ನೆಹರೂ, ಇಂದಿರಾ ನಂತರ ಹೊಸ ಇತಿಹಾಸ ರಚಿಸಿದ ನರೇಂದ್ರ ಮೋದಿ

ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೇರಿದ್ದಾರೆ. ನೆಹರೂ ಮತ್ತು ಇಂದಿರಾ ನಂತರ ಸತತ ಎರಡನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆದವರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರನೆಯವರಾಗಿದ್ದಾರೆ.  

Last Updated : May 23, 2019, 08:50 PM IST
ನೆಹರೂ, ಇಂದಿರಾ ನಂತರ ಹೊಸ ಇತಿಹಾಸ ರಚಿಸಿದ ನರೇಂದ್ರ ಮೋದಿ title=

ನವದೆಹಲಿ: ಪಂಡಿತ್ ಜವಾಹರ್ ಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಸೇರಿದ್ದಾರೆ. ನೆಹರೂ ಮತ್ತು ಇಂದಿರಾ ನಂತರ ಸತತ ಎರಡನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆದವರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರನೆಯವರಾಗಿದ್ದಾರೆ.
 
ಇಂದು ದೇಶಾದ್ಯಂತ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಈ ವರೆಗೂ ಬಂದಿರುವ ಫಲಿತಾಂಶವನ್ನು ಗಮನಿಸಿದಾಗ ಅಮಿತ್ ಶಾ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಸರಿ ಪಕ್ಷ 17 ನೇ ಲೋಕಸಭೆಯಲ್ಲಿ ಸಂಪೂರ್ಣ ಬಹುಮತಕ್ಕೆ ಅಗತ್ಯವಿರುವ 272 ಅಂಕಿಗಳನ್ನು ಸುಲಭವಾಗಿ ತಲುಪಲಿದೆ ಎಂದು ಕಂಡು ಬಂದಿದೆ. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಲೋಕಸಭೆಯಲ್ಲಿ 543 ಸ್ಥಾನಗಳಲ್ಲಿ 282 ಸ್ಥಾನಗಳನ್ನು ಗೆದ್ದಿತ್ತು.

ದೇಶದಲ್ಲಿ ಸ್ವಾತಂತ್ರ್ಯ ಪಡೆದ ನಂತರ, ಪ್ರಧಾನಿ ಜವಾಹರಲಾಲ್ ನೆಹರು ಮೊದಲ ಲೋಕಸಭಾ ಚುನಾವಣೆಯಲ್ಲಿ 1951-52 ರಲ್ಲಿ ಸುಮಾರು ನಾಲ್ಕನೇ ಮೂರು ಸ್ಥಾನಗಳನ್ನು ಗೆದ್ದಿದ್ದರು. ಇದರ ನಂತರ, 1957 ಮತ್ತು 1962 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಬಹುಮತದೊಂದಿಗೆ ಗೆದ್ದು ಸರ್ಕಾರ ರಚಿಸಿದ್ದರು. ದೇಶದಲ್ಲಿ ಸ್ವಾತಂತ್ರ್ಯಾನಂತರ 1951 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಗಳಿಂದಾಗಿ, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು ಐದು ತಿಂಗಳು ಬೇಕಾಯಿತು. 

ಇದು ಕಾಂಗ್ರೆಸ್ನ ಅಜೇಯ ಚಿತ್ರವಾಗಿತ್ತು ಮತ್ತು ಭಾರತೀಯ ಜನಸಂಘ, ಕಿಶನ್ ಮಜ್ದೂರ್ ಪ್ರಜಾ ಪಕ್ಷ ಮತ್ತು ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಸಮಾಜವಾದಿ ಪಕ್ಷಗಳು ಆಕಾರವನ್ನು ಪಡೆದುಕೊಳ್ಳಲು ಪ್ರಾರಂಭಿಸಿದ ಸಮಯವಾಗಿತ್ತು. 1951-52ರ ಚುನಾವಣೆಯಲ್ಲಿ ಕಾಂಗ್ರೆಸ್ 489 ಸ್ಥಾನಗಳಲ್ಲಿ 364 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಆ ಸಮಯದಲ್ಲಿ ಪಕ್ಷಕ್ಕೆ 45 ರಷ್ಟು ಮತಗಳನ್ನು ಪಡೆದಿತ್ತು. ಈಗ 1957 ರಲ್ಲಿ ನೆಹರು ಮರುಚುನಾವಣೆಯಲ್ಲಿದ್ದರು. ಪ್ರಧಾನಿ ನೆಹರು 1955 ರಲ್ಲಿ ಹಿಂದೂ ಮದುವೆ ಕಾನೂನು ಜಾರಿಗೆ ತಂದ ನಂತರ ಪಕ್ಷದ ಒಳಗೆ ಮತ್ತು ಹೊರಗೆ ಬಲಪಂಥೀಯ ಸಿದ್ಧಾಂತದೊಂದಿಗೆ ಹೋರಾಡಬೇಕಾಯಿತು.

ದೇಶದಲ್ಲಿ ವಿವಿಧ ಭಾಷೆಗಳ ಬಗ್ಗೆ ವಿವಾದ ಕೂಡಾ ಇತ್ತು. ಇದರ ಪರಿಣಾಮದಿಂದ 1953 ರಲ್ಲಿ ರಾಜ್ಯ ಪುನರ್ ಸಂಘಟನಾ ಸಮಿತಿಯ ರಚನೆಯ ನಂತರ ಭಾಷಾವಾರು ಆಧಾರದ ಮೇಲೆ ಹಲವಾರು ರಾಜ್ಯಗಳು ರೂಪುಗೊಂಡಿವೆ. ಆಹಾರ ಅಭದ್ರತೆ ಬಗ್ಗೆ ದೇಶದಲ್ಲಿ ಬೇರೆ ಸಮಸ್ಯೆಯೂ ಕೂಡ ಇತ್ತು. ಆದರೆ ಈ ಎಲ್ಲ ವಿಚಾರಗಳ ನಡುವೆಯೂ, 1957 ರ ಚುನಾವಣೆಯಲ್ಲಿ 371 ಸ್ಥಾನಗಳೊಂದಿಗೆ ನೆಹರು ಅದ್ಭುತ ವಿಜಯ ಸಾಧಿಸಿದರು. 1951-52ರಲ್ಲಿ 45 ಪ್ರತಿಶತ ಕಾಂಗ್ರೆಸ್ ಮತಗಳ ಪಾಲು 1957 ರ ಚುನಾವಣೆಯಲ್ಲಿ 47.78 ಪ್ರತಿಶತಕ್ಕೆ ಏರಿಕೆಯಾಗಿದೆ. 1962 ರ ಸಾರ್ವತ್ರಿಕ ಚುನಾವಣೆಯಲ್ಲಿ, 494 ಲೋಕಸಭಾ ಕ್ಷೇತ್ರಗಳಲ್ಲಿ 361 ಸೀಟುಗಳನ್ನು ನೆಹರು ಗೆಲುವು ಸಾಧಿಸಿದ್ದಾರೆ.

ಸ್ವತಂತ್ರ ಭಾರತದ 20 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷ ಇಳಿಮುಖವಾಗ ತೊಡಗಿತು. ಆರು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿತು. ಈ ಆರು ರಾಜ್ಯಗಳಲ್ಲಿ ಕಾಂಗ್ರೆಸ್ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮೊದಲಿಗೆ ಸೋಲನುಭವಿಸಿತು. ಆದರೆ 1967 ರಲ್ಲಿ ಲೋಕಸಭೆಯಲ್ಲಿ ಒಟ್ಟು 520 ಸ್ಥಾನಗಳಲ್ಲಿ ನೆಹರೂ ಅವರ ಮಗಳು ಇಂದಿರಾ ಗಾಂಧಿ 283 ಮತಗಳಿಂದ ಗೆದ್ದರು. ಇದು ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಮೊದಲ ವಿಜಯವಾಗಿತ್ತು. 1969 ರಲ್ಲಿ, ಇಂದಿರಾ ಪಕ್ಷದ  ಕೆಲವು ಹಿರಿಯ ಮುಖಂಡರಿಗೆ ಹೊರಗಿನ ದಾರಿ ತೋರಿಸಿದರು. ಇದೇ ಅವಧಿಯಲ್ಲಿ ಇಂದಿರಾ ಗಾಂಧಿಯವರು ಗರೀಬಿ ಹಟಾವೊ ಎಂಬ ಘೋಷಣೆ ಮಾಡಿದರು. 1971 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು 352 ಸ್ಥಾನಗಳಿಂದ ಗೆದ್ದಿದ್ದಾರೆ.

2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿದ್ದಾರೆ. ದೇಶದಾದ್ಯಂತ ಅಭಿವೃದ್ಧಿಯ ಭರವಸೆಯೊಂದಿಗೆ, ನರೇಂದ್ರ ಮೋದಿ ತನ್ನ  2014 ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಗೆದ್ದು 282 ಸ್ಥಾನಗಳನ್ನು ಗೆದ್ದಿದ್ದರು. ಇದೀಗ ಸತತ ಎರಡನೇ ಬಾರಿಗೆ ಮೋದಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
 

Trending News