6 Airbags Mandatory: ಅಕ್ಟೋಬರ್ 1, 2023 ರಿಂದ ಪ್ರಯಾಣಿಕ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈ ಕುರಿತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿಯನ್ನು ನೀಡಿದ್ದಾರೆ. ಆಟೋ ಉದ್ಯಮವು ಪ್ರಸ್ತುತ ಸಪ್ಲೈ ಚೈನ್ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದಾಗಿ, ಪ್ರಯಾಣಿಕರ ವಾಹನಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಅಕ್ಟೋಬರ್ 1, 2023 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ, ರಸ್ತೆ ಸಾರಿಗೆ ಸಚಿವಾಲಯವು ಅಕ್ಟೋಬರ್ 1, 2022 ರಿಂದ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲು ಪ್ರಸ್ತಾಪನೆ ಸಲ್ಲಿಸಿತ್ತು.
ಈ ನಿರ್ಧಾರದ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ನಿತಿನ್ ಗಡ್ಕರಿ, ಆಟೋ ಉದ್ಯಮವು ಎದುರಿಸುತ್ತಿರುವ ಜಾಗತಿಕ ಪೂರೈಕೆ ಸರಪಳಿ ಸಮಸ್ಯೆಗಳು ಮತ್ತು ಅದರ ಸ್ಥೂಲ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು (M-1) ವರ್ಗದ ಪ್ರಯಾಣಿಕ ವಾಹನಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಇರಿಸಲು ನಿರ್ಧರಿಸಲಾಗಿದೆ ಎಂದು ಬರೆದಿದ್ದಾರೆ. ಅಕ್ಟೋಬರ್ 1, 2023 ರಿಂದ ಅದು ಕಡ್ಡಾಯವಗಿರಲಿದೆ ಎಂದಿದ್ದಾರೆ.
ತನ್ನ ಮತ್ತೊಂದು ಟ್ವೀಟ್ ನಲ್ಲಿ ರಸ್ತೆ ಸಾರಿಗೆ ಸಚಿವರು ಯಾವುದೇ ಪ್ರಯಾಣಿಕ ವಾಹನದಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಸುರಕ್ಷತೆಯು ಅದರ ಬೆಲೆ ಮತ್ತು ರೂಪಾಂತರವನ್ನು ಲೆಕ್ಕಿಸದೆಯೇ ಪ್ರಮುಖ ಆದ್ಯತೆಯಾಗಿದೆ ಎಂದು ಬರೆದಿದ್ದಾರೆ.
M1 ವರ್ಗ ಎಂದರೇನು!
ವಾಹನ ಪೋರ್ಟಲ್ ಪ್ರಕಾರ, ಚಾಲಕನ ಸೀಟ್ ಸೇರಿದಂತೆ ಒಟ್ಟು 8 ಆಸನಗಳನ್ನು ಹೊಂದಿರುವ ಮತ್ತು 8 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ವಾಹನಗಳು M1 ವರ್ಗದ ಅಡಿಯಲ್ಲಿ ಬರುತ್ತವೆ. ಸರ್ಕಾರದ ಈ ನಿರ್ಧಾರದ ನಂತರ, ಪ್ರವೇಶ ಮಟ್ಟದ ವಿಭಾಗದ ಕಾರುಗಳು ದುಬಾರಿಯಾಗಲಿವೆ ಎಂದು ನಂಬಲಾಗಿದೆ. ಕೇವಲ ಪ್ರವೇಶ ಮಟ್ಟದ ವಿಭಾಗದ ವಾಹನಗಳ ಬೆಲೆಯಲ್ಲಿಯೇ 17,000 ರೂ.ಗಿಂತ ಹೆಚ್ಚಿನ ಬೆಲೆ ಏರಿಕೆಯನ್ನು ಗಮನಿಸಬಹುದಾಗಿದೆ.
ಇದನ್ನೂ ಓದಿ-ಎಲ್ಲಾ ವಿವಾಹಿತ ಅಥವಾ ಅವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನು ಬದ್ಧ ಗರ್ಭಪಾತಕ್ಕೆ ಅರ್ಹ
ವಾಸ್ತವದಲ್ಲಿ, ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಲಕ್ಷಾಂತರ ವಾಹನಗಳಲ್ಲಿ, ಕೆಲವು ಆಯ್ದ ಕಾರುಗಳು ಮಾತ್ರ 6 ಏರ್‌ಬ್ಯಾಗ್‌ಗಳ ಸೌಲಭ್ಯವನ್ನು ಪಡೆಯುತ್ತಿವೆ. ದೇಶದ ಶೇಕಡಾ 10 ಕ್ಕಿಂತ ಕಡಿಮೆ ಕಾರುಗಳು 6 ಏರ್‌ಬ್ಯಾಗ್ ವೈಶಿಷ್ಟ್ಯಗಳನ್ನು ಹೊಂದಿವೆ. ಯಾವುದೇ ಪ್ರಯಾಣಿಕ ವಾಹನದಲ್ಲಿ ಏರ್‌ಬ್ಯಾಗ್‌ಗಳು ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಒಂದಾಗಿದೆ ಮತ್ತು 6 ಏರ್‌ಬ್ಯಾಗ್‌ಗಳ ಸೌಲಭ್ಯವು ದುಬಾರಿ ವಾಹನಗಳಲ್ಲಿ ಮಾತ್ರ ಲಭ್ಯವಿದೆ.
ಇದನ್ನೂ ಓದಿ-ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಗೆಹ್ಲೋಟ್ ನಕಾರ.!
ಕೆಲವು ಕಂಪನಿಗಳು ಈ ಹಿಂದೆ ಕೇವಲ ಒಂದು ಏರ್‌ಬ್ಯಾಗ್‌ನೊಂದಿಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದವು. ನಂತರ ಸರ್ಕಾರವು ಕಾರಿನಲ್ಲಿ 2 ಏರ್‌ಬ್ಯಾಗ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿತ್ತು. ಎಲ್ಲಾ ಕಾರು ಕಂಪನಿಗಳನ್ನು ಈ ವರ್ಷದ ಜನವರಿ 2022 ರಿಂದ ನವೀಕರಿಸಲು ಒತ್ತಾಯಿಸಲಾಗಿತ್ತು. ಆದರೆ ಇತ್ತೀಚೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಚರ್ಚೆಗಳು ಆರಂಭಗೊಂಡಿದ್ದವು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.