ಕೊಲ್ಕತ್ತಾ: ಹೌದು, ನೀವು ಇನ್ನು ಮುಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿಯವರನ್ನು ಡಾಕ್ಟರ್ ಸಿಎಂ ಎಂದು ಸಂಬೋಧಿಸಬೇಕು.
ವಿಷಯ ಏನಪ್ಪಾ ಅಂದ್ರೆ ಅವರಿಗೆ ಈಗ ಕಲ್ಕತ್ತಾ ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಪದವಿಯನ್ನು ಗೌರವಾರ್ಥವಾಗಿ ನೀಡಿ ಗೌರವಿವಿಸಿದೆ. ಆದ್ದರಿಂದ ಇನ್ನು ಮುಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಡಾಕ್ಟರ್ ಸಿಎಂ ಆಗಲಿದ್ದಾರೆ.
ಇಲ್ಲಿ ನಡೆದ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಪದವಿಯನ್ನು ಪಶ್ಚಿಮ ಬಂಗಾಳ ಗವರ್ನರ್ ಕೇಶರಿ ನಾಥ್ ತ್ರಿಪಾಠಿ ಅವರು ಮುಖ್ಯಮಂತ್ರಿಗೆ ನೀಡಿದರು. ಮಮತಾ ಬ್ಯಾನರ್ಜೀಯವರು ವಿಶ್ವವಿದ್ಯಾನಿಲಯದ ಓರ್ವ ಹಳೆಯ ವಿದ್ಯಾರ್ಥಿನಿಯಾಗಿದ್ದು ಈಗ ಅವರಿಗೆ ಸಾಮಾಜಿಕ ಸೇವೆಯಲ್ಲಿನ ಕೆಲಸಕ್ಕಾಗಿ ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಪದವಿಯ ಅಂಗೀಕಾರ ಭಾಷಣದಲ್ಲಿ ಮಮತಾ ಬ್ಯಾನರ್ಜೀ ಮಾತನಾಡುತ್ತಾ, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ. ಇತಿಹಾಸವನ್ನು ವಿರೂಪಗೊಳಿಸುವ ಕೆಲಸ ನಡೆಯುತ್ತಿದೆ ಆದ್ದರಿಂದ ಇದಕ್ಕೆ ಕೊನೆ ಹಾಡಿ ಭಾರತದ ವೈವಿಧ್ಯತೆಯನ್ನು ಕಾಪಾಡಬೇಕಾಗಿದೆ ಎಂದು ತಿಳಿಸಿದರು.