ನವದೆಹಲಿ: ಬಾಲಿವುಡ್ ನಲ್ಲಿ ಸಿಂಘಂ ಗರ್ಲ್ ಎಂದೇ ಖ್ಯಾತಿ ಪಡೆದಿರುವ ಹಾಗೂ ಸೌತ್ ಸೂಪರ್ ಸ್ಟಾರ್ ಕಾಜಲ್ ಅಗರ್ವಾಲ್ (Kajal Aggarwal) ಗೆ ಸಂಬಂಧಿಸಿದ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಶೀಘ್ರದಲ್ಲಿಯೇ ಕಾಜಲ್ ತನ್ನ ರಿಯಲ್ ಲೈಫ್ ನಲ್ಲಿ ವಧುವಾಗಲು ಸಿದ್ಧತೆ ನಡೆಸಿದ್ದಾಳೆ. ತನ್ನ ಮದುವೆಯ ವಿಷಯದ ಕುರಿತಾದ ಮಾಹಿತಿ ಸ್ವತಃ ಕಾಜಲ್ ಅವರೇ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾಳೆ. ಕಾಜಲ್ ತನ್ನ ಮದುವೆಯ ಮಮತೆಯ ಕರೆಯೋಲೆಯನ್ನು ಸಾಮಾಹಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ.
ಕಾಜಲ್ ಕುಟುಂಬ ಸದಸ್ಯರು ಆಕೆಗಾಗಿ ವರನ ಹುಡುಕಾಟದಲ್ಲಿದ್ದಾರೆ ಎಂಬ ಮಾಹಿತಿ ಹಲವು ಬಾರಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಪ್ರಸ್ತುತ ಅವರ ಕುಟುಂಬ ಸದಸ್ಯರು ಈ ಕಾರ್ಯದಲ್ಲಿ ಯಶಸ್ಸ್ತು ಸಾಧಿಸಿದ್ದಾರೆ ಎನ್ನಲಾಗಿದೆ. ಕಾಜಲ್ ಅಭಿಮಾನಿಗಳಿಗೆ ಈ ಸುದ್ದಿ ಸಾಕಷ್ಟು ಅಚ್ಚರಿ ಮೂಡಿಸಿದ್ದರು ಕೂಡ ಕಾಜಲ್ ಕೈಹಿಡಿಯುವ ಆ ವರ ಯಾರು ಎಂಬ ಬಗ್ಗೆ ಇದೀಗ ಎಲ್ಲರಲ್ಲಿಯೂ ಕುತೂಹಲ ಮೂಡಿದೆ.
ಕಾಜಲ್ ಅಗರ್ವಾಲ್ ಈ ಒಳ್ಳೆಯ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಉದ್ಯಮಿ ಗೌತಮ್ ಕಿಚ್ಲು ಅವರನ್ನು ಮದುವೆಯಾಗಲಿದ್ದೇನೆ ಎಂದು ಕಾಜಲ್ ಈ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಕಾಜಲ್ ಕೂಡ ಮದುವೆಯ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಈ ವಿವಾಹ ಅಕ್ಟೋಬರ್ 30 ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ- ಕಾಜಲ್ ಅಗರ್ವಾಲ್ ಅವರ Unseen Photos ವೈರಲ್
ಕಳೆದ ವರ್ಷ, ಕಾಜಲ್ ಅಗರ್ವಾಲ್ ಅವರು ಚಿತ್ರರಂಗಕ್ಕೆ ಸೇರದ ವ್ಯಕ್ತಿಯನ್ನು ಮದುವೆಯಾಗುವುದಾಗಿ ಬಹಿರಂಗಪಡಿಸಿದ್ದರು. ಲಕ್ಷ್ಮಿ ಮಂಚು ಅವರ ತೆಲುಗು ಭಾಷೆಯ ಚಾಟ್ ಶೋ 'ಫೀಟ್ ಅಪ್ ವಿಥ್ ದಿ ಸ್ಟಾರ್ಸ್ ತೆನಲ್ಲಿ, ಕಾಜಲ್ ಅವರು 2020 ರಲ್ಲಿ ಸೆಟ್ಲ್ ಆಗಲು ಯೋಜಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. 'ತಮ್ಮ ಐಡಲ್ ಮ್ಯಾನ್ ಬಗ್ಗೆ ಮಾತನಾಡುತ್ತಾ, 'ಅಂತಹ ಹಲವು ವಿಷಯಗಳಿವೆ, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಆ ವ್ಯಕ್ತಿ ಅಧಿಕಾರವಾದಿ, ಕಾಳಜಿಯುಳ್ಳ ಮತ್ತು ಆಧ್ಯಾತ್ಮಿಕ ಪ್ರವೃತ್ತಿಯವರಾಗಿರಬೇಕು' ಎಂದು ಕಾಜಲ್ ಹೇಳಿದ್ದರು.