ಚೆನ್ನೈ: ತಮಿಳು ಚಿತ್ರರಂಗದ ಇಬ್ಬರು ದಿಗ್ಗಜರು ರಾಜಕೀಯ ಪ್ರವೇಶಿಸಿದ್ದಾರೆ. ಅವರಿಬ್ಬರೂ ಸಮಕಾಲೀನರು, ಜೊತೆಗೆ ಉತ್ತಮ ಸ್ನೇಹಿತರೂ ಹೌದು. ಅವರು ಮತ್ತಾರೂ ಅಲ್ಲ ಸೂಪರ್ ಸ್ಟಾರ್ ರಜನಿ ಕಾಂತ್ ಮತ್ತು ಬಹುಭಾಷಾ ನಟ ಕಮಲ್ ಹಾಸನ್. ಗುರುವಾರವಷ್ಟೇ ಕಮಲ್ ಹಾಸನ್ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಕಮಲ್ ರಾಜಕೀಯ ಪ್ರವೇಶ ಕುರಿತಂತೆ ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಹಿರಿಯ ನಟ ಸೂಪರ್ ಸ್ಟಾರ್ ರಜನಿ ಕಾಂತ್ "ನಮ್ಮ ಪಥಗಳು ಮತ್ತು ಶೈಲಿಗಳು ವಿಭಿನ್ನವಾಗಿರಬಹುದು, ಆದರೆ ನಮ್ಮ ಗುರಿ ಒಂದೇ". ಸಾರ್ವಜನಿಕ ಸೇವೆಯೇ ನಮ್ಮಿಬ್ಬರ ಸಾಮಾನ್ಯ ಗುರಿ ಎಂದು ಹೇಳಿದರು.
"ನಾನು ಅವರ (ಕಮಲ್ ಹಾಸನ್) ಸಾರ್ವಜನಿಕ ಸಭೆಗಳನ್ನು ವೀಕ್ಷಿಸುತ್ತೇನೆ ಮತ್ತು ಅದು ಚೆನ್ನಾಗಿದೆ. ಸಿನೆಮಾದಲ್ಲಿ ನಮ್ಮ ಶೈಲಿಗಳು ವಿಭಿನ್ನವಾಗಿವೆ, ಆದ್ದರಿಂದ ಅದು ರಾಜಕೀಯದಲ್ಲಿಯೂ ಹಾಗೆ ಕಾಣುತ್ತಿದೆ. ಆದರೆ ಜನರಿಗೆ ಒಳ್ಳೆಯದು ಮಾಡುವುದು ಮುಖ್ಯ ವಿಷಯ(ನಮ್ಮಿಬ್ಬರ ಉದ್ದೇಶ)" ಎಂದು ರಜನಿ ಕಾಂತ್ ಸುದ್ದಿಗಾರರಿಗೆ ತಿಳಿಸಿದರು.
Kamal Haasan's public meeting was good, I watched it. Our paths & styles may be different but our goal is same, that is doing good for people: Rajinikanth in Chennai pic.twitter.com/67c8mr42xD
— ANI (@ANI) February 23, 2018