ಮಹಾತ್ಮ ಗಾಂಧಿ ಹಂತಕ ಗೋಡ್ಸೆಯನ್ನು ವೈಭವಿಕರಿಸುವುದು ದೇಶದ್ರೋಹ- ದಿಗ್ವಿಜಯ್ ಸಿಂಗ್

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆರನ್ನು ದೇಶಭಕ್ತ ಎಂದು ಕರೆದಿರುವ ಪ್ರಗ್ಯಾಸಿಂಗ್ ಹೇಳಿಕೆಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.

Updated: May 16, 2019 , 06:34 PM IST
ಮಹಾತ್ಮ ಗಾಂಧಿ ಹಂತಕ ಗೋಡ್ಸೆಯನ್ನು ವೈಭವಿಕರಿಸುವುದು ದೇಶದ್ರೋಹ-  ದಿಗ್ವಿಜಯ್ ಸಿಂಗ್
file photo

ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆರನ್ನು ದೇಶಭಕ್ತ ಎಂದು ಕರೆದಿರುವ ಪ್ರಗ್ಯಾಸಿಂಗ್ ಹೇಳಿಕೆಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.

ಈಗ ಭೂಪಾಲ್ ನಲ್ಲಿ ಪ್ರಗ್ಯಾ ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ಹೇಳಿಕೆಗೆ ಕಿಡಿ ಕಾರಿರುವ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ." ಮೋದಿಜಿ, ಅಮಿತ್ ಶಾ ಜಿ ಮತ್ತು ರಾಜ್ಯ ಬಿಜೆಪಿ ಈಗ ಅವರ ಹೇಳಿಕೆಗಾಗಿ ಇಡಿ ದೇಶದ ಕ್ಷಮೆಯಾಚಿಸಬೇಕು. ನಾಥುರಾಮ್ ಗೋಡ್ಸೆ ಕೊಲೆಗಾರ, ಅವನನ್ನು ವೈಭವಿಕರಿಸುವುದು ದೇಶಭಕ್ತಿಯಲ್ಲ, ಅದು ದೇಶದ್ರೋಹ" ಎಂದು ಹೇಳಿದರು.

ಇದೇ ವೇಳೆ ತೆಲಂಗಾಣದ ಕೆ.ಟಿ.ರಾಮ್ ರಾವ್ ಪ್ರತಿಕ್ರಿಯಿಸಿ "ನೀವು ಯಾವ ಪಕ್ಷಕ್ಕೆ ಸೇರಿದ್ದೀರಿ ಅಥವಾ ಯಾವ ಸಿದ್ಧಾಂತಕ್ಕೆ ಸಂಬಂಧಪಟ್ಟಿದ್ದಿರಿ ಎನ್ನುವುದಕ್ಕಿಂತ ಕೆಲವು ವಾಕ್ಯಗಳ ಮೀತಿಯನ್ನು ಮೀರಬಾರದು" ಎಂದು ಎಚ್ಚರಿಕೆ ನೀಡಿದ್ದಾರೆ.ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಗ್ಯಾ ಹೇಳಿಕೆಯನ್ನು ಖಂಡಿಸುತ್ತಾ " ಬಿಜೆಪಿಗರು ಗೋಡ್ಸೆಯ ವಂಶಸ್ಥರು, ಅವರು ದೇಶಕ್ಕಾಗಿ ಪ್ರಾಣ ತೆತ್ತ ಕರ್ಕರೆ ಮೇಲೆ ದಾಳಿ ಮಾಡಿದರು ಮತ್ತು ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ ಎಂದು ಹೇಳಿದರು. 

ಇತ್ತೀಚಿಗೆ ಕಮಲ್ ಹಾಸನ್ ಅವರು ಗಾಂಧಿಯನ್ನು ಹತ್ಯೆಗೈದ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೊತ್ಪಾಧಕ ಎಂದು ಹೇಳಿದ್ದರು. ಪ್ರಗ್ಯಾ ಸಿಂಗ್ ಗೆ ಈ ವಿಚಾರವಾಗಿ ಪತ್ರಕರ್ತರು ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ಅವರು " ಗೋಡ್ಸೆ ನಿಜವಾದ ದೇಶ ಭಕ್ತ "ಎಂದು ಹೇಳಿದರು.