ನವದೆಹಲಿ : ಗುಜರಾತ್ನಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿರುವ ದ್ವಾರಕ (Dwaraka) ನಗರದ ಬಗ್ಗೆ ಶೋಧ ನಡೆಸುವಂತೆ ಸಂಸತ್ ಸಮಿತಿಯು (Parliament commitee) ಸರ್ಕಾರಕ್ಕೆ ಸೂಚಿಸಿದೆ. ದ್ವಾರಕಾದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಆರ್ಕೆಲಾಜಿಕಲ್ ರಿಸರ್ಚ್ ( Marine Archaeological Research) ನಡೆಸುವಂತೆ ಸಮಿತಿಯು ಸರ್ಕಾರಕ್ಕೆ ಸೂಚಿಸಿದೆ.
'ಪುರಾತತ್ವ ಸ್ಥಳಗಳಲ್ಲಿ ಸಂಶೋಧನೆ :
ಸಂಸತ್ತಿನಲ್ಲಿ ಮಂಡಿಸಲಾದ 2021-22ರ ಸಂಸ್ಕೃತಿ ಸಚಿವಾಲಯದ ಸ್ಥಾಯಿ ಸಮಿತಿಯ ವರದಿಯಲ್ಲಿ, ದ್ವಾರಕಾ (Dwaraka) ನಗರವು ಸಮುದ್ರದಲ್ಲಿ (Sea) ವಿಲೀನಗೊಂಡಿರುವ ಬಗ್ಗೆ ಹೇಳಲಾಗಿದೆ. ಅಲ್ಲದೆ ಸಮುದ್ರದಲ್ಲಿ ಮುಳುಗಡೆಯಾಗಿರುವ ನಗರದ ಬಗ್ಗೆ ಆರ್ಕೆಲಾಜಿಕಲ್ ರಿಸರ್ಚ್ (Marine Archaeological Research) ನಡೆಸುವಂತೆ ಸಮಿತಿ ಹೇಳಿದೆ. ಅಲ್ಲದೆ ದೇಶದಲ್ಲಿ ಇಂತಹ ಅನೇಕ ಪುರಾತತ್ತ್ವ ಸ್ಥಳಗಳಿವೆ. ಈ ಸ್ಥಳಗಳ ಬಗ್ಗೆಯೂ ಇನ್ನೂ ಶೋಧ ಕಾರ್ಯಗಳು ನಡೆದಿಲ್ಲ. ಈ ಸ್ಥಳಗಳ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸುವ ಸಲುವಾಗಿ ಉತ್ಖನನಕ್ಕೆ ಆಧುನಿಕ ತಂತ್ರಜ್ಞಾನವನ್ನು ಬಳಸಬಹುದು ಎಂದು ಸಮಿತಿ ಹೇಳಿದೆ.
ಇದನ್ನೂ ಓದಿ : "ಆಧಾರ್ ಲಿಂಕ್ ಮಾಡದಿರುವುದಕ್ಕೆ 3 ಕೋಟಿ ರೇಷನ್ ಕಾರ್ಡ್ ರದ್ದುಪಡಿಸುವುದು ಗಂಭೀರ ವಿಷಯ"
ASI CSR ಮೂಲಕ ಹೂಡಿಕೆ :
ಅಭಿಯಾನದಿಂದ ಪುರಾತತ್ವ ಪ್ರಾಮುಖ್ಯತೆಯ ಕಲಾಕೃತಿಗಳನ್ನು ಕಂಡುಹಿಡಿಯಬಹುದು ಎಂದು ಸಮಿತಿ ಹೇಳಿದೆ. ವರದಿಯ ಪ್ರಕಾರ, ಎಎಸ್ಐಗೆ (ASI) ಬಜೆಟ್ ಹಂಚಿಕೆಯನ್ನು 1246.75 ಕೋಟಿ ರೂ.ಗಳಿಂದ 1042.63 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ಸಮಿತಿ ಹೇಳಿದೆ. ಉತ್ತಮ ಫಲಿತಾಂಶಕ್ಕಾಗಿ, ಸಂಪನ್ಮೂಲಗಳ ಹಂಚಿಕೆಯಲ್ಲಿರುವ ಸ್ಪರ್ಧೆಯನ್ನು ಗಮನದಲ್ಲಿರಿಸಿಕೊಂಡು ಇರುವ ಬಜೆಟ್ (Budget) ಅನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಸಮಿತಿ ಸೂಚಿಸಿದೆ. ASI CSR ಮೂಲಕ ಹೂಡಿಕೆಯ ಸಾಧ್ಯವಾಗಲಿದೆಯೇ ಎಂಬುದನ್ನು ಕೂಡಾ ನೋಡಬೇಕಾಗುತ್ತದೆ ಎಂದು ಸಮಿತಿ ಶಿಫಾರಸು ಮಾಡಿದೆ.
ಇದನ್ನೂ ಓದಿ : Corona Return: ಎಲ್ಲೆಲ್ಲಿ ರಾತ್ರಿ ಕರ್ಫ್ಯೂ ಜಾರಿ? ಈ ಸ್ಥಳಗಳಿಗೆ ಹೋಗುವ ಮೊದಲು ತಿಳಿದುಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.