ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಭಾರತದಲ್ಲಿ ಮುಸ್ಲಿಮರಿಗಿಂತ ಹೆಚ್ಚು ಮುಸ್ಲಿಮೇತರರು ಐಎಸ್ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರದಂದು ಭಿಂದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಪಾಕಿಸ್ತಾನ ಕೆ ಐಎಸ್ಐ ಕೆ ಲಿಯೆ ಜಸುಸಿ ಮುಸಲ್ಮಾನ್ ಕಾಮ್ ಕರ್ ರಹೇ ಹೈ ಗೈರ್ ಮುಸಲ್ಮಾನ್ ಜಯದಾ ಕರ್ ರಹೇ ಹೈ (ಭಾರತದ ಮುಸ್ಲಿಮರಿಗಿಂತ ಹೆಚ್ಚು ಮುಸ್ಲಿಮೇತರರು ಐಎಸ್ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ) ಎಂದು ಹೇಳಿದರು.
ಪಾಕಿಸ್ತಾನದ ಐಎಸ್ಐ ಪರವಾಗಿ ಬಿಜೆಪಿ ಮತ್ತು ಭಜರಂಗದಳದವರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. “ಬಿಜೆಪಿ ಐಎಸ್ಐನಿಂದ ಹಣವನ್ನು ತೆಗೆದುಕೊಳ್ಳುತ್ತಿದೆ. ಇದಕ್ಕೆ ಗಮನ ನೀಡಬೇಕು. ನಾನು ನಿಮಗೆ ಇನ್ನೊಂದು ವಿಷಯ ಹೇಳುತ್ತೇನೆ ಭಾರತದ ಮುಸ್ಲಿಮರಿಗಿಂತ ಹೆಚ್ಚು ಮುಸ್ಲಿಮೇತರರು ಐಎಸ್ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆ 'ಎಂದು ಸಿಂಗ್ ಹೇಳಿದರು.
#WATCH MP: Congress leader Digvijaya Singh says, "Bajrang Dal, Bharatiya Janata Party (BJP) are taking money from ISI (Inter-Services Intelligence). Attention should be paid to this. Non-Muslims are spying for Pakistan's ISI more than Muslims. This should be understood." (31.08) pic.twitter.com/NPxltpaRZA
— ANI (@ANI) September 1, 2019
ಮಧ್ಯ ಪ್ರದೇಶದ ಪೊಲೀಸರ ಭಯೋತ್ಪಾದನಾ ವಿರೋಧಿ ದಳವು ಇತ್ತೀಚಿಗೆ ಪಾಕಿಸ್ತಾನದಿಂದ ಭಯೋತ್ಪಾದಕ ಧನ ಸಹಾಯ ಸಿಂಡಿಕೇಟ್ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸತ್ನಾದಿಂದ ಕೆಲವು ಜನರನ್ನು ಬಂಧಿಸಿದ್ದನ್ನು ಸಿಂಗ್ ಉಲ್ಲೇಖಿಸಿದರು. ಬಂಧಿತರಲ್ಲಿ ಒಬ್ಬರಾದ ಬಲರಾಮ್ ಸಿಂಗ್ ಈ ಹಿಂದೆ ಭಜರಂಗದಳದ ಜೊತೆ ಕೆಲಸ ಮಾಡಿದ್ದರು. ಇದೇ ರೀತಿಯ ಅಪರಾಧಕ್ಕಾಗಿ ಬಲ್ಬೀರ್ ಅವರನ್ನು 2017 ರಲ್ಲಿ ಬಂಧಿಸಲಾಗಿತ್ತು ಆದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಈ ಹೇಳಿಕೆಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ತೀವ್ರವಾಗಿ ಪ್ರತಿಕ್ರಿಯಿಸಿದರು, ಅವರು ಸುದ್ದಿಯಲ್ಲಿ ಉಳಿಯಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ ಎಂದು ಹೇಳಿದರು. “ಅವನು (ದಿಗ್ವಿಜಯ ಸಿಂಗ್) ಮತ್ತು ಅವನ ನಾಯಕರು ಪಾಕಿಸ್ತಾನದ ಭಾಷೆಯನ್ನು ಮಾತನಾಡುತ್ತಾರೆ. ಪಾಕಿಸ್ತಾನ ರಾಹುಲ್ ಗಾಂಧಿಯನ್ನು (ಕಾಶ್ಮೀರದ ಮೇಲೆ) ಉಲ್ಲೇಖಿಸಿದೆ. ಬಿಜೆಪಿ-ಆರ್ಎಸ್ಎಸ್ಗೆ ಸಂಬಂಧಿಸಿದಂತೆ, ಇಡೀ ಜಗತ್ತು, ಇಡೀ ದೇಶವು ಅವರ ದೇಶಪ್ರೇಮದ ಬಗ್ಗೆ ತಿಳಿದಿದೆ' ಎಂದು ಹೇಳಿದ್ದಾರೆ