ನವದೆಹಲಿ: ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ಅವರು ಹರಿಯಾಣದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಚಂಡೀಗಡದ ರಾಜ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಜನ್ನಾಯಕ್ ಜನತಾ ಪಕ್ಷ ಅಥವಾ ಜೆಜೆಪಿಯ ಮುಖ್ಯಸ್ಥ ದುಶ್ಯಂತ್ ಚೌತಲಾ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಮಾರಂಭದಲ್ಲಿ ಹಲವಾರು ಕೇಂದ್ರ ಮತ್ತು ರಾಜ್ಯ ಸಚಿವರು ಮತ್ತು ಬಿಜೆಪಿ ಹಿರಿಯ ಮುಖಂಡರು ಭಾಗವಹಿಸಿದ್ದರು. ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಜೆ.ಪಿ.ನಡ್ಡಾ, ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್, ಅವರ ಪುತ್ರ ಮತ್ತು ಪಕ್ಷದ ಹಿರಿಯ ಮುಖಂಡ ಸುಖ್ಬೀರ್ ಬಾದಲ್ ಸೇರಿದ್ದಾರೆ. ಕಾಂಗ್ರೆಸ್ ನ ಭೂಪಿಂದರ್ ಹೂಡಾ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು. 40 ಸ್ಥಾನಗಳನ್ನು ಹೊಂದಿರುವ ಬಿಜೆಪಿ, ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆದ್ದ ದುಶ್ಯಂತ್ ಚೌತಲಾ ಅವರ ಜನ್ನಾಯಕ್ ಜಂತ ಪಕ್ಷ ಅಥವಾ ಜೆಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಏಳು ಸ್ವತಂತ್ರ ಶಾಸಕರು ಸಹ ಬಿಜೆಪಿಗೆ ಬೆಂಬಲವನ್ನು ನೀಡಿದ್ದು, 90 ಸದಸ್ಯರ ಸದನದಲ್ಲಿ 57 ಸ್ಥಾನಗಳನ್ನು ತಲುಪಲು ಸಹಾಯ ಮಾಡಿದೆ.
Chandigarh: Manohar Lal Khattar takes oath as the Chief Minister of Haryana, at the Raj Bhawan. #HaryanaAssemblyPolls pic.twitter.com/SBqHELyaAk
— ANI (@ANI) October 27, 2019
ನಿನ್ನೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರೊಂದಿಗಿನ ಸಭೆಯಲ್ಲಿ ಸರ್ಕಾರ ರಚಿಸುವುದಾಗಿ ಮೈತ್ರಿ ಹೇಳಿಕೊಂಡಿದೆ. ಆರಂಭದಲ್ಲಿ ದುಶ್ಯಂತ್ ಚೌತಲಾ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದ ಕಾಂಗ್ರೆಸ್, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದರಿಂದಾಗಿ ಕಾಂಗ್ರೆಸ್ ತನ್ನ ಪ್ರಯತ್ನವನ್ನು ಸ್ಥಗಿತಗೊಳಿಸಿತು. ಚುನಾವಣಾ ಫಲಿತಾಂಶದ ನಂತರ ಪ್ರಧಾನಿ ಮೋದಿ ಹರ್ಯಾಣದಂತಹ ರಾಜ್ಯದಲ್ಲಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಒಂದೇ ಪಕ್ಷ ಸತತವಾಗಿ ಅಧಿಕಾರ ಪಡೆಯುವುದು ಕಷ್ಟ ಎಂದು ಹೇಳಿ ಪಕ್ಷದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಶಿಕ್ಷೆಗೊಳಗಾದ ನಂತರ ತಿಹಾರ್ ಜೈಲಿನಲ್ಲಿದ್ದ ದುಶ್ಯಂತ್ ಚೌತಾಲಾ ಅವರ ತಂದೆ ಅಜಯ್ ಚೌತಲಾ ಅವರನ್ನು ಎರಡು ವಾರಗಳ ಪೆರೋಲ್ ಮೇಲೆ ಇಂದು ಬೆಳಿಗ್ಗೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.