ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಬಂಧನ

ಚಿದಂಬರಂ ಅವರನ್ನು ಗುರುವಾರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

Last Updated : Aug 22, 2019, 07:29 AM IST
ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಬಂಧನ title=
Photo Courtesy: ANI

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಬುಧವಾರ ರಾತ್ರಿ ಹೈಡ್ರಾಮಾದ ನಡುವೆ ಬಂಧಿಸಲಾಗಿದೆ. ರಾತ್ರಿ ಸಿಬಿಐ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಒಳಗಾಗಿದ್ದ ಪಿ. ಚಿದಂಬರಂ ಅವರನ್ನು ಗುರುವಾರ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಸುಮಾರು 25-26 ಗಂಟೆಗಳಿಗೂ ಹೆಚ್ಚು ಕಾಲ ಯಾರ ಕಣ್ಣಿಗೂ ಬೀಳದ ನಾಪತ್ತೆಯಾಗಿದ್ದ ಚಿದಂಬರಂ ಅವರು ಅಂತಿಮವಾಗಿ ಬುಧವಾರ ಸಂಜೆ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಣಿಸಿಕೊಂಡರು. ಅಲ್ಲಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ನಾನೆಲ್ಲೂ ತಪ್ಪಿಸಿಕೊಂಡು ಹೋಗಿರಲಿಲ್ಲ ಎಂದು ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ಚಿದಂಬರಂ ರಾಜಕೀಯ ಮಾರಾಟವನ್ನು ಆರೋಪಿಸಿದ ಅವರು, ಕಾನೂನಿನಿಂದ ಕಣ್ತಪ್ಪಿಸಿಕೊಂದು ಓಡಿ ಹೋಗಿರುವ ಆರೋಪಕ್ಕೆ ಬೇಸರ ವ್ಯಕ್ತಪಡಿಸಿದರು. "ಇದಕ್ಕೆ ವಿರುದ್ಧವಾಗಿ ನಾನು ಕಾನೂನಿನ ರಕ್ಷಣೆಯನ್ನು ಬಯಸುತ್ತಿದ್ದೆ" ಎಂದು ಅವರು ಹೇಳಿದರು. 

ಅವರೊಂದಿಗೆ ಕಾಂಗ್ರೆಸ್ ನ ಹಿರಿಯ ಮುಖಂಡರಾದ ಅಹ್ಮದ್ ಪಟೇಲ್, ಕೆ.ಸಿ.ವೇಣುಗೋಪಾಲ್, ಗುಲಾಮ್ ನಬಿ ಆಜಾದ್, ಮಲ್ಲಿಕರ್ಜುನ ಖರ್ಗೆ, ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಗ್ವಿ, ಸಲ್ಮಾನ್ ಖುರ್ಷಿದ್ ಮತ್ತು ವಿವೇಕ್ ತಾಂಖಾ ಹಾಜರಿದ್ದರು.


ಕಾಂಗ್ರೆಸ್ ಹಿರಿಯ ಮುಖಂಡರೊಂದಿಗೆ ಪಿ. ಚಿದಂಬರಂ ಪತ್ರಿಕಾಗೋಷ್ಠಿ (ANI ಫೋಟೋ)

ಸಿಬಿಐ ಅಧಿಕಾರಿಗಳ ತಂಡ ಕಾಂಗ್ರೆಸ್ ಕಚೇರಿಗೆ ಆಗಮಿಸುವ ಮೊದಲೇ ಚಿದಂಬರಂ ದೆಹಲಿಯ ಜೋರ್ ಬಾಗ್‌ನಲ್ಲಿರುವ ತಮ್ಮ ಮನೆಗೆ ತೆರಳಿದರು. ಅಲ್ಲಿ ಕೂಡ ದೊಡ್ಡ ಹೈಡ್ರಾಮಾವೇ ನಡೆದಿತ್ತು. ಏಳು ಸದಸ್ಯರ ಸಿಬಿಐ ತಂಡವು ಗೇಟ್‌ಗಳು ಲಾಕ್ ಆಗಿರುವುದನ್ನು ಕಂಡು ಆವರಣಕ್ಕೆ ಪ್ರವೇಶಿಸಲು ಗೋಡೆಯ ಮೇಲೆ ಹಾರಿ ಹೋಗಬೇಕಾಯಿತು. ಇಡಿ ಅಧಿಕಾರಿಗಳ ಮತ್ತೊಂದು ತಂಡವೂ ಅವರ ಮನೆಗೆ ತಲುಪಿತು.

ಇಡೀ ದಿನ ನಡೆದ ಹೈಡ್ರಾಮಾಗಳ ಬಳಿಕ ಸಿಬಿಐ ತಂಡವು ಬುಧವಾರ ರಾತ್ರಿ ಚಿದಂಬರಂ ಅವರ ಮನೆಯ ಗೋಡೆ ಹತ್ತಿ ಒಳಗೆ ನುಗ್ಗಿ ಅವರನ್ನು ಬಂಧಿಸಿ,  ತಮ್ಮ ಕಾರಿನಲ್ಲಿ ಜೋರ್‌ ಬಾಘ್ ನಿವಾಸದಿಂದ ನೇರವಾಗಿ ಸಿಬಿಐ ಪ್ರಧಾನ ಕಚೇರಿಗೆ ಕರೆದೊಯ್ದು ವಿಚಾರಣೆ ಪ್ರಾರಂಭಿಸಿತು.

ನವದೆಹಲಿಯ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ನಿವಾಸದೊಳಗೆ ಹೋಗಲು ಸಿಬಿಐ ಅಧಿಕಾರಿಗಳು ಗೋಡೆಯ ಮೇಲೆ ಹಾರಿದ್ದಾರೆ. (ANI ಫೋಟೋ)

ಇದಕ್ಕೂ ಮುನ್ನ ಬುಧವಾರ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಬಂಧನಕ್ಕೆ ತಡೆಯಾಜ್ಞೆ ನೀಡಲು ಭಾರತದ ಮುಖ್ಯ ನ್ಯಾಯಮೂರ್ತಿ ಬುಧವಾರದಂದು ನಿರಾಕರಿಸಿದ್ದಾರೆ. ಚಿದಂಬರಂ ಅವರ ಮನವಿಯ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಮುಂದೂಡಲಾಗಿದೆ.

ಸಿಡಿಬಿ ಮತ್ತು ಇಡಿ ಕೂಡ ಉನ್ನತ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿದ್ದು, ಚಿದಂಬರಂ ಅವರ ಮನವಿಯನ್ನು ತೀರ್ಮಾನಿಸುವ ಮೊದಲು ತಮ್ಮ ಅಹವಾಲು ಕೇಳುವಂತೆ ಕೇಳಿದೆ. ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿತ್ತು.

ಏತನ್ಮಧ್ಯೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಚಿದಂಬರಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಈ ಬಂಧನ ರಾಜಕೀಯ ಪ್ರೇರಣೆಯಲ್ಲದೆ ಮತ್ತೇನೂ ಅಲ್ಲ ಎಂದು ಆರೋಪ ಮಾಡಿದರು.

2007 ರಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದಾಗ 305 ಕೋಟಿ ರೂ.ಗೆ ಸಾಗರೋತ್ತರ ಹಣವನ್ನು ಸ್ವೀಕರಿಸಲು ಐಎನ್ಎಕ್ಸ್ ಮೀಡಿಯಾಕ್ಕೆ ನೀಡಲಾದ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ) ಕ್ಲಿಯರೆನ್ಸ್‌ನಲ್ಲಿನ ಅಕ್ರಮಗಳ ಆರೋಪದ ಮೇಲೆ ಸಿಬಿಐ 2017 ರ ಮೇ 15 ರಂದು ಸಿಬಿಐ ನೋಂದಾಯಿಸಿದ ಎಫ್‌ಐಆರ್‌ಗೆ ಸಂಬಂಧಿಸಿದೆ. ಈ ನಿಟ್ಟಿನಲ್ಲಿ ಇಡಿ 2018 ರಲ್ಲಿ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿತ್ತು.

ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ತಂದೆ ಹಣಕಾಸು ಸಚಿವರಾಗಿದ್ದಾಗ 2007 ರಲ್ಲಿ ಎಫ್‌ಐಪಿಬಿ ಕ್ಲಿಯರೆನ್ಸ್ ಪಡೆಯಲು ಹೇಗೆ ಯಶಸ್ವಿಯಾದರು ಎಂದು ಇಡಿ ಮತ್ತು ಸಿಬಿಐ ಪರಿಶೀಲಿಸುತ್ತಿದೆ.

ಐಎನ್‌ಎಕ್ಸ್ ಮೀಡಿಯಾಕ್ಕೆ ಎಫ್‌ಐಪಿಬಿ ಕ್ಲಿಯರೆನ್ಸ್ ಮಾಡಲು ಅನುಕೂಲವಾಗುವಂತೆ ಹಣವನ್ನು ಸ್ವೀಕರಿಸಿದ ಆರೋಪದ ಮೇಲೆ ಕಾರ್ತಿಯನ್ನು 2018 ರ ಫೆಬ್ರವರಿ 28 ರಂದು ಸಿಬಿಐ ಬಂಧಿಸಿತ್ತು. ನಂತರ ಅವರಿಗೆ ಜಾಮೀನು ನೀಡಲಾಯಿತು.
 

Trending News