New Covid-19 Vaccine: Moderna ಲಸಿಕೆಯ ತುರ್ತುಬಳಕೆಗೆ ಸಿಕ್ತು ಅನುಮತಿ, ಅನುಮೋದನೆ ಪಡೆದ 4ನೇ ಲಸಿಕೆ ಇದಾಗಿದೆ

New Covid-19 Vaccine - ಮುಂಬೈ ಮೂಲದ Cipla ಫಾರ್ಮಸಿಟಿಕಲ್ ಕಂಪನಿಗೆ DCGI ತುರ್ತು ಬಳಕೆಗಾಗಿ Moderna Vaccine ಅನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. 

Written by - Nitin Tabib | Last Updated : Jun 29, 2021, 06:05 PM IST
  • Moderna ಕೊವಿಡ್ -19 ತುರ್ತುಬಳಕೆಗೆ ಅನುಮೋದನೆ ನೀಡಿದ DCGI.
  • ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ. ವಿ.ಕೆ. ಪಾಲ್, ಮುಂಬೈ ಮೂಲಕ ಸಿಪ್ಲಾ ಕಂಪನಿಗೆ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದಿದ್ದಾರೆ.
  • ಪ್ರಸ್ತುತ ಅನುಮೋದನೆ ಪಡೆದ ನಾಲ್ಕು ವ್ಯಾಕ್ಸಿನ್ ಗಳು ಹಾಲುಣಿಸುವ ತಾಯಂದಿರರಿಗೆ ಸುರಕ್ಷಿತವಾಗಿವೆ ಎಂದ ಪಾಲ್
New Covid-19 Vaccine: Moderna ಲಸಿಕೆಯ ತುರ್ತುಬಳಕೆಗೆ ಸಿಕ್ತು ಅನುಮತಿ, ಅನುಮೋದನೆ ಪಡೆದ 4ನೇ ಲಸಿಕೆ ಇದಾಗಿದೆ title=
New Covid-19 Vaccine (File Photo)

ಮುಂಬೈ: New Covid-19 Vaccine - ದೇಶದಲ್ಲಿ ತುರ್ತು ಬಳಕೆಗಾಗಿ ಮಾಡರ್ನಾದ ಕೋವಿಡ್ -19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಭಾರತದ ಔಷಧ ನಿಯಂತ್ರಕ DGCI ಮುಂಬೈ ಮೂಲದ ಔಷಧ ಉತ್ಪಾದಕ ಕಂಪನಿ ಸಿಪ್ಲಾಕ್ಕೆ (Cipla Pharmaceutical) ಅನುಮೋದನೆ ನೀಡಿದೆ. ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ವಿ.ಕೆ ಪಾಲ್ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೋವಿಶೀಲ್ಡ್ (Covishield), ಕೊವಾಕ್ಸಿನ್ (Covaxin) ಮತ್ತು ಸ್ಪುಟ್ನಿಕ್ ವಿ (Sputnik V) ನಂತರ ಮಾಡರ್ನಾ (Moderna) ಲಸಿಕೆ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ನಾಲ್ಕನೇ ಕೋವಿಡ್ -19 (Covid-19 Vaccine) ಲಸಿಕೆಯಾಗಿದೆ.

ಇದನ್ನೂ ಓದಿ- WHO Alert! Delta Plus ನಡುವೆಯೇ ಆತಂಕ ಹೆಚ್ಚಿಸಿದ Lambda

ಈ ಕುರಿತು ಮಾಹಿತಿ ನೀಡಿರುವ ನೀತಿ ಆಯೋಗದ (NITI Ayog) ಸದಸ್ಯ (ಆರೋಗ್ಯ ವಿಭಾಗ)ರಾಗಿರುವ ಡಾ. ವಿ.ಕೆ ಪಾಲ್, ಭಾರತದಲ್ಲಿ ತುರ್ತು ಬಲಕೆಗಾಗಿ Moderna ಲಸಿಕೆಗೆ ಅನುಮೋದನೆ ನೀಡಲಾಗಿದೆ, ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ. ಜೊತೆಗೆ ಈ ಹೊಸ ಅನುಮೋದನೆ ನಿರ್ಬಂಧಿತ ಬಲಕೆಗಾಗಿ ಮಾತ್ರ ಇರಲಿದ್ದು, ಶೀಘ್ರದಲ್ಲಿಯೇ Pfizer ಜೊತೆಗಿನ ಡೀಲ್ ಅನ್ನು ಕೂಡ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ- Research On Covid-19: ಕೊರೊನಾ ವೈರಸ್ ಹೊಸದಲ್ವಂತೆ ! ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಡಾ. ವಿ.ಕೆ.ಪಾಲ್ ಈ ನಾಲ್ಕು ವ್ಯಾಕ್ಸಿನ್ ಗಳು ಹಾಲುಣಿಸುವ ತಾಯಂದಿರರಿಗೆ ಸುರಕ್ಷಿತವಾಗಿದ್ದು, ಬಂಜೆತನದ ಜೊತೆಗೆ ಇವು ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ-China's Cyber Attack On India: ಭಾರತದ ವಿರುದ್ಧ ಚೀನಾ ಹೊಸ ಕುತಂತ್ರ, ಪ್ರಮುಖ ಸಂಸ್ಥೆಗಳ ಮೇಲೆ Cyber Attack!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News