ಇಂದಿನಿಂದ ದೆಹಲಿಯಲ್ಲಿ Odd-Even ಅನ್ವಯ; ಮನೆಯಿಂದ ಹೊರಡುವ ಮೊದಲು ಈ ನಿಯಮ ತಿಳಿದುಕೊಳ್ಳಿ

ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿಯಮವನ್ನು ಪುನಃ ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ.

Last Updated : Nov 4, 2019, 09:31 AM IST
ಇಂದಿನಿಂದ ದೆಹಲಿಯಲ್ಲಿ Odd-Even ಅನ್ವಯ; ಮನೆಯಿಂದ ಹೊರಡುವ ಮೊದಲು ಈ ನಿಯಮ ತಿಳಿದುಕೊಳ್ಳಿ title=

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಮತ್ತೆ  Odd-Even ನಿಯಮ ಜಾರಿಗೆ ಬಂದಿದೆ. ಈ ನಿಯಮವು ನವೆಂಬರ್ 15 ರವರೆಗೆ ಮುಂದುವರಿಯುತ್ತದೆ. ಮನೆಯಿಂದ ಹೊರಡುವ ಮೊದಲೇ,  ಆಡ್‌-ಈವ್ ಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ನೀವು ದಂಡ ಪಾವತಿಸಬೇಕಾಗಬಹುದು. ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿಯಮವನ್ನು ಮರು ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ.

ನವೆಂಬರ್ 4-15 ವರೆಗೆ ದೆಹಲಿಯಲ್ಲಿ Odd-even ಜಾರಿ: ಇಲ್ಲಿದೆ ಮಾಹಿತಿ

ಇದು Odd-Even ನಿಯಮ:
- ಆಡ್-ಈವನ್ ನಿಯಮದ ಪ್ರಕಾರ, ಆಡ್ ಸಂಖ್ಯೆಯ ವಾಹನವನ್ನು ಆಡ್ (ಬೆಸ - 1,3,5,7,9) ದಿನಾಂಕದಂದು ಮತ್ತು ಈವ್ ನಂಬರ್ ವಾಹನಗಳನ್ನು (ಸಮ ಸಂಖ್ಯೆ - 2,4,6,8,0) ದಿನಾಂಕದಂದು ಚಾಲನೆ ಮಾಡಲಾಗುತ್ತದೆ. 
- ಬೆಸ ನಿಯಮಗಳು ಸೋಮವಾರದಿಂದ ಶನಿವಾರದವರೆಗೆ ವಾರದಲ್ಲಿ 6 ದಿನಗಳು ಜಾರಿಯಲ್ಲಿರುತ್ತವೆ. ಈ ನಿಯಮ ಭಾನುವಾರ ಅನ್ವಯವಾಗುವುದಿಲ್ಲ.
- ನಿಯಮಗಳನ್ನು ಉಲ್ಲಂಘಿಸುವವರು 4,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ.
 

Trending News