Sunil Kumar : 'ರಾಜ್ಯದಲ್ಲಿ ವಿದ್ಯುತ್ ಸರಬರಾಜು ಸಮಸ್ಯೆಯಾಗಿಲ್ಲ'

ಎರಡು ಸ್ಥಾವರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ ಅಷ್ಟೇ. ಇದನ್ನ ಮೂರ್ನಾಲಕ್ಕು ದಿನಗಳಲ್ಲಿ ಸಮಸ್ಯೆ‌ ಬಗೆಹರಿಯಲಿದೆ

Written by - Channabasava A Kashinakunti | Last Updated : Oct 9, 2021, 04:20 PM IST
  • ರಾಜ್ಯದಲ್ಲಿ ಪವರ್ ಸರಬರಾಜು ಕೊರತೆಯಾಗಿಲ್ಲ
  • ಇಂದು ನಾನು ಸಿಎಂ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ
  • ಮೂರ್ನಾಲಕ್ಕು ದಿನಗಳಲ್ಲಿ ಸಮಸ್ಯೆ‌ ಬಗೆಹರಿಯಲಿದೆ
Sunil Kumar : 'ರಾಜ್ಯದಲ್ಲಿ ವಿದ್ಯುತ್ ಸರಬರಾಜು ಸಮಸ್ಯೆಯಾಗಿಲ್ಲ' title=

ನವದೆಹಲಿ : ರಾಜ್ಯದಲ್ಲಿ ಪವರ್ ಸರಬರಾಜು  ಕೊರತೆಯಾಗಿಲ್ಲ. ಕಲ್ಲಿದ್ದಲು ಕೊರತೆಯಿಂದ ಸ್ಥಾವರಗಳು ಬಂದ್ ಆಗಿಲ್ಲ. ಎರಡು ಸ್ಥಾವರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ ಅಷ್ಟೇ. ಇದನ್ನ ಮೂರ್ನಾಲಕ್ಕು ದಿನಗಳಲ್ಲಿ ಸಮಸ್ಯೆ‌ ಬಗೆಹರಿಯಲಿದೆ ಎಂದು ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿಯಲ್ಲಿ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ  ಸಚಿವ ಸುನೀಲ್ ಕುಮಾರ್(Sunil Kumar), ಇಂದು ನಾನು ಸಿಎಂ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಭೇಟಿಯಾಗಿದ್ದೇನೆ. ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿತ್ತು. ಅಲ್ಲದೆ, ಗಣಿಗಳಲ್ಲಿ ಮಳೆ‌ ಹೆಚ್ಚಾದ ಕಾರಣ ಉತ್ಪಾದನೆ ಕೊರತೆ ಸೃಷ್ಟಿಯಾಗಿದೆ ಎಂದರು.

ಇದನ್ನೂ ಓದಿ : ಬಿಜೆಪಿ ಸರ್ಕಾರ ರಸ್ತೆಯ ಗುಂಡಿಗಳಿಗೆ ಜನರನ್ನು ಬಲಿ ಹಾಕುತ್ತಿದೆ: ಕಾಂಗ್ರೆಸ್ ಕಿಡಿ

ರಾಜ್ಯ ಸರ್ಕಾರಕ್ಕೆ 12 ರೇಕ್ ಗಳಲ್ಲಿ ಕೇಂದ್ರ ಸರ್ಕಾರ(Central Government) ಸರಬರಾಜು ಮಾಡಬೇಕಿತ್ತು. ಆದ್ರೆ ಸಧ್ಯ, 8 ರೇಕ್ ಗಳಲ್ಲಿ ಸಧ್ಯ ಕೇಂದ್ರ ಸರ್ಕಾರ ಸರಬರಾಜು ಮಾಡುತ್ತಿದೆ. ಮುಂದಿನ ವಾರದಲ್ಲಿ 2 ರೇಕ್ ಕಲ್ಲಿದ್ದಲು ಬರಲಿದೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News