ಸಂಚಾರಿ ನಿಯಮ ಉಲ್ಲಂಘಿಸಿದ ಟ್ರಕ್‌ನ ಮಾಲೀಕನಿಗೆ 6.53 ಲಕ್ಷ ರೂ. ದಂಡ ..!

 ಸಂಚಾರ ನಿಯಮ ಉಲ್ಲಂಘಿಸಿದ ಟ್ರಕ್‌ನ ಮಾಲೀಕರಿಗೆ ಸಂಬಲ್‌ಪುರ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಬರೋಬ್ಬರಿ  6.53 ಲಕ್ಷ ರೂ.ದಂಡ ವಿಧಿಸಿದೆ.

Updated: Sep 14, 2019 , 04:38 PM IST
ಸಂಚಾರಿ ನಿಯಮ ಉಲ್ಲಂಘಿಸಿದ ಟ್ರಕ್‌ನ ಮಾಲೀಕನಿಗೆ 6.53 ಲಕ್ಷ ರೂ. ದಂಡ ..!

ಸಂಬಲ್ಪುರ:  ಸಂಚಾರ ನಿಯಮ ಉಲ್ಲಂಘಿಸಿದ ಟ್ರಕ್‌ನ ಮಾಲೀಕರಿಗೆ ಸಂಬಲ್‌ಪುರ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಬರೋಬ್ಬರಿ  6.53 ಲಕ್ಷ ರೂ.ದಂಡ ವಿಧಿಸಿದೆ.

ಈ ಘಟನೆ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬರುವ ಮುನ್ನ ಆಗಸ್ಟ್ 10 ರಂದು ನಡೆದಿದೆ. ಆದರೆ ಇದು ಶನಿವಾರ ಮಾತ್ರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಹಳೆಯ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

ನಾಗಾಲ್ಯಾಂಡ್‌ನಲ್ಲಿ ನೋಂದಾಯಿಸಲಾಗಿರುವ ಈ ಟ್ರಕ್‌ಗೆ ಸಂಬಲ್‌ಪುರದ ಸಾರಿಗೆ ಕಚೇರಿಯ ಜಾರಿ ತಂಡವು ದಂಡ ವಿಧಿಸಿದೆ. ಟ್ರಕ್‌ನ ಮಾಲೀಕರನ್ನು ನಾಗಾಲ್ಯಾಂಡ್‌ನ ಫೆಕ್ ಟೌನ್‌ನಲ್ಲಿರುವ ಬೆತೆಲ್ ಕಾಲೋನಿಯ ಶೈಲೇಶ್ ಶಂಕರ್ ಲಾಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಚಾಲಕ ದಿಲ್ಲಿಪ್ ಕಾರ್ತಾ ಜಾರ್ಸುಗುಡಾದ ನಿವಾಸಿ ಎಂದು ತಿಳಿದುಬಂದಿದೆ.

ಆರ್‌ಟಿಒ ಚಾಲಕ ಮತ್ತು ಟ್ರಕ್ ಮಾಲೀಕರಿಗೆ ರಸ್ತೆ ತೆರಿಗೆ ಇಲ್ಲದೆ ವಾಹನ ಚಲಾಯಿಸಿದಕ್ಕೆ ಮತ್ತು ವಾಹನ ವಿಮೆಗೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳದಿರುವುದಕ್ಕೆ, ವಾಯೂ ಮತ್ತು ಶಬ್ದ ಮಾಲಿನ್ಯವನ್ನು ಉಲ್ಲಂಘಿಸಿ ಮತ್ತು ಸರಕುಗಳ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ್ದಕ್ಕೆ ದಂಡ ವಿಧಿಸಲಾಗಿದೆ.ಈ ವಾಹನವು ಪರವಾನಗಿ ಷರತ್ತುಗಳನ್ನು ಸಹ ಉಲ್ಲಂಘಿಸಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಗುರುವಾರ ದೆಹಲಿಯ ಟ್ರಕ್ ಮಾಲೀಕರಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2 ಲಕ್ಷ ರೂ ಮತ್ತು ಐನೂರು ದಂಡ ವಿಧಿಸಲಾಯಿತು. ತಪಾಸಣೆಯ ಸಮಯದಲ್ಲಿ, ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಆತನ ಚಾಲನಾ ಪರವಾನಗಿ ಮತ್ತು ಟ್ರಕ್ ಮಾಲೀಕತ್ವಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಹೊಂದಿಲ್ಲದೆ ಇರುವುದರಿಂದಾಗಿ ದಂಡ ವಿಧಿಸಿದ್ದರು.ಈಗ ತಿದ್ದುಪಡಿ ಮಾಡಿದ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1 ರಂದು ಜಾರಿಗೆ ತರಲಾಯಿತು ಮತ್ತು ನೂತನ ನಿಯಮಗಳ ಪ್ರಕಾರ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ ಭಾರಿ ದಂಡವನ್ನು ವಿಧಿಸಲಾಗುತ್ತಿದೆ.