ಮುಂಬೈ: ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಬುಧವಾರ ಅರ್ಥಪೂರ್ಣವಾಗಿ ನಡೆಯಿತು. ಕರ್ನಾಟಕದ ಹೆಸರಘಟ್ಟ ಹಾಗೂ ರಾಮನಗರದ ಕುತಕಲ್ ಗ್ರಾಮದ ಇರುಳಿಗರ ದೊಡ್ಡಿಯೂ ಸೇರಿದಂತೆ ದೇಶದಾದ್ಯಂತ 1.4 ಲಕ್ಷ ಜನರಿಗೆ ಅನ್ನ ಸಂತರ್ಪಣೆ ಸೇವೆಯನ್ನು ಸಲ್ಲಿಸಲಾಯಿತು.
ಮಾನವೀಯತೆಯ ಸೇವೆಯಲ್ಲಿ ಅನೇಕ ರೂಪಗಳು ಇವೆ. ಆ ಪೈಕಿ ಅನ್ನದಾನ ಅಥವಾ ಅನ್ನ ಸಂತರ್ಪಣೆಗೆ ವಿಶೇಷ ಸ್ಥಾನವಿದೆ. ಆ ಕಾರಣದಿಂದಲೇ ತಮ್ಮ ಜನ್ಮದಿನದಂದು ಅನ್ನ ಸಂತರ್ಪಣೆ ಮತ್ತು ದಿನಬಳಕೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
(ಶ್ರೀಮತಿ ನೀತಾ ಎಂ ಅಂಬಾನಿ ಅವರು 01 ನವೆಂಬರ್ 2023 ರ ಬುಧವಾರದಂದು ತಮ್ಮ 60 ನೇ ಜನ್ಮದಿನದ ಸಂದರ್ಭದಲ್ಲಿ ಮುಂಬೈನ 'ಅನ್ನ ಸೇವಾ'ದಲ್ಲಿ 3000 ಕ್ಕೂ ಹೆಚ್ಚು ಅಶಕ್ತ ಮಕ್ಕಳೊಂದಿಗೆ)
ನೀತಾ ಅಂಬಾನಿ ಅವರು ತಮ್ಮ ದೈನಂದಿನ ಜೀವನದಲ್ಲೂ ಒಂದಲ್ಲಾ ಒಂದು ಬಗೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸೇವೆಯನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಇನ್ನು ತಮ್ಮ ಅರವತ್ತನೇ ಹುಟ್ಟುಹಬ್ಬದ ದಿನದಂದು ದೇಶದಾದ್ಯಂತ 75,000ಕ್ಕೂ ಹೆಚ್ಚು ಅಶಕ್ತ ಜನರಿಗೆ ಬಿಸಿಯೂಟವನ್ನು ಉಣಬಡಿಸಲಾಗಿದೆ. ಅಂದ ಹಾಗೆ ನೀತಾ ಅಂಬಾನಿ ಅವರ ಸೇವಾ ಕೈಂಕರ್ಯ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಆರಂಭದಲ್ಲೇ ಹೇಳಿದಂತೆ ರಿಲಯನ್ಸ್ ಫೌಂಡೇಷನ್ ಸ್ಥಾಪಕಿಯಾಗಿ, ಅಧ್ಯಕ್ಷೆಯಾಗಿ ಅವರ ಸೇವೆ ವ್ಯಾಪಕವಾಗಿ ಹರಡಿಕೊಂಡಿದೆ. ಅದರ ವಿಸ್ತರಣೆ ಎಂಬಂತೆ ಜನ್ಮದಿನದ ಸಂದರ್ಭದಲ್ಲಿ ಅನ್ನ ಸಂತರ್ಪಣೆ, ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಯಿತು.
ಇದನ್ನೂ ಓದಿ: ಹಾಸನಾಂಬೆ ದರ್ಶನ ಪಡೆಯುವ ವಿಚಾರದಲ್ಲಿ ‘ಕೈ’ ನಾಯಕರ ವಾಕ್ಸಮರ!
ಪಡಿತರದ ಕಿಟ್ ಗಳನ್ನು 60,000ಕ್ಕೂ ಹೆಚ್ಚು ಜನರಿಗೆ ವಿತರಿಸಲಾಯಿತು. ಭಾರತದ ಹದಿನೈದು ರಾಜ್ಯಗಳಲ್ಲಿ ಮಕ್ಕಳಿಗೆ, ವೃದ್ಧಾಶ್ರಮದಲ್ಲಿ ಇರುವಂಥ ಹಿರಿಯರಿಗೆ, ದಿನಗೂಲಿ ನೌಕರರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಕುಷ್ಠರೋಗದಂಥ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ವಿಶೇಷ ಅಗತ್ಯ ಇರುವಂಥ ಜನರಿಗೆ ಬುಧವಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಡೀ ದಿನ ಕಾರ್ಯಕ್ರಮಗಳು ನಡೆದವು. ಬೆಳಗ್ಗೆಯಿಂದಲೇ ಆಹಾರ ಕಿಟ್ ವಿತರಣೆ ಶುರುವಾಯಿತು. ವಿವಿಧ ಸ್ಥಳಗಳಲ್ಲಿ ಆಹಾರವನ್ನು ನೀಡಲಾಯಿತು. ರಿಲಯನ್ಸ್ ನ ಸ್ವಯಂ ಸೇವಕರು ಮಕ್ಕಳು ಮತ್ತು ವೃದ್ಧರಿಗೆ ಆಹಾರ ಬಡಿಸುವಂಥ ಕೆಲಸಕ್ಕೆ ತಾವೇ ಮುಂದಾದರು.
ನೀತಾ ಅಂಬಾನಿ ಅವರಿಗೆ ಮಹಿಳೆಯರು ಮತ್ತು ಮಕ್ಕಳ ಬೇಗ ವಿಶೇಷ ಅಕ್ಕರೆ, ಆಸ್ಥೆ. ತಮ್ಮ ಹೃದಯಕ್ಕೆ ಮಹಿಳೆಯರು, ಮಕ್ಕಳು ಎಷ್ಟು ಹತ್ತಿರ ಎಂಬುದನ್ನು ಸ್ವತಃ ನೀತಾ ಅಂಬಾನಿ ಹೇಳಿಕೊಂಡಿದ್ದಾರೆ. ಅಂದ ಹಾಗೆ ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ 3000 ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
(ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಅವರ 60ನೇ ಜನ್ಮ ದಿನಾಚರಣೆ ಪ್ರಯುಕ್ತ ಬುಧವಾರ ರಾಮನಗರದ ಕುತಕಲ್ ಗ್ರಾಮದ ಇರುಳಿಗರ ದೊಡ್ಡಿಯಲ್ಲಿ ಆಹಾರ ಕಿಟ್ ವಿತರಿಸಲಾಯಿತು.)
ಇದನ್ನೂ ಓದಿ: ಕರುನಾಡ ʼKGFʼ ರೋಚಕ ನೈಜ ಕಥೆ ಆಧಾರಿತ ವಿಕ್ರಮ್ ʼತಂಗಲಾನ್ʼ ಟೀಸರ್ ಔಟ್..!
ಶಿಕ್ಷಣ, ಮಹಿಳಾ ಸಬಲೀಕರಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರಕ್ಕೆ ನೀತಾ ಅಂಬಾನಿಯವರ ಕೊಡುಗೆಗಳು ಭಾರತದ ಸಾಮಾಜಿಕ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ. ಅವರ ದೂರದೃಷ್ಟಿಯ ನಾಯಕತ್ವದಲ್ಲಿ ರಿಲಯನ್ಸ್ ಫೌಂಡೇನ್ ಮೂಲಕ ದೇಶಾದ್ಯಂತ 71 ಮಿಲಿಯನ್ ಜೀವಗಳನ್ನು ಮುಟ್ಟಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಅನ್ನ ಸೇವೆಯು ಅವರ ಜನ್ಮದಿನದ ಅರ್ಥಪೂರ್ಣ ಆಚರಣೆಗೆ ಸಾಕ್ಷಿ ಆಯಿತು.'ಮೈತ್ರೀಂ ಭಜತಾ ಅಖಿಲ ಹೃತ್ ಜೈತ್ರೀಂ' - ಇದು ಸಾಮರಸ್ಯ, ಸ್ನೇಹ, ಸ್ವಯಂ ಮತ್ತು ಪ್ರಪಂಚದ ಬಗ್ಗೆ ಇರುವಂಥ ಕಾಳಜಿಯ ಪ್ರಮಾಣವನ್ನು ಹೇಳುತ್ತವೆ. ನವೆಂಬರ್ 1ರ ಕಾರ್ಯಕ್ರಮಗಳು ಇದನ್ನು ಉತ್ತೇಜಿಸಿದವು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.