ನವದೆಹಲಿ: ಹೊಸ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ಹೊಸ ಹಣಕಾಸಿನ ಆರಂಭದೊಂದಿಗೆ ಹಲವಾರು ಬದಲಾವಣೆಗಳು ಸಹ ಕೂಡ ಆಗಲಿದ್ದಾವೆ. ಬದಲಾವಣೆಗಳಲ್ಲಿ ಪ್ರಮುಖವಾದವು ಅಂದ್ರೆ, ನೌಕರರ ಕೆಲಸದ ಸಮಯ ಮತ್ತು ಅವರ ಸಂಬಳದ ರಚನೆಯಲ್ಲಿನ ಬದಲಾವಣೆ. ಪ್ರಸ್ತುತ 9 ಗಂಟೆಗಳಿಂದ ಕೆಲಸದ ಸಮಯವನ್ನು 12 ಗಂಟೆಗಳವರೆಗೆ ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ. ಆದಾಗ್ಯೂ, ಕೆಲಸದ ಸಮಯ ಹೆಚ್ಚಳದೊಂದಿಗೆ, ಸರ್ಕಾರವು ಕೆಲಸದ ದಿನಗಳ ಸಂಖ್ಯೆಯನ್ನು ವಾರದಲ್ಲಿ ನಾಲ್ಕು ದಿನಗಳಿಗೆ ಇಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಏಪ್ರಿಲ್ 1 ರಿಂದ ಗ್ರ್ಯಾಚುಟಿ ಮತ್ತು ಭವಿಷ್ಯ ನಿಧಿಯಲ್ಲಿನ ಹೆಚ್ಚಳ ಮತ್ತು ಟೇಕ್-ಹೋಮ್ ಸಂಬಳ(Take Home Salary)ದಲ್ಲಿನ ಇಳಿಕೆಯೊಂದಿಗೆ ನೌಕರರ ವೇತನ ರಚನೆಯಲ್ಲಿನ ಬದಲಾವಣೆಯನ್ನು ಸಹ ಒಳಗೊಂಡಿರುತ್ತದೆ. 2020 ರಲ್ಲಿ ಸರ್ಕಾರ ಮೂರು ವೇತನ ಸಂಹಿತೆ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದ್ದರಿಂದ ಇದು ಜಾರಿಗೆ ಬರಲಿದೆ. ಈ ಮೂರು ಕಾನೂನುಗಳನ್ನು ಈಗ ಏಪ್ರಿಲ್ 1, 2021 ರಿಂದ ಜಾರಿಗೆ ತರಬಹುದು. ಇದರಿಂದ, ನೌಕರರ ಟೇಕ್-ಹೋಮ್ ಸಂಬಳ ಕಡಿಮೆಯಾಗುತ್ತದೆ. ಅಲ್ಲದೆ, ಇದರ ಪರಿಣಾಮವು ಎಲ್ಲಾ ಉದ್ಯೋಗಿಗಳು ಮತ್ತು ಉದ್ಯೋಗದಾತರ ಮೇಲೆ ಇರುತ್ತದೆ. ಖಾಸಗಿ ಕಂಪನಿಗಳ ಬ್ಯಾಲೆನ್ಸ್ ಶೀಟ್ ಕೂಡ ಈ ಹೊಸ ನಿಯಮದಿಂದ ಪ್ರಭಾವಿತವಾಗಿರುತ್ತದೆ ಎನ್ನಲಾಗಿದೆ.
April Month Bank Holidays : ಏಪ್ರಿಲ್ ತಿಂಗಳಲ್ಲಿ ಎಷ್ಟು 'ದಿನ ಬ್ಯಾಂಕ್ ರಜೆ' ಇರಲಿದೆ ಗೊತ್ತಾ?
ವೇತನದ ಹೊಸ ವ್ಯಾಖ್ಯಾನದಡಿಯಲ್ಲಿ, ಭತ್ಯೆಗಳು ಒಟ್ಟು ವೇತನದ ಶೇಕಡಾ 50 ರಷ್ಟಾಗುತ್ತದೆ.
ಹೊಸ ಕಾನೂನು ಉದ್ಯೋಗದಾತರು ಮತ್ತು ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ಸರ್ಕಾರ(Central Govt) ಹೇಳಿಕೊಂಡಿದೆ.
ಹೊಸ ನಿಯಮಗಳ ಪ್ರಕಾರ, ಈಗ ಮೂಲ ವೇತನವು ಒಟ್ಟು ವೇತನದ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ಈ ಸಂದರ್ಭದಲ್ಲಿ, ನೌಕರರ ವೇತನದ ರಚನೆಯು ಬದಲಾಗುತ್ತದೆ.
Holi 2021ರ ಬಳಿಕ 11 ಕೋಟಿ 74 ಲಕ್ಷ ರೈತರಿಗೆ ಸಿಗಲಿದೆ ಈ ಸಂತಸದ ಸುದ್ದಿ!
ಭವಿಷ್ಯ ನಿಧಿಯು ಮೂಲ ವೇತನವನ್ನು ಆಧರಿಸಿರುವುದರಿಂದ, ಮೂಲ ವೇತನದ ಹೆಚ್ಚಳದೊಂದಿಗೆ ಪಿಎಫ್(PF) ಹೆಚ್ಚಾಗುತ್ತದೆ, ಅಂದರೆ ಟೇಕ್-ಹೋಮ್ ಸಂಬಳದಲ್ಲಿ ಕಡಿತ ಉಂಟಾಗುತ್ತದೆ.
ನೌಕರರ ಗ್ರ್ಯಾಚುಟಿ ಹೆಚ್ಚಳ ಮತ್ತು ಪಿಎಫ್ಗೆ ನೀಡಿದ ಕೊಡುಗೆ ನಿವೃತ್ತಿಯ ನಂತರ ಪಡೆದ ಮೊತ್ತವನ್ನು ಹೆಚ್ಚಿಸುತ್ತದೆ.
ಹೊಸ ಕರಡು ಕಾನೂನು ಗರಿಷ್ಠ 12 ಗಂಟೆಗಳ ಕಾಲ ಕೆಲಸ ಮಾಡಲು ಪ್ರಸ್ತಾಪಿಸಿದೆ.
ನಿಯಮಗಳ ಪ್ರಕಾರ, ಯಾವುದೇ ಉದ್ಯೋಗಿಯಿಂದ 5 ಗಂಟೆಗಳಿಗಿಂತ ಹೆಚ್ಚು ನಿರಂತರ ಕೆಲಸವನ್ನು ನಿಷೇಧಿಸಲಾಗಿದೆ. ಪ್ರತಿ 5 ಗಂಟೆಗಳ ನಂತರ 30 ನಿಮಿಷಗಳ ವಿಶ್ರಾಂತಿ ನೀಡುವಂತೆ ನೌಕರರಿಗೆ ಸೂಚನೆ ನೀಡಲಾಗಿದೆ.
Coronavirus: ಒಂದರಿಂದ ಎಂಟನೇ ತರಗತಿವರೆಗೆ ಈ ಬಾರಿಯೂ ನಡೆಯಲಿದೆ Online classes
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.