OMG: ಒಡಿಶಾದಲ್ಲಿ ರಷ್ಯಾದ ಶ್ರೀಮಂತ ಸಂಸದನ ನಿಗೂಢ ಸಾವು..!

Russian MP Pavel Antov mysterious death: ತಮ್ಮ 65ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ರಾಯಗಡಕ್ಕೆ ಬಂದಿದ್ದ ಪಾವೆಲ್ ಹೋಟೆಲ್‍ನ 3ನೇ ಮಹಡಿಯ ಕಿಟಕಿಯಿಂದ ಬಿದ್ದು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

Written by - Puttaraj K Alur | Last Updated : Dec 28, 2022, 12:05 PM IST
  • ಒಡಿಶಾದ ಹೋಟೆಲ್‍ನಲ್ಲಿ ನಿಗೂಢ ಸಾವನ್ನಪ್ಪಿದ ರಷ್ಯಾದ ಶ್ರೀಮಂತ ಸಂಸದ ಪಾವೆಲ್ ಆಂಟೊವ್
  • 65ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲು ರಾಯಗಡಕ್ಕೆ ಬಂದಿದ್ದ ಪಾವೆಲ್ ಹೋಟೆಲ್‍ನಿಂದ ಬಿದ್ದು ಸಾವು
  • ಡಿ.22ರಂದು ಹೋಟೆಲ್‍ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದ ವ್ಲಾಡಿಮಿರ್ ಬುಡಾನೋವ್
OMG: ಒಡಿಶಾದಲ್ಲಿ ರಷ್ಯಾದ ಶ್ರೀಮಂತ ಸಂಸದನ ನಿಗೂಢ ಸಾವು..! title=
ರಷ್ಯಾದ ಶ್ರೀಮಂತ ಸಂಸದನ ನಿಗೂಢ ಸಾವು

ಒಡಿಶಾ: ರಷ್ಯಾದ ಶ್ರೀಮಂತ ಸಂಸದ ಪಾವೆಲ್ ಆಂಟೊವ್ ಒಡಿಶಾದ ಹೋಟೆಲ್‍ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ತಮ್ಮ 65ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ರಾಯಗಡಕ್ಕೆ ಬಂದಿದ್ದ ಪಾವೆಲ್ ಹೋಟೆಲ್‍ನ 3ನೇ ಮಹಡಿಯ ಕಿಟಕಿಯಿಂದ ಬಿದ್ದು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ರಷ್ಯಾ-ಉಕ್ರೇನ್ ಯುದ್ಧವನ್ನು ವಿರೋಧಿಸಿದ್ದ ಬಹು-ಕೋಟ್ಯಾಧಿಪತಿ ಆಂಟೊವ್ ನಿಗೂಢ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಇದೇ ಒಡಿಶಾ ಹೋಟೆಲ್‌ನಲ್ಲಿ 1 ವಾರದೊಳಗೆ ಸಾವನ್ನಪ್ಪಿದ ರಷ್ಯಾದ 2ನೇ ಸಂಸದ ಆಂಟೊವ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಂಟೊವ್ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶರ್ಮಾ, ‘ಆಂಟೊವ್ ಕುಟುಂಬದ ಅನುಮತಿಯೊಂದಿಗೆ ಅಧಿಕಾರಿಗಳು ಸೋಮವಾರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಭರ್ಜರಿಯಾಗಿ ಚಂಡೆ ಬಾರಿಸಿದ ಮದುಮಗಳು! ಸಾಥ್ ನೀಡಿದ ಅಪ್ಪ

ಡಿಸೆಂಬರ್ 25ರ ಭಾನುವಾರದಂದು ಪಾವೆಲ್ ಶವವಾಗಿ ಪತ್ತೆಯಾಗಿದ್ದರು.  ವರದಿಗಳ ಪ್ರಕಾರ ಒಡಿಶಾದ ರಾಯಗಡದಲ್ಲಿರುವ ಸಾಯಿ ಇಂಟರ್‍ನ್ಯಾಷನಲ್ ಹೋಟೆಲ್‍ಗೆ ಡಿ.21ರಂದು ನಾಲ್ವರು ರಷ್ಯಾದ ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ವ್ಲಾಡಿಮಿರ್ ಬುಡಾನೋವ್(61) ಡಿ.22ರ ಬೆಳಗ್ಗೆ ಹೋಟೆಲ್‍ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಬುಡಾನೋವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದರು.  

ತಮ್ಮ ಸ್ನೇಹಿತ ಬುಡಾನೋವ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಬಳಿಕ ಆಂಟೊವ್ ಖಿನ್ನತೆಗೆ ಒಳಗಾಗಿದ್ದರಂತೆ. ಸ್ನೇಹಿತನ ಸಾವಿನಿಂದ ಮನೊಂದಿದ್ದ ಅವರು ಡಿ.25ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವಿವೇಕಾನಂದ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಮಾತನಾಡಲು ನಿರಾಕರಣೆ: ಸ್ಕ್ರೂಡ್ರೈವರ್‌ನಿಂದ 51 ಬಾರಿ ಚುಚ್ಚಿ ಚುಚ್ಚಿ ಯುವತಿ ಕೊಂದ ಪಾಗಲ್!

ಏತನ್ಮಧ್ಯೆ ರಷ್ಯಾದ ಪ್ರವಾಸಿಗರ ಮಾರ್ಗದರ್ಶಿ ಜಿತೇಂದ್ರ ಸಿಂಗ್ ಮಾತನಾಡಿ, ‘ರಾಯಗಡ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ನಾಲ್ವರು ಬಂದಿದ್ದರು.  ಈ ಪೈಕಿ ವ್ಲಾಡಿಮಿರ್ ಅನಾರೋಗ್ಯದಿಂದ ಬಳಲುತ್ತಿದ್ದರು, ಮರುದಿನ ಬೆಳಗ್ಗೆ ನಾವು ಅವರ ಕೋಣೆಗೆ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ನಾವು ಪೊಲೀಸರಿಗೆ ಕರೆ ವಿಷಯ ತಿಳಿಸಿದ್ದೇವು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ ಆಂಟೊವ್ ಸಹ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ’ ಅಂತಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News