ನವದೆಹಲಿ: ಟೈಮ್ ನಿಯತಕಾಲಿಕೆ (Time Magazine) ಯು ಈ ವರ್ಷದ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi), ನಟ ಆಯುಷ್ಮಾನ್ ಖುರಾನಾ (Ayushmann Khurrana) ಸೇರಿದಂತೆ ಐವರು ಭಾರತೀಯರಿಗೆ ಸ್ಥಾನ ಸಿಕ್ಕಿದೆ. ಇವರಲ್ಲದೆ, ಗೂಗಲ್‌ನ ಸಿಇಒ ಸುಂದರ್ ಪಿಚೈ, ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವೈದ್ಯ ರವೀಂದ್ರ ಗುಪ್ತಾ ಮತ್ತು ಶಾಹೀನ್ ಬಾಗ್ ಚಳವಳಿಯೊಂದಿಗೆ ಚರ್ಚೆಯಲ್ಲಿ ಬಂದ ಬಿಲ್ಕಿಸ್ ದಾದಿ ಅವರ ಹೆಸರನ್ನು ಸಹ ಭಾರತೀಯರ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಎಲ್ಲಾ ಜನರು ಈ ವರ್ಷ ವಿಶ್ವದಾದ್ಯಂತ ಚರ್ಚೆಯಲ್ಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬರೆದುಕೊಂಡಿರುವ ಟೈಮ್ ನಿಯತಕಾಲಿಕೆಯು "ಮುಕ್ತ ಚುನಾವಣೆಗಳು ಪ್ರಜಾಪ್ರಭುತ್ವಕ್ಕೆ ಹೆಚ್ಚು ಅನಿವಾರ್ಯವಲ್ಲ. ಯಾರು ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂಬುದನ್ನು ಮಾತ್ರ ಚುನಾವಣೆಯು ತೋರಿಸುತ್ತದೆ. ಭಾರತವು 7 ದಶಕಗಳಿಂದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಭಾರತ. 1.3 ಬಿಲಿಯನ್ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು, ಮುಸ್ಲಿಮರು, ಸಿಖ್ಖರು, ಬೌದ್ಧರು, ಜೈನರು ಮತ್ತು ಇತರ ಧರ್ಮದ ಜನರು ಸೇರಿದ್ದಾರೆ. " ಎಂದಿದೆ.
ಇದನ್ನು ಓದಿ- ಭಾರತ- ಪಾಕ್ ಪಂದ್ಯಕ್ಕೂ ಮೊದಲು ಆಯುಷ್ಮಾನ್ ಖುರಾನಾರಿಂದ ವಿಭಿನ್ನ ಸಂದೇಶ
ಅಮೇರಿಕಾದ ಉಪರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿ ಕಮಲಾ ಹ್ಯಾರಿಸ್ ಕೂಡ ಪಟ್ಟಿಯಲ್ಲಿ ಸ್ಥಾನ
ಟೈಮ್ ನಿಯತಕಾಲಿಕೆಯ ಪಟ್ಟಿಯಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಚಿನ್‌ಪಿಂಗ್, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಕೂಡ ಸ್ಥಾನ ಪಡೆದಿದ್ದಾರೆ. ಇವರಲ್ಲದೆ, ಅಮೆರಿಕದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್, ಯುಎಸ್ನಲ್ಲಿ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಸೇರಿದಂತೆ ವಿಶ್ವದಾದ್ಯಂತ ಅನೇಕ ನಾಯಕರು ಇದ್ದಾರೆ. ಅಮೆರಿಕದ ತಜ್ಞ ಆಂಥೋನಿ ಫಾಸ್ಸಿ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಫಾಸ್ಸಿ ಬಗ್ಗೆ ಹೆಚ್ಚು ಚರ್ಚಿಸಲಾಗಿದೆ.
ಇದನ್ನು ಓದಿ- ಯುಎನ್ 75ನೇ ವಾರ್ಷಿಕೋತ್ಸವದಲ್ಲಿ 'ವಾಸುದೈವ ಕುಟುಂಬಕಂ' ಮಹತ್ವವನ್ನು ಜಗತ್ತಿಗೇ ವಿವರಿಸಿದ ಮೋದಿ
ಇದೆ ಮೊದಲ ಬಾರಿಗೆ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಕೂಡ ಸ್ಥಾನ ಪಡೆದಿದ್ದಾರೆ. ಈ ಕುರಿತು ತನ್ನ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿರುವ ಆಯುಷ್ಮಾನ್, 'ಟೈಮ್ ಮ್ಯಾಗಜಿನ್ ಮೂಲಕ ಬಿಡುಗಡೆ ಗೊಲಿಸಲಾಗಿರುವ ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾಮೀಲಾಗುವುದು ಹೆಮ್ಮೆಯ ವಿಷಯ' ಎಂದಿದ್ದಾರೆ. ಆಯುಷ್ಮಾನ್ ಗೆ ಸಿಕ್ಕ ಈ ಗೌರವಕ್ಕೆ ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಆಯುಷ್ಮಾನ್ ಖುರಾನಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
2012 ರಲ್ಲಿ ಬಿಡುಗಡೆಯಾಗಿದ್ದ ವಿಕ್ಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಇದಾದ ಬಳಿಕ ಅವರು ಬಾಲಿವುಡ್ ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಬಾಲಾ, ಡ್ರೀಮ್ ಗರ್ಲ್, ಅಂಧಾಧುನ್, ಬಧಾಯಿ ಹೋ ಬಧಾಯಿ ಇತ್ಯಾದಿ ಚಿತ್ರಗಳ ಮೂಲಕ ತುಂಬಾ ಖ್ಯಾತಿ ಪಡೆದಿದ್ದಾರೆ. ಚಿತ್ರ 'ಅಂಧಾಧುನ್'ಗಾಗಿ ಆಯುಷ್ಮಾನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.