ಪಾಕ್ ಆರ್ಮಿ ಮುಖ್ಯಸ್ಥರನ್ನು ಅಪ್ಪಿಕೊಂಡರೆ ಮಾತ್ರ ಪಾಕ್ ಜಿಂದಾಬಾದ್ ಘೋಷಣೆ ಮೊಳಗಲು ಸಾಧ್ಯ -ಅಮಿತ್ ಶಾ

ರಾಜಸ್ಥಾನ್ ಅಲ್ವಾರ್ನಲ್ಲಿ ಇತ್ತೀಚೆಗೆ ನಡೆಸಿದ ರ್ಯಾಲಿಯಲ್ಲಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಭಾಷಣದ ವೇಳೆ ಮೊಳಗಿದ ಪಾಕಿಸ್ತಾನ ಜಿಂದಾಬಾದ್ ಘೋಷಣೆಯ ವಿರುದ್ದ  ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ.

Updated: Dec 6, 2018 , 08:42 PM IST
ಪಾಕ್ ಆರ್ಮಿ ಮುಖ್ಯಸ್ಥರನ್ನು ಅಪ್ಪಿಕೊಂಡರೆ ಮಾತ್ರ ಪಾಕ್ ಜಿಂದಾಬಾದ್ ಘೋಷಣೆ ಮೊಳಗಲು ಸಾಧ್ಯ -ಅಮಿತ್ ಶಾ

ನವದೆಹಲಿ: ರಾಜಸ್ಥಾನ್ ಅಲ್ವಾರ್ನಲ್ಲಿ ಇತ್ತೀಚೆಗೆ ನಡೆಸಿದ ರ್ಯಾಲಿಯಲ್ಲಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಭಾಷಣದ ವೇಳೆ ಮೊಳಗಿದ ಪಾಕಿಸ್ತಾನ ಜಿಂದಾಬಾದ್ ಘೋಷಣೆಯ ವಿರುದ್ದ  ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ.

ಈ ಕುರಿತಾಗಿ ಮಾತನಾಡಿದ ಅಮಿತ್ ಶಾ " ಪಾಕಿಸ್ತಾನದ ಆರ್ಮಿ ಮುಖ್ಯಸ್ಥರನ್ನು ಅಪ್ಪಿಕೊಂಡಾಗ ಮಾತ್ರ ಅಂತಹ ಘೋಷಣೆಗಳನ್ನು ರ್ಯಾಲಿಯಲ್ಲಿ ಕೂಗಲು ಸಾಧ್ಯ" ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ಪ್ರಚಾರದ ನಿಮಿತ್ತ ಮಾಧ್ಯಮದವರೊಂದಿಗೆ ಮಾತನಾಡಿದ ಅಮಿತ್ ಶಾ ಒಂದು ವೇಳೆ ಸಿಧು ಪಾಕಿಸ್ತಾನದ ಆರ್ಮಿ ಮುಖಸ್ಥ ಜನರಲ್ ಕಮಾರ್ ಜಾವೇದ್ ಬಜ್ವಾ ಅವರನ್ನು ರಾಹುಲ್ ಗಾಂಧಿಯವರನ್ನು ಕೇಳಿ ಅಪ್ಪಿಕೊಂಡಿದ್ದಾರೆಯೇ? ಎಂದರು.ಅಲ್ಲದೆ ಸಿಧು ಅವರ ಪಾಕ್ ಮೇಲಿನ ಪ್ರೀತಿಯ ವಿಚಾರವಾಗಿ ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಅಮಿತ್ ಶಾ ತಿಳಿಸಿದರು.

ಡಿಸೆಂಬರ್ 1 ರಂದು ರಾಜಸ್ಥಾನದ ಅಲ್ವಾರ್ನಲ್ಲಿ ಸಿಧು ಅವರ ಚುನಾವಣಾ ರ್ಯಾಲಿಯಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಘೋಷಣೆಗಳ ಕೇಳಿ ಬಂದ ಬಗ್ಗೆ ಜೀ ನ್ಯೂಸ್ ವರದಿ ಮಾಡಿತ್ತು ಇದಾದ ನಂತರ ಅಮಿತ್ ಶಾ ಅವರ ಹೇಳಿಕೆ ಬಂದಿದೆ.

ಆದರೆ ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷವು ಈ ವೀಡಿಯೋವನ್ನು ತಿರುಚಲಾಗಿದೆ ಎಂದು ಹೇಳಿದೆ. ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ರ್ಯಾಲಿಯಲ್ಲಿರುವುದು  "ಸತ್ ಶ್ರೀ ಅಕಾಲ್" ಹೊರತು ಪಾಕಿಸ್ತಾನ ಜಿಂದಾಬಾದ್ ಅಲ್ಲ ಎಂದು ತಿಳಿಸಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ಈ ಘೋಷನೆಗಳನ್ನು ಹೊರತುಪಡಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.ಈಗ ಈ ವಿಚಾರವಾಗಿ ಸಿಧು ಜೀ ನ್ಯೂಸ್ ವಿರುದ್ದ ಮಾನನಷ್ಟ ಮೊಕದ್ದಮೆ ಹೇರಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ.

ಜೀ ನ್ಯೂಸ್ ತಂಡವು ಜನ ಸಾಮಾನ್ಯರು ಮತ್ತು ಸಿಧು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತರನ್ನು ಸಂಪರ್ಕಿಸಿ ಅಲ್ಲಿ ರಿಕಾರ್ಡ್ ಮಾಡಿದ್ದ ಒಟ್ಟು ಏಳು ವಿಡಿಯೋಗಳನ್ನು ಕಲೆ ಹಾಕಿತ್ತು.ಅಲ್ಲಿ ಒಬ್ಬ ಸ್ಥಳೀಯ ಪತ್ರಕರ್ತ ಸಿಧು ರ್ರ್ಯಾಲಿಯೊಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆಯನ್ನು ಕೂಗಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದನು.