ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಮೆಟ್ರಿಮೊನಿಯಲ್ ಜಾಹೀರಾತು ನೋಡಿ ಜನ ಏನನ್ನುತ್ತಿದ್ದಾರೆ ನೀವೇ ಓದಿ

ಯುವಕನೊಬ್ಬ ಜೀವನ ಸಂಗಾತಿಯನ್ನು ಹುಡುಕಲು ಜಾಹೀರಾತೊಂದನ್ನು ನೀಡಿದ್ದಾನೆ, ಆದರೆ ಅದನ್ನು ನೋಡಿದ ಜನರು ಅಂತಹ ಹುಡುಗಿಯನ್ನು ಎಲ್ಲಿಯೂ ಸಿಗುವುದಿಲ್ಲ ಎಂದು ಹೇಳುತ್ತಿದ್ದು, ನೀನು ಜೀವನಪೂರ್ತಿ ಒಂಟಿಯಾಗಿಯೇ ಉಳಿಯುವಿ ಎಂದು ಆತನಿಗೆ ಹೇಳುತ್ತಿದ್ದಾರೆ.

Last Updated : Oct 6, 2020, 02:37 PM IST
  • ಮದುವೆಗಾಗಿ ವಿಶಿಷ್ಠ ಜಾಹೀರಾತು.
  • ಸಾಮಾಜಿಕ ಮಾಧ್ಯಮಗಳ ಗೀಳು ಇಲ್ಲದ ವಧು ಬೇಕಾಗಿದ್ದಾಳೆ.
  • IAS ಅಧಿಕಾರಿಯೊಬ್ಬರು ಈ ಜಾಹೀರಾತನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಮೆಟ್ರಿಮೊನಿಯಲ್ ಜಾಹೀರಾತು ನೋಡಿ ಜನ ಏನನ್ನುತ್ತಿದ್ದಾರೆ ನೀವೇ ಓದಿ title=

ನವದೆಹಲಿ: ಮದುವೆಯ (Marriage) ಬಗ್ಗೆ ಯುವಕ-ಯುವತಿಯರಲ್ಲಿ ಅನೇಕ ಆಕಾಂಕ್ಷೆಗಳಿರುತ್ತವೆ. ಜೀವನ ಸಂಗಾತಿಯ ಬಗ್ಗೆ ಅನೇಕ ಆಸೆಗಳನ್ನು ಹೊಂದಿರುತ್ತಾರೆ. ಅವಳು ಸುಂದರವಾಗಿರಬೇಕು, ಪ್ರತಿಭಾವಂತಳಾಗಿರಬೇಕು. ಸಂಗಾತಿ ಹುಡುಕಾಟಕ್ಕೆ  ಜಾಹೀರಾತುಗಳ ಸಹಾಯ ಕೂಡ ಪಡೆಯಲಾಗುತ್ತದೆ.  (Matrimonial advertisement). ಇಂತಹುದೇ ಒಂದು ಘಟನೆಯಲ್ಲಿ ಯುವಕನೊಬ್ಬ ತನ್ನ ಜೀವನ ಸಂಗಾತಿಯನ್ನು ಹುಡುಕಲು ಜಾಹೀರಾತು ನೀಡಿದ್ದಾನೆ, ಆದರೆ ಅವನನ್ನು ನೋಡಿದ ಜನರು ಅಂತಹ ಹುಡುಗಿ ಎಲ್ಲಿಯೂ ಸಿಗುವುದು ಕಷ್ಟ ಎಂದುಹೇಳುತ್ತಿದ್ದು, ನೀನು ಜೀವನ ಪೂರ್ತಿ ಒಂಟಿಯಾಗಿಯೇ ಇರುವೆ ಎಂದು ಹೇಳುತ್ತಿದ್ದಾರೆ.

ಇದನ್ನು ಓದಿ- ಒಂದೇ ಮಂಟಪದಲ್ಲಿ Girl Friend ಜೊತೆಗೆ Love ಹಾಗೂ Would Be ಜೊತೆಗೆ Arrange Marriage ಆದ ವರ

ಈ ವಿಶೇಷ ಜಾಹೀರಾತನ್ನು IAS ಅಧಿಕಾರಿ ನಿತೀನ್ ಸಾಂಗವಾನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಟ್ವಿಟ್ಟರ್ತಿಗಳು ಸಿಕ್ಕಾಪಟ್ಟೆ ಕಾಮೆಂಟ್ ಮಾಡುತ್ತಿದ್ದು, ಇದೀಗ ಯುವಕನ ಜಾಹೀರಾತು ಭಾರಿ ವೈರಲ್ ಆಗಿದೆ.

ವಧುವಿನ ಕುರಿತಾದ ಯುವಕನ ಅಪೇಕ್ಷೆಗಳು
ವೃತ್ತಿಯಲ್ಲಿ ವಕೀಲನಾಗಿರುವ ಯುವಕನ ಕುರಿತಾದ ಮದುವೆಯ ಜಾಹೀರಾತು ಇದಾಗಿದೆ. ಜಾಹೀರಾತಿನಲ್ಲಿ ಮೊದಲು ಯುವಕನ ಕುರಿತು ಹೊಗಳಿಕೆಯ ಮಾತುಗಳನ್ನು ಹೇಳಲಾಗಿದೆ. ಬಳಿಕ ವಧುವಿನ ಕುರಿತು ಹೇಳಲಾಗಿದ್ದು, ಯುವತಿ ಸುಂದರ, ಸ್ಲಿಮ್ ಹಾಗೂ ಎತ್ತರದ ಮೈಕಟ್ಟು ಹೊಂದಿರಬೇಕು. ಇದಲ್ಲದೆ ಯುವತಿಗೆ ಸಾಮಾಜಿಕ ಮಾಧ್ಯಮಗಳ ಗೀಳು ಇರಬಾರದು ಎಂದು ಹೇಳಲಾಗಿದೆ.

ಇದನ್ನೇ ಓದಿದ ನೆಟ್ಟಿಗರು ಕಾಮೆಂಟ್ಸ್ ಮಾಡಲಾರಂಭಿಸಿದ್ದು ಜಾಹೀರಾತು ಇದೀಗ ವೈರಲ್ ಆಗಿದೆ. ಬಾತುಕೋಳಿಯ ಭಾವಚಿತ್ರವೊಂದನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರ, ಯುವಕನಿಗೆ ಯುವತಿ ದೊರೆಕಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ- ಹಸೆಮಣೆ ಏರಲು ಹೊರಟಿದ್ದಾಳೆ ಸಿಂಘಂ ಬೆಡಗಿ Kajal Aggarwal, ವರ ಯಾರು ಗೊತ್ತಾ?

ಮತ್ತೋರ್ವ ಬಳಕೆದಾರ, "ಬಡಪಾಯಿ ಒಂಟಿಯಾಗಿಯೇ ಮರಣಹೊಂದಲಿದ್ದಾನೆ, ಇಂತಹ ಯುವತಿ ಸಿಗುವುದು ಈ ಜನ್ಮದಲ್ಲಿ ಕಷ್ಟ' ಎಂದು ಬರೆದಿದ್ದಾರೆ.

ಈ ಜಾಹೀರಾತಿನ ಸ್ನಾಪ್ ಶಾಟ್ ಹಂಚಿಕೊಂಡಿರುವ IAS ಅಧಿಕಾರಿ, "ಮದುವೆಗಾಗಿ  ಕಂಕಣ ಬಲ ಕೂಡಿಸುವ ಮಾನದಂಡಗಳು ಇದೀಗ ಬದಲಾಗುತ್ತಿವೆ" ಎಂದಿದ್ದಾರೆ.

Trending News