Indian Navy Flag: ನೌಕಾಪಡೆಯಲ್ಲಿ ಇನ್ಮುಂದೆ ‘ಶಿವಾಜಿ’ ಧ್ವಜ: ನೂತನ ಫ್ಲ್ಯಾಗ್ ವೈಶಿಷ್ಟ್ಯ ಕೇಳಿದ್ರೆ ಹೆಮ್ಮೆ ಪಡುತ್ತೀರಿ

ಹೊಸ ಧ್ವಜವು ಮೇಲಿನ ಕ್ಯಾಂಟನ್‌ನಲ್ಲಿ ರಾಷ್ಟ್ರಧ್ವಜವನ್ನು ಹೊಂದಿದೆ. ರಾಷ್ಟ್ರೀಯ ಲಾಂಛನದೊಂದಿಗೆ ನೀಲಿ ಅಷ್ಟಭುಜಾಕೃತಿಯ ಆಕಾರವಿದ್ದು, ಆಂಕರ್‌ನ ಮೇಲೆ ಅದು ಕಾಣಿಸುತ್ತದೆ. ನೌಕಾಪಡೆಯ ಧ್ಯೇಯವಾಕ್ಯವನ್ನು ಸಹ ಶೀಲ್ಡ್‌ನ ಮೇಲೆ ಕೆತ್ತಲಾಗಿದೆ.

Written by - Bhavishya Shetty | Last Updated : Sep 2, 2022, 12:51 PM IST
    • ಐಎನ್‌ಎಸ್ ವಿಕ್ರಾಂತ್ ಉಡಾವಣೆಯಲ್ಲಿ ಭಾರತೀಯ ನೌಕಾಪಡೆಯ ಹೊಸ ಧ್ವಜದ ಪರಿಚಯ
    • ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರಿಗೆ ಗೌರವ ಸೂಚಕ
    • ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆ ಈ ಹೆಜ್ಜೆಯನ್ನು ಇಟ್ಟಿದೆ
Indian Navy Flag: ನೌಕಾಪಡೆಯಲ್ಲಿ ಇನ್ಮುಂದೆ ‘ಶಿವಾಜಿ’ ಧ್ವಜ: ನೂತನ ಫ್ಲ್ಯಾಗ್ ವೈಶಿಷ್ಟ್ಯ ಕೇಳಿದ್ರೆ ಹೆಮ್ಮೆ ಪಡುತ್ತೀರಿ title=
Indian Navy Flag

ನವದೆಹಲಿ: ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಉಡಾವಣೆಯಲ್ಲಿ ಭಾರತೀಯ ನೌಕಾಪಡೆಯು ಇಂದು ಹೊಸ ಧ್ವಜವನ್ನು ಪರಿಚಯಿಸಿದೆ. ಇದು ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ಗೌರವಿಸುತ್ತದೆ, ಶಿವಾಜಿ ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ನೌಕಾಪಡೆಯನ್ನು ಹೊಂದಿದ್ದರು ಎಂದು ಇತಿಹಾಸಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆ ಈ ಹೆಜ್ಜೆಯನ್ನು ಇಟ್ಟಿದೆ.

ಹೊಸ ಧ್ವಜವು ಮೇಲಿನ ಕ್ಯಾಂಟನ್‌ನಲ್ಲಿ ರಾಷ್ಟ್ರಧ್ವಜವನ್ನು ಹೊಂದಿದೆ. ರಾಷ್ಟ್ರೀಯ ಲಾಂಛನದೊಂದಿಗೆ ನೀಲಿ ಅಷ್ಟಭುಜಾಕೃತಿಯ ಆಕಾರವಿದ್ದು, ಆಂಕರ್‌ನ ಮೇಲೆ ಅದು ಕಾಣಿಸುತ್ತದೆ. ನೌಕಾಪಡೆಯ ಧ್ಯೇಯವಾಕ್ಯವನ್ನು ಸಹ ಶೀಲ್ಡ್‌ನ ಮೇಲೆ ಕೆತ್ತಲಾಗಿದೆ.

ಇದನ್ನೂ ಓದಿ: ʼಪ್ರಧಾನಿಗಳೇ ನೀವು ಆಡಿದ್ದ ಮಾತುಗಳನ್ನು ಕನ್ನಡಿಗರು ಮರೆತಿಲ್ಲʼ

"ಅವಳಿ ಚಿನ್ನದ ಗಡಿಗಳನ್ನು ಹೊಂದಿರುವ ಅಷ್ಟಭುಜಾಕೃತಿಯ ಆಕಾರವು ಮಹಾನ್ ಭಾರತೀಯ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರ ಮುದ್ರೆಯಿಂದ ಸ್ಫೂರ್ತಿ ಪಡೆಯುತ್ತದೆ, ಅವರ ದೂರದೃಷ್ಟಿಯ ಕಡಲ ದೃಷ್ಟಿಕೋನವು ವಿಶ್ವಾಸಾರ್ಹ ನೌಕಾಪಡೆಯನ್ನು ಸ್ಥಾಪಿಸಿದೆ" ಎಂದು ನೌಕಾಪಡೆಯು ಹೊಸ ಧ್ವಜವನ್ನು ಪ್ರದರ್ಶಿಸುವ ವೀಡಿಯೊದಲ್ಲಿ ತಿಳಿಸಲಾಗಿದೆ.

“ಛತ್ರಪತಿ ಶಿವಾಜಿ ಮಹಾರಾಜರ ನೌಕಾಪಡೆಯು 60 ಯುದ್ಧನೌಕೆಗಳು ಮತ್ತು ಸರಿಸುಮಾರು 5,000 ಜನರನ್ನು ಒಳಗೊಂಡಿತ್ತು. ಈ ಮರಾಠಾ ನೌಕಾ ಶಕ್ತಿಯು ಬಾಹ್ಯ ಆಕ್ರಮಣಗಳ ವಿರುದ್ಧ ಕರಾವಳಿಯನ್ನು ಸುರಕ್ಷಿತವಾಗಿರಿಸಿದ ಮೊದಲನೆ ಪಡೆ" ಎಂದು ನೌಕಾಪಡೆಯು ವೀಡಿಯೊದಲ್ಲಿ ಹೇಳಿದೆ.

ನೀಲಿ ಅಷ್ಟಭುಜಾಕೃತಿಯ ಆಕಾರವು ಎಂಟು ದಿಕ್ಕುಗಳನ್ನು ಪ್ರತಿನಿಧಿಸುತ್ತದೆ ಎಂದು ನೌಕಾಪಡೆಯು ಭಾರತೀಯ ನೌಕಾಪಡೆಯ ಬಹು ದಿಕ್ಕಿನ ವ್ಯಾಪ್ತಿಯನ್ನು ಮತ್ತು ಬಹು ಆಯಾಮದ ಕಾರ್ಯಾಚರಣೆಯ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ಆಂಕರ್ ಚಿಹ್ನೆಯು "ಸ್ಥಿರತೆ" ಯನ್ನು ಪ್ರತಿನಿಧಿಸುತ್ತದೆ ಎಂದು ನೌಕಾಪಡೆ ಹೇಳಿದೆ. 

ಇದನ್ನೂ ಓದಿ: ಸ್ನೇಹಿತನ ಮೇಲೆ ಹೆಬ್ಬಾವು ದಾಳಿ: ಪ್ರಾಣ ಪಣಕ್ಕಿಟ್ಟು ಹಾವಿನೊಂದಿಗೆ ಹೋರಾಡಿದ ಜಿಂಕೆ, ಮುಂದೇನಾಯ್ತು

"ಇಂದಿನವರೆಗೂ ಭಾರತೀಯ ನೌಕಾ ಧ್ವಜಗಳು ಗುಲಾಮಗಿರಿಯ ಸಂಕೇತವನ್ನು ಹೊಂದಿದ್ದವು, ಅದನ್ನು ಛತ್ರಪತಿ ಶಿವಾಜಿ ಮಹಾರಾಜರಿಂದ ಹೊಸದಕ್ಕೆ ಬದಲಾಯಿಸಲಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಐಎನ್‌ಎಸ್ ವಿಕ್ರಾಂತ್‌ಗೆ ಚಾಲನೆ ನೀಡುವ ಮೊದಲು ಹೇಳಿದರು. ಹಳೆಯ ಧ್ವಜವು ಕೆಂಪು ಸೇಂಟ್ ಜಾರ್ಜ್ ಕ್ರಾಸ್ ಅನ್ನು ಹೊಂದಿತ್ತು, ಇದು ಭಾರತದ ವಸಾಹತುಶಾಹಿ ಗತಕಾಲಕ್ಕೆ ಸಂಬಂಧಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News