ಮಹಾರಾಷ್ಟ್ರದಲ್ಲಿ 51 ಸಾವಿರಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ಘೋಷಣೆ

ಪಾಲ್ಘರ್ ಜಿಲ್ಲೆಯ 333 ಹಳ್ಳಿಗಳ 51,174 ರೈತರಿಗೆ ಬರಪರಿಸ್ಥಿತಿಗೆ ಪರಿಹಾರವಾಗಿ  ಒಟ್ಟು 21.09 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಹೇಳಿದ್ದಾರೆ.  

Last Updated : May 20, 2019, 04:00 PM IST
ಮಹಾರಾಷ್ಟ್ರದಲ್ಲಿ 51 ಸಾವಿರಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ಘೋಷಣೆ title=

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 51,000 ಕ್ಕೂ ಹೆಚ್ಚು ರೈತರಿಗೆ 21.09 ಕೋಟಿ ರೂಪಾಯಿಗಳ ಬರ ಪರಿಹಾರ ನೀಡಲಾಗಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಮುಂಗಾರಿನ ಕೊರತೆಯಿಂದಾಗಿ ಜಿಲ್ಲೆಯ ಜಲಾಶಯಗಳ ಒಟ್ಟು ಶೇಖರಣಾ ಸಾಮರ್ಥ್ಯದಲ್ಲಿ ಕೇವಲ ಶೇ.22ರಷ್ಟು ನೀರಿನ ಸಂಗ್ರಹವನ್ನು ಮಾತ್ರ ಹೊಂದಿದ್ದು, ರೈತರು ಹಾಕಿದ್ದ ಬೆಳೆಗಳು ನೀರಿಲ್ಲದೆ ಸಂಪೂರ್ಣ ನಾಶವಾಗಿವೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ನರ್ನವರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಇಲ್ಲಿಯವರೆಗೆ, ಪಾಲ್ಘರ್ ಜಿಲ್ಲೆಯ 333 ಹಳ್ಳಿಗಳ 51,174 ರೈತರಿಗೆ ಬರಪರಿಸ್ಥಿತಿಗೆ ಪರಿಹಾರವಾಗಿ  ಒಟ್ಟು 21.09 ಕೋಟಿ ರೂ.ಗಳನ್ನು ನೀಡಲಾಗಿದೆ" ಎಂದು ಪ್ರಶಾಂತ್ ಹೇಳಿದ್ದಾರೆ.

ಇದಕ್ಕೂ ಮುನ್ನ, ರಾಜ್ಯ ಬುಡಕಟ್ಟು ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೀಶಾ ವರ್ಮಾ ಅವರು ಜಿಲ್ಲೆಯಲ್ಲಿ ನೀರಿನ ಸಮಸ್ಯೆನ್ನು ಪರಿಶೀಲಿಸಲು ಕಳೆದ ವಾರ ಪ್ರವಾಸ ಕೈಗೊಂಡಿದ್ದರು. ಅಲ್ಲದೆ, ಬರ ಪರಿಸ್ಥಿತಿ ನಿಭಾಯಿಸಲು ಹಣದ ಕೊರೆತೆಯಿಲ್ಲ. ರೈತರಿಗೆ ಬರಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದರು.

Trending News