ಶಾಮ್ಲಿ: ಪಶ್ಹಿಮ ಉತ್ತರ ಪ್ರದೇಶದಲ್ಲಿರುವ ಶಾಮ್ಲಿ ಪ್ರದೇಶದಲ್ಲಿನ ಸಕ್ಕರೆ ಗಿರಣಿಯಲ್ಲಿ ಉಂಟಾದ ವಿಷ ಅನಿಲ ಸೋರಿಕೆಯಿಂದ 300 ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಎಎನ್ಐ ನ್ಯೂಸ್ ಏಜೆನ್ಸಿ ಪ್ರಕಾರ, ಈ ಅನಾಹುತಕ್ಕೆ ಶಾಲೆಯ ಪಕ್ಕದಲ್ಲೇ ಇರುವ ಸಕ್ಕರೆ ಗಿರಣಿಯಲ್ಲಿ ರಾಸಾಯನಿಕಗಳ ಬಳಕೆ ಮಾಡುತ್ತಿರುವುದೇ ಕಾರಣ ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳಲ್ಲಿ 30 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹರಾನ್ಪುರ ಆಯುಕ್ತರಿಗೆ ತನಿಖೆ ನಡೆಸಲು ಆದೇಶ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ವಿಷ ಅನಿಲ ಸೋರಿಕೆಯು ಮಕ್ಕಳಲ್ಲಿ ಹೊಟ್ಟೆ, ಗಂಟಲು, ಕಣ್ಣಿನ ಉರಿ ಮತ್ತು ಇತರ ಅಂಗಗಳಿಗೆ ತೊಂದರೆ ಉಂಟಾಗಿದೆ. ಇದರ ನಂತರ ಚಿಕಿತ್ಸೆಗಾಗಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
#Visuals Shamli: 300 students of Saraswati school ill due to use of chemical at a sugar mill nearby; doctor says no child is seriously ill. pic.twitter.com/I0HzrBIqgv
— ANI UP (@ANINewsUP) October 10, 2017
ಅಸ್ವಸ್ಥಗೊಂಡಿರುವ ಮಕ್ಕಳು ಅಧ್ಯಯನ ಮಾಡುತ್ತಿರುವ ಶಾಲೆಯ ಪಕ್ಕದಲ್ಲಿ ಒಂದೇ ಒಂದು ಸಕ್ಕರೆ ಗಿರಣಿ ಕಂಡು ಬರುತ್ತದೆ. ಈ ಗಿರಣಿಯಲ್ಲಿ ಜೈವಿಕ ಅನಿಲ ಸ್ಥಾವರವಿದ್ದು, ಅನಿಲ ಸ್ಥಾವರದಲ್ಲಿ ಉಂಟಾಗಿರುವ ವಿಷ ಅನಿಲ ಸೋರಿಕೆಯಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗುತ್ತಿದೆ.