುಂಬಿಕೊಂಡು ನಮ್ಮ ಸಂಕಷ್ಟಗಳನ್ನೆಲ್ಲಾ ಪರಿಹಾರ ಮಾಡು ಎನ್ನುತ್ತಾ ಬೇಡಿಕೊಳ್ಳುವ ಭಕ್ತರ ಸಮೂಹವನ್ನು ಇಲ್ಲಿ ಕಾಣಬಹುದು.

ಇದನ್ನೂ ಓದಿ: Vastu Tips : ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಔಷಧಿಗಳನ್ನು ಇಡಬೇಡಿ! ರೋಗಗಳು ಮನೆ ಮಾಡುತ್ತವೆ

ಇನ್ನು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗದವರು ಮಕರವಿಳಕ್ಕುವನ್ನು ಆನ್‌ಲೈನ್ ಲೈವ್ ಸ್ಟ್ರೀಮ್, ಮಕರವಿಳಕ್ಕು ಉತ್ಸವದ ನೇರ ಪ್ರಸಾರಗಳ ಮೂಲಕ ವೀಕ್ಷಿಸುತ್ತಾರೆ. ಮಕರವಿಳಕ್ಕು 2023ರ ಸಮಯ ಮತ್ತು ಇದರ ಪ್ರಾಮುಖ್ಯತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಮಕರ ಸಂಕ್ರಾಂತಿ 2023 ದಿನಾಂಕ ಮತ್ತು ಶುಭ ಮುಹೂರ್ತ:

ಸೂರ್ಯ ದೇವರಿಗೆ ಸಮರ್ಪಿತವಾದ ಸುಗ್ಗಿಯ ಹಬ್ಬಕ್ಕೆ ಸಂಬಂಧಿಸಿದ ಪೂಜೆ ವಿಧಿ, ಮಹತ್ವ ಮತ್ತು ಆಚರಣೆಗಳನ್ನು ತಿಳಿಯೋಣ. ಮಕರವಿಳಕ್ಕು 2023 ರ ದರ್ಶನವು ಜನವರಿ 14 ರಂದು ನಡೆಯಲಿದೆ. ದೃಕ್ ಪಂಚಾಂಗದ ಪ್ರಕಾರ ಮಕರ ವಿಳಕ್ಕು ಜನವರಿ 14 ರಂದು ಸಂಜೆ 6 ರಿಂದ 8 ಗಂಟೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳಲಿದೆ.

ಮಕರ ಜ್ಯೋತಿ ಮಹತ್ವ:

ಮಕರವಿಳಕ್ಕು ಶಬರಿಮಲೆ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವಾಗಿದೆ. ಈ ಸಂದರ್ಭವನ್ನು ಅಯಪ್ಪ ಭಕ್ತರು ಬಹಳ ಭಕ್ತಿಯಿಂದ ಸ್ಮರಿಸುತ್ತಾರೆ. ಮಕರವಿಳಕ್ಕು 2023 ರ ಆಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಸಾವಿರಾರು ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಆಗಮಿಸಿ ಅಯ್ಯಪ್ಪನ ದರ್ಶನಕ್ಕಾಗಿ ಕಾದುಕುಳಿತಿದ್ದಾರೆ. ಇದರ ಜೊತೆಗೆ, ಸ್ಥಳೀಯ ಅಯಪ್ಪ ದೇವಾಲಯಗಳಲ್ಲಿ ಸಹ ಇಂದು ವಿಶೇಷ ಪೂಜೆ ಪುನಸ್ಕಾರಗಳು ನೆರವೇರಲಿವೆ. ಹಲವಾರು ವರ್ಷಗಳಿಂದ ಮಕರವಿಳಕ್ಕು ದರ್ಶನದ ಬಗ್ಗೆ ಹಲವಾರು ಕಥೆಗಳು ನಮಗೆ ಸಿಗುತ್ತಿವೆ. ತಿರುವಾಂಕೂರು ದೇವಸ್ವಂ ಮಂಡಳಿಯ ಜನರು ಪೊನ್ನಂಬಲಮೇಡು ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳನ್ನು ಮತ್ತು ಪೂಜೆಗಳನ್ನು ನಡೆಸುತ್ತಿದ್ದಂತೆ ಪರಂಜ್ಯೋತಿ ರೂಪದಲ್ಲಿ ಅಯ್ಯಪ್ಪ ಪ್ರತ್ಯಕ್ಷನಾಗುತ್ತಾನೆ. ಈ ದಿನವನ್ನು ಕಣ್ತುಂಬಿಕೊಂಡು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎನ್ನುತ್ತಾ ಭಕ್ತಿಯಲ್ಲಿ ಮಿಂದೇಳುತ್ತಾರೆ ಅಯ್ಯಪ್ಪ ಮಾಲಾಧಾರಿಗಳು.

ಮಕರವಿಳಕ್ಕು ದಿನದಂದು ಪೊನ್ನಂಬಲಮೇಡುವಿನಲ್ಲಿ ಬುಡಕಟ್ಟು ಜನರು ದೀಪಗಳನ್ನು ಬೆಳಗಿಸುತ್ತಾರೆ. ಈ ಪೂಜೆ ನೆರವೇರಿಸಲು ಸಹ ಅನೇಕ ಪದ್ಧತಿಗಳನ್ನು ಕೈಗೊಳ್ಳಲಾಗುತ್ತದೆ. ಮಕರ ಮಾಸದ ಮೊದಲ ದಿನದಂದು ಮಕರ ನಕ್ಷತ್ರದ ಗೋಚರಿಸುವಿಕೆಯನ್ನು ಈ ವಿಧವಾಗಿ ಆಚರಣೆ ಮಾಡಲಾಗುತ್ತದೆ. ಹಿಂದಿನ ಕಾಲದಲ್ಲಿ ಪೊನ್ನಂಬಲಮೇಡು (ಮಕರವಿಳಕ್ಕು ಕಾಣಿಸಿಕೊಳ್ಳುವ ಸ್ಥಳ) ಕಾಡಿನಲ್ಲಿ ಮಲಯಮಾನ್ ಕರಿಯ ವಂಶಸ್ಥರು ಎಂದು ಹೇಳಲಾಗುವ ಮಲಯರಾಯ ಬುಡಕಟ್ಟು ಜನಾಂಗದವರು ಮಕರವಿಳಕ್ಕು ದೀಪವನ್ನು ಬೆಳಗುತ್ತಿದ್ದರು. ಇದನ್ನು ತಿರುವಾಂಕೂರು ದೇವಸ್ವಂ ಬೋರ್ಡ್ ನಡೆಸುತ್ತದೆ. ದೇ ಸಂದರ್ಭದಲ್ಲಿ ಮಕರ ನಕ್ಷತ್ರ ಬಾನಂಗಳದಲ್ಲಿ ಗೋಚರಿಸುತ್ತದೆ. ಮಕರ ಜ್ಯೋತಿ ಮತ್ತು ಮಕರ ವಿಳಕ್ಕು ಬೆಳಗುವ ಮುನ್ನ ಗರುಡ ಆಕಾಶದಲ್ಲಿ ಹಾರುವುದನ್ನು ಕಾಣಬಹುದು.

ಇದನ್ನೂ ಓದಿ: Guru Mahadasha : ಜಾತಕದಲ್ಲಿ 16 ವರ್ಷ ಗುರು ಮಹಾದಶ : ಇವರಿಗೆದೆ ರಾಜಯೋಗ ಶುಭ!

ಮಕರವಿಳಕ್ಕುವಿನ ಮಹತ್ವ ಮತ್ತು ಪ್ರಭಾವವು ಆಳವಾದದ್ದಾಗಿದೆ. ಮಕರವಿಳಕ್ಕು ದರ್ಶನವು ಅದೃಷ್ಟ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಎಲ್ಲರಿಗೂ ಮಕರವಿಳಕ್ಕು 2023 ರ ಶುಭಾಶಯಗಳು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News