'ನಾವು ಹುಡುಗಿ ಮನೆಯವರು, ಏನಾದರೂ ಕೊರತೆ ಇದ್ದರೆ...' ಎಂದು ಮುಕೇಶ್ ಅಂಬಾನಿ ಹೇಳಿದಾಗ!

ಉದಯ್ ವಿಲಾಸ್ ಹೋಟೆಲ್ ನಲ್ಲಿ ಭಾನುವಾರ ಸಂಗೀತ ಸಮಾರಂಭ ಆರಂಭವಾಯಿತು. ಅಲ್ಲಿ ಮುಕೇಶ್ ಅಂಬಾನಿ ಅವರ ಬೀಗರು ಅಜಯ್ ಪಿರಾಮಲ್ ಮಾತುಕತೆ.

Last Updated : Dec 10, 2018, 02:09 PM IST
'ನಾವು ಹುಡುಗಿ ಮನೆಯವರು, ಏನಾದರೂ ಕೊರತೆ ಇದ್ದರೆ...' ಎಂದು ಮುಕೇಶ್ ಅಂಬಾನಿ ಹೇಳಿದಾಗ! title=

ನವದೆಹಲಿ: ಮಗಳ ಮದುವೆ ಯಾವುದೇ ತಂದೆಗೆ ಹೆಚ್ಚಿನ ಜವಾಬ್ದಾರಿಯದ್ದಾಗಿದೆ. ಅನೇಕ ವೇಳೆ ಮದುವೆಗಾಗಿ ಐಶಾರಾಮಿ ವ್ಯವಸ್ಥೆ ಮಾಡಿದ್ದಾಗ್ಯೂ ಸಣ್ಣ ಪುಟ್ಟ ಕೊರತೆಗಳಿಗಾಗಿ ಕ್ಷಮೆಯಾಚಿಸುವಂತಾಗುತ್ತದೆ. ಆದರೆ ದೇಶದ ಅತಿದೊಡ್ಡ ಉದ್ಯಮಿ ಕೂಡ ತಮ್ಮ ಮಗಳ ಮದುವೆಯಲಿ ಇಂತಹದ್ದೇ ಸನ್ನಿವೇಶವನ್ನು ಎದುರು ನೋಡುತ್ತಾರೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಉದಯ್ ಪುರದ ಪ್ರಸಿದ್ಧ ಹೋಟೆಲ್ ಉದಯ್ ವಿಲಾಸ್ ನಲ್ಲಿ ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಅವರ ವಿವಾಹ ಸಮಾರಂಭ ನಡೆಯುತ್ತಿದೆ.

ಅದು ಮುಕೇಶ್ ಅಂಬಾನಿ ಬೀಗರಾದ ಅಜಯ್ ಪಿರಾಮಲ್ ಅವರ ನಗರವಾಗಿದೆ. ಅಲ್ಲಿ ಮುಕೇಶ್ ಅಂಬಾನಿ ತಮ್ಮ ಮಗಳ ಮದುವೆಗಾಗಿ ಮಾಡಿರುವ ವ್ಯವಸ್ಥೆ ಕಂಡು ಸ್ವತಃ ಪಿರಮಾಲ್ ಕುಟುಂಬ ಅಂಬಾನಿ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ಆದರೆ ಭಾನುವಾರ ನಡೆಸ ಸಂಗೀತ ಕಾರ್ಯಕ್ರಮದ ಭಾಷಣದಲ್ಲಿ ಮುಕೇಶ್ ಅಂಬಾನಿ ಮಾತನಾಡಿದ್ದನ್ನು ಕೇಳಿದರೆ ಪ್ರತಿ ತಂದೆಯೂ ಭಾವುಕರಾಗುತ್ತಾರೆ.

ಭಾನುವಾರದಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ ಮತ್ತು ಅವರ ಬೀಗರಾದ ಅಜಯ್ ಪಿರಮಾಲ್ ಮಾತನಾಡಿದರು. ಮಾಧ್ಯಮ ವರದಿಗಳ ಪ್ರಕಾರ ಆ ಸಂದರ್ಭದಲ್ಲಿ ಮಾತನಾಡಿಯ ಮುಕೇಶ್ ಅಂಬಾನಿ ತಮ್ಮ ಭಾಷಣದಲ್ಲಿ, 'ದೇಶ-ವಿದೇಶದಿಂದ ಆಗಮಿಸಿರುವ ಎಲ್ಲಾ ಅತಿಥಿಗಳಿಗೂ ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾನು ನನ್ನ ಎಲ್ಲಾ ಸ್ನೇಹಿತರು, ಅತಿಥಿಗಳಿಗೆ ಕೇಳಲು ಬಯಸುತ್ತೇನೆ. ಏನಾದರೂ ಕೊರತೆ ಇದ್ದರೆ, ಸ್ವಲ್ಪ ಸಹಿಸಿಕೊಳ್ಳಿ. ನಾವು ಹುಡುಗಿ ಮನೆಯವರು. ಮಗಳ ಮದುವೆ...'

ಅದೇ ಸಮಯದಲ್ಲಿ ಅಂಬಾನಿ ಅವರ ಬೀಗರು ಅಜಯ್ ಪಿರಮಾಲ್ ಮಾತನಾಡುತ್ತಾ, 'ನಾವು ಹುಡುಗಿ ಕಡೆಯವರು ಎಂದು ಮುಕೇಶ್ ಹೇಳಿದ್ದಾರೆ. ಹಲವು ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ವಧುವಿನ ಕಡೆಯವರು ವರನ ಕುಟುಂಬ, ಸ್ನೇಹಿತರು ಮತ್ತು ಅತಿಥಿಗಳಿಗಾಗಿ ವ್ಯವಸ್ಥೆ ಮಾಡುತ್ತಾರೆ. ನಾವು ಇದನ್ನು ಬದಲಾಯಿಸಲು ಪ್ರಯತ್ನಿಸಿದೆವು, ಮುಕೇಶ್ ಬಳಿ ನಾವು ಏನನ್ನಾದರೂ ಮಾಡುತ್ತೇವೆ ಎಂದು ವಿನಂತಿಸಿದೆವೂ ಕೂಡ. ಆದರೆ ಯಶಸ್ವೀ ಉದ್ಯಮಿ ಯಾರೆಂದು ನಿಮಗೆ ಗೊತ್ತಿದೆ... ಮುಕೇಶ್ ನನಗೆ ಈ ಅವಕಾಶ ನೀಡಲಿಲ್ಲ. ಪ್ರತಿಯೊಬ್ಬರೂ ಇಲ್ಲಿನ ವ್ಯವಸ್ಥೆಗಾಗಿ ನಮ್ಮನ್ನು ಅಭಿನಂದಿಸುತ್ತಿದ್ದಾರೆ. ಆದರೆ ಈ ಎಲ್ಲಾ ವ್ಯವಸ್ಥೆಯನ್ನು ನೀತಾ-ಮುಕೇಶ್ ತಂಡದವರು ಮಾಡಿದ್ದಾರೆ. ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಹೇಳಿದರು.

Trending News