close

News WrapGet Handpicked Stories from our editors directly to your mailbox

ಬಿಜೆಪಿ ಮಾಹಿತಿಯನ್ನು ತಿರುಚಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ-ಮಮತಾ ಬ್ಯಾನರ್ಜೀ

ಅಮಿತ್ ಷಾ ಅವರ ಹೆಲಿಕಾಪ್ಟರ್ ಸ್ಥಳಾಂತರದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಬಿಜೆಪಿ ಮಾಹಿತಿಯನ್ನು ತಿರುಚಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಕೀಡಿ ಕಾರಿದರು.

Updated: Jan 21, 2019 , 04:19 PM IST
ಬಿಜೆಪಿ ಮಾಹಿತಿಯನ್ನು ತಿರುಚಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ-ಮಮತಾ ಬ್ಯಾನರ್ಜೀ

ನವದೆಹಲಿ: ಅಮಿತ್ ಷಾ ಅವರ ಹೆಲಿಕಾಪ್ಟರ್ ಸ್ಥಳಾಂತರದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಬಿಜೆಪಿ ಮಾಹಿತಿಯನ್ನು ತಿರುಚಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಕೀಡಿ ಕಾರಿದರು.

ನಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವುದರಿಂದ ಸಭೆಗೆ ಅನುಮತಿ ನೀಡಿದ್ದೇವೆ ಆದರೆ  ಬಿಜೆಪಿಯವರು ಈ ಮಾಹಿತಿಯನ್ನು ತಿರುಚಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ" ಎಂದು ಹೇಳಿದರು.

ತಾವು ಮುಖ್ಯಮಂತ್ರಿಯಾಗಿದ್ದರೂ ಸಹ ಭದ್ರತಾ ಕಾರಣಗಳಿಂದಾಗಿ ತಮ್ಮ ಸ್ಥಳಗಳನ್ನು ಸಹಿತ ಬದಲಾಯಿಸಲಾಗಿದೆ ಎಂದು ಮಮತಾ ತಿಳಿಸಿದರು. "ಅನುಮತಿ ನೀಡಲಾಗಿದೆ. ಆದರೆ ಕೆಲವು ಭದ್ರತಾ ಸಮಸ್ಯೆಗಳು ಇವೆ ಆದ್ದರಿಂದ ಪೊಲೀಸರು ಅಮಿತ್ ಷಾ ಅವರ  ಹೆಲಿಕಾಪ್ಟರ್ ಲ್ಯಾಂಡಿಂಗ್ ಸ್ಥಳವನ್ನು  ಬದಲಾವಣೆ ಮಾಡಲಾಯಿತು ಜೊತೆಗೆ ಅವರ ಸಲಹೆ ಮೇರೆಗೆ ನನ್ನ ಚಾಪರ್ ಲ್ಯಾಂಡಿಂಗ್ ಬದಲಾಯಿಸಲಾಯಿತು ಎಂದು,"ಮಮತಾ ಬ್ಯಾನರ್ಜೀ ಹೇಳಿದರು.

ಪ್ರತಿ ಬುಧವಾರ ಪಶ್ಚಿಮ ಬಂಗಾಳ ಸರಕಾರ ತಮ್ಮ ಹೆಲಿಕಾಪ್ಟರ್ಗಳನ್ನು ಇಳಿಸಲು ಮಾಲ್ಡಾ ವಿಮಾನ ನಿಲ್ದಾಣವನ್ನು ಬಳಸುತ್ತಿದ್ದರೂ, ಕೂಡ ಅಮಿತ್ ಷಾ ರವರ ಮನವಿಯನ್ನು ತಿರಸ್ಕರಿಸಲಾಗಿದೆ.