ಭಾರತದಲ್ಲಿ 2017ರಲ್ಲಿ 8 ಲಕ್ಷಕ್ಕೂ ಅಧಿಕ ಶಿಶುಗಳ ಸಾವು!

ಇಂಟರ್​ ಏಜೆನ್ಸಿ ಗ್ರೂಪ್​ ಫಾರ್​ ಚೈಲ್ಡ್​ ಮೊರ್ಟಾಲಿಟಿ ಎಸ್ಟಿಮೇಷನ್ ನಡೆಸಿರುವ ಸಮೀಕ್ಷೆ ಪ್ರಕಾರ 8 ಲಕ್ಷ ಶಿಶುಗಳಲ್ಲಿ 6,05,000 ಆಗತಾನೇ ಹುಟ್ಟಿದ ಶಿಶುಗಳ ಸಾವು ಕೂಡ ಸೇರಿವೆ.

Last Updated : Sep 18, 2018, 07:49 PM IST
ಭಾರತದಲ್ಲಿ 2017ರಲ್ಲಿ 8 ಲಕ್ಷಕ್ಕೂ ಅಧಿಕ ಶಿಶುಗಳ ಸಾವು! title=

ನವದೆಹಲಿ: ಭಾರತದಲ್ಲಿ 2017ರಲ್ಲಿ 8,02,000 ಶಿಶುಗಳು ಸಾವನ್ನಪ್ಪಿವೆ ಎಂಬ ಆಘಾತಕಾರಿ ವಿಷಯವನ್ನು ವಿಶ್ವಸಂಸ್ಥೆಯ ಇಂಟರ್​ ಏಜೆನ್ಸಿ ಗ್ರೂಪ್​ ಫಾರ್​ ಚೈಲ್ಡ್​ ಮೊರ್ಟಾಲಿಟಿ ಎಸ್ಟಿಮೇಷನ್​ (ಯುಎನ್‍ಐಜಿಎಂಇ) ಸಮೀಕ್ಷೆ ವರದಿ ಬಹಿರಂಗಪಡಿಸಿದೆ. 

ಇಂಟರ್​ ಏಜೆನ್ಸಿ ಗ್ರೂಪ್​ ಫಾರ್​ ಚೈಲ್ಡ್​ ಮೊರ್ಟಾಲಿಟಿ ಎಸ್ಟಿಮೇಷನ್ ನಡೆಸಿರುವ ಸಮೀಕ್ಷೆ ಪ್ರಕಾರ 8 ಲಕ್ಷ ಶಿಶುಗಳಲ್ಲಿ 6,05,000 ಆಗತಾನೇ ಹುಟ್ಟಿದ ಶಿಶುಗಳ ಸಾವು ಕೂಡ ಸೇರಿವೆ. ಅಲ್ಲದೆ, ಇದರಲ್ಲಿ 5 ರಿಂದ 14 ವರ್ಷ ವಯಸ್ಸಿನ 1,52,000 ಮಕ್ಕಳೂ ಸೇರಿದ್ದಾರೆ ಎಂದು ಸಮೀಕ್ಷೆ ವರದಿ ನೀಡಿದೆ.

ವಿಶ್ವಮಟ್ಟದಲ್ಲಿ ಕಳೆದ 5 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಾರತದಲ್ಲಿ ಮಕ್ಕಳು ಸಾವನ್ನಪ್ಪಿರುವ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ಯುನಿಸೆಫ್ ಇಂಡಿಯಾ ಪ್ರತಿನಿಧಿ ಯಾಸ್ಮಿನ್ ಅಲಿ ಹಖ್ ತಿಳಿಸಿದ್ದಾರೆ. 

2016ರಲ್ಲಿ ವರ್ಷಪ್ರತಿ ಜನಿಸಿದ 1,000 ಶಿಶುಗಳಲ್ಲಿ 44 ಮಕ್ಕಳು ಮೃತಪಟ್ಟಿದ್ದರು. ಆ ವರ್ಷ ಭಾರತದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 8.67 ಲಕ್ಷ ಇತ್ತು. 2017ರಲ್ಲಿ ಪ್ರತಿ 5 ಲಿಂಗಾನುಪಾತದಲ್ಲಿ ವರ್ಷಪ್ರತಿ ಜನಿಸಿದ 1,000 ಗಂಡು ಮಕ್ಕಳಲ್ಲಿ 39 ಮತ್ತು 1,000 ಹೆಣ್ಣು ಮಕ್ಕಳಲ್ಲಿ ಮೃತಪಟ್ಟವರ ಸಂಖ್ಯೆ 40 ಆಗಿತ್ತು. ಒಟ್ಟಾರೆ 2017ರಲ್ಲಿ 8.2 ಲಕ್ಷ ಮಕ್ಕಳು ಮೃತಪಟ್ಟಿದ್ದಾರೆ. ಇದಕ್ಕೆ ಅಪೌಷ್ಠಿಕ ಆಹಾರ, ಗರ್ಭಿಣಿಯರ ಮನಸಿನ ಮೇಲಿನ ಒತ್ತಡವೂ ಮುಖ್ಯ ಕಾರಣವಾಗಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ. 

Trending News