ಸೆಪ್ಟೆಂಬರ್ 5 ರವರೆಗೆ ಪಿ. ಚಿದಂಬರಂ ಸಿಬಿಐ ಕಸ್ಟಡಿ ವಿಸ್ತರಣೆ

ಚಿದಂಬರಂ ಅವರ 15 ದಿನಗಳ ಕಸ್ಟಡಿ ಸೆಪ್ಟೆಂಬರ್ 5 ಕ್ಕೆ ಕೊನೆಗೊಳ್ಳಲಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. 

Updated: Sep 3, 2019 , 03:02 PM IST
ಸೆಪ್ಟೆಂಬರ್ 5 ರವರೆಗೆ ಪಿ. ಚಿದಂಬರಂ ಸಿಬಿಐ ಕಸ್ಟಡಿ ವಿಸ್ತರಣೆ

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಸಿಬಿಐ ಕಸ್ಟಡಿಯನ್ನು ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಸೆ.5 ರಂದು ಸುಪ್ರೀಂ ಕೋರ್ಟ್ ಈ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಅಲ್ಲಿಯವರೆಗೆ, ಸಿಡಿಐ ಪ್ರಕರಣದಲ್ಲಿ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಒತ್ತಾಯಿಸದಿರಲು ಚಿದಂಬರಂ ಪರ ವಕೀಲರು ಒಪ್ಪಿದ್ದಾರೆ.

ಚಿದಂಬರಂ ಅವರ 15 ದಿನಗಳ ಕಸ್ಟಡಿ ಸೆಪ್ಟೆಂಬರ್ 5 ಕ್ಕೆ ಕೊನೆಗೊಳ್ಳಲಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಈ ದಿನಾಂಕದ ನಂತರ ಅವರು ಚಿದಂಬರಂ ಬಂಧನಕ್ಕೆ ಒತ್ತಾಯಿಸುವುದಿಲ್ಲ ಎಂದು ಅದು ಹೇಳಿದೆ.

ಚಿದಂಬರಂ ಸಿಬಿಐ ವಶದಲ್ಲಿರಬೇಕು ಮತ್ತು ನ್ಯಾಯಾಲಯವು ಅವರ ಮನವಿಯನ್ನು ಆಲಿಸುವವರೆಗೂ ತಿಹಾರ್ ಜೈಲಿಗೆ ಕಳುಹಿಸಬಾರದು ಎಂದು ಸೋಮವಾರ ಉನ್ನತ ನ್ಯಾಯಾಲಯ ಆದೇಶಿಸಿತ್ತು. ಚಿದಂಬರಂ ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದರೆ, ಅವರ ಸಿಬಿಐ ಬಂಧನವನ್ನು ಸೆಪ್ಟೆಂಬರ್ 5 ರವರೆಗೆ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.