OMG: ಪತ್ನಿಗೆ ʼಸೆಕೆಂಡ್ ಹ್ಯಾಂಡ್ʼ ಎಂದು ಕರೆದ ಗಂಡನಿಗೆ 3 ಕೋಟಿ ರೂ. ದಂಡ..!

Domestic violence case: ಹನಿಮೂನ್‌ಗೆಂದು ನೇಪಾಳಕ್ಕೆ ಹೋದಾಗ ತನಗೆ ಆದ ಅವಮಾನ ಸೇರಿದಂತೆ ತಮ್ಮ ಮದುವೆ ಸಮಯದಲ್ಲಿ ನಡೆದ ಭಯಾನಕ ಘಟನೆಗಳ ಬಗ್ಗೆ ಪತ್ನಿ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.

Written by - Puttaraj K Alur | Last Updated : Mar 27, 2024, 04:31 PM IST
  • ಪತ್ನಿಗೆ ʼಸೆಕೆಂಡ್‌ ಹ್ಯಾಂಡ್‌ʼ ಎಂದು ಕರೆದ ಗಂಡನಿಗೆ 3 ಕೋಟಿ ರೂ. ದಂಡ
  • ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್
  • ಪತ್ನಿಗೆ ಮಾಸಿಕ 1.5 ಲಕ್ಷ ರೂ.ಗಳ ಜೀವನಾಂಶ ಪಾವತಿಸುವಂತೆ ಆದೇಶ
OMG: ಪತ್ನಿಗೆ ʼಸೆಕೆಂಡ್ ಹ್ಯಾಂಡ್ʼ ಎಂದು ಕರೆದ ಗಂಡನಿಗೆ 3 ಕೋಟಿ ರೂ. ದಂಡ..!   title=
3 ಕೋಟಿ ರೂ. ದಂಡ

ನವದೆಹಲಿ: ಪತ್ನಿಗೆ ʼಸೆಕೆಂಡ್‌ ಹ್ಯಾಂಡ್‌ʼ ಎಂದು ಕರೆದ ಗಂಡನಿಗೆ ಬಾಂಬೆ ಹೈಕೋರ್ಟ್‌ ಬರೋಬ್ಬರಿ 3 ಕೋಟಿ ರೂ. ದಂಡ ವಿಧಿಸಿದೆ. ವಿಚಾರಣಾ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿದಿರುವ ಬಾಂಬೆ ಹೈಕೋರ್ಟ್, ಹೆಂಡತಿಗೆ 'ಸೆಕೆಂಡ್ ಹ್ಯಾಂಡ್' ಎಂದ ವ್ಯಕ್ತಿಗೆ ʼಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯ್ದೆ, 2005ʼರಡಿ 3 ಕೋಟಿ ರೂ.ಗಳ ಪರಿಹಾರ ಮತ್ತು ಮಾಸಿಕ 1.5 ಲಕ್ಷ ರೂ.ಗಳ ಜೀವನಾಂಶ ಪಾವತಿಸುವಂತೆ ಆದೇಶಿಸಿದೆ.   

ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಪತಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಶರ್ಮಿಳಾ ದೇಶ್ಮುಖ್ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಮುಂಬೈನಲ್ಲಿ ಈ ಜೋಡಿ 1994ರ ಜನವರಿಯಲ್ಲಿ ವಿವಾಹವಾಗಿತ್ತು. ನಂತರ ಅಮೆರಿಕದಲ್ಲಿ ಅದ್ದೂರಿ ಆರತಕ್ಷತೆ ಸಮಾರಂಭವನ್ನು ನಡೆಸಿದ್ದರು. ನಂತರ ದಂಪತಿ 2005ರಲ್ಲಿ ಮುಂಬೈಗೆ ವಾಪಸ್‌ ಮರಳಿದ್ದರು.

ಇದನ್ನೂ ಓದಿ: Lok Sabha election 2024: ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಆಘಾತ..! ಮಾಜಿ ಸಂಸದ ನವೀನ್ ಜಿಂದಾಲ್ ಬಿಜೆಪಿ ಸೇರ್ಪಡೆ

ಮಾಟುಂಗಾದಲ್ಲಿ ನೆಲೆಸಿದ್ದ ದಂಪತಿ ನಡುವೆ 2008ರಿಂದ ವೈವಾಹಿಕ ಭಿನ್ನಾಭಿಪ್ರಾಯ ಬಂದು ಜಗವಾಡುತ್ತಿದ್ದರಂತೆ. ಹೀಗಾಗಿ ಪತಿ ತೊರೆದ ಪತ್ನಿ ತನ್ನ ತವರುಮನೆಗೆ ತೆರಳಿದ್ದಳು. ಬಳಿಕ ಗಂಡನೂ 2014ರಲ್ಲಿ ಅಮೆರಿಕಕ್ಕೆ ಹೋಗಿದ್ದರು.

2017ರಲ್ಲಿ ಪತಿ ಅಮೆರಿಕದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆತನ ವಿರುದ್ಧ ಪತ್ನಿ ಮುಂಬೈನಲ್ಲಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ದೂರು ದಾಖಲಿಸಿದ್ದರು. ಅಮೆರಿಕದ ನ್ಯಾಯಾಲಯವು 2018ರಲ್ಲಿ ದಂಪತಿಯ ವಿಚ್ಛೇದನಕ್ಕೆ ಅನುಮತಿ ನೀಡಿತ್ತು.

ಇದನ್ನೂ ಓದಿ: Lok Sabha Election 2024: ಬಿಜೆಪಿ 5ನೇ ಪಟ್ಟಿ ಬಿಡುಗಡೆ: ಬಾಲಿವುಡ್ ನಟಿ ಕಂಗನಾಗೂ ಸಿಕ್ತು ಬಿಜೆಪಿ ಟಿಕೆಟ್..! ರಾಜ್ಯದಿಂದ ಮತ್ಯಾರಿಗೆ ಟಿಕೆಟ್?

ಹನಿಮೂನ್‌ಗೆಂದು ನೇಪಾಳಕ್ಕೆ ಹೋದಾಗ ತನಗೆ ಆದ ಅವಮಾನ ಸೇರಿದಂತೆ ತಮ್ಮ ಮದುವೆ ಸಮಯದಲ್ಲಿ ನಡೆದ ಭಯಾನಕ ಘಟನೆಗಳ ಬಗ್ಗೆ ಪತ್ನಿ ತನ್ನ ಅರ್ಜಿಯಲ್ಲಿ ತಿಳಿಸಿದ್ದರು. ʼಈ ಹಿಂದೆ ನನ್ನ ಎಂಗೇಜ್ಮೆಂಟ್ ಮುರಿದುಬಿದ್ದಿದ್ದರಿಂದ ಪತಿ ತನ್ನನ್ನು ʼಸೆಕೆಂಡ್‌ ಹ್ಯಾಂಡ್‌ʼ ಅಂತಾ ಕರೆದಿದ್ದ. ಪತಿ ಮಾಡಿದ ಅವಮಾನದ ಬಗ್ಗೆ ಪತ್ನಿ ಕಣ್ಣೀರು ಸುರಿಸುತ್ತಾ ಕೋರ್ಟ್‌ಗೆ ವಿವರಿಸಿದ್ದಳು. ಹೀಗಾಗಿ ಕೋರ್ಟ್‌ ಪತಿಗೆ 3 ಕೋಟಿ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News