International womens day 2021 : ಈ ಎಲ್ಲಾ ಸ್ಥಳಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ

ಮಾರ್ಚ್ 8 ರಂದು, ಅಂತರರಾಷ್ಟ್ರೀಯ ಮಹಿಳಾ ದಿನ 2021 (International womens day) ಅನ್ನು ವಿಶ್ವದಾದ್ಯಂತ ಆಚರಿಸಲಾಗುವುದು ಎಂದು ಎಎಸ್‌ಐ  (ASI) ಹೇಳಿದೆ.

Written by - Ranjitha R K | Last Updated : Mar 7, 2021, 01:24 PM IST
  • ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೊಂದು ಗಿಫ್ಟ್
  • ಎಎಸ್‌ಐನ 3691 ಸಂರಕ್ಷಿತ ಸ್ಮಾರಕಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ
  • ವಿದೇಶಿ ಮಹಿಳೆಯರಿಗೂ ಉಚಿತ ಪ್ರವೇಶದ ಅವಕಾಶ
International womens day 2021 : ಈ ಎಲ್ಲಾ ಸ್ಥಳಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ title=
ಎಎಸ್‌ಐನ 3691 ಸಂರಕ್ಷಿತ ಸ್ಮಾರಕಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ (file photo)

ನವದೆಹಲಿ : 2021 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ (Womens day) ಅಂಗವಾಗಿ  ಭಾರತೀಯ ಪುರಾತತ್ವ ಇಲಾಖೆ (ASI) ಮಹಿಳೆಯರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಮಾರ್ಚ್ 8 ರಂದು ತನ್ನ ಸಂರಕ್ಷಿತ ಸ್ಮಾರಕಗಳಿಗೆ  ಮಹಿಳೆಯರಿಗೆ ಉಚಿತ ಪ್ರವೇಶವನ್ನು ಕಲ್ಪಿಸಿದೆ.  ದೇಶಾದ್ಯಂತ ಎಎಸ್‌ಐನ 3691 ಸಂರಕ್ಷಿತ ಸ್ಮಾರಕಗಳಿವೆ.  ಎಲ್ಲಾ ಸ್ಮಾರಕಗಳಿಗೆ ನಾಳೆ ಮಹಿಳೆಯರಿಗೆ ಉಚಿತ ಪ್ರವೇಶಕ್ಕೆ (Free Entry) ಅವಕಾಶ ನೀಡಲಾಗಿದೆ. 

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ :  
ಮಾರ್ಚ್ 8 ರಂದು, ಅಂತರರಾಷ್ಟ್ರೀಯ ಮಹಿಳಾ ದಿನ 2021 (International womens day) ಅನ್ನು ವಿಶ್ವದಾದ್ಯಂತ ಆಚರಿಸಲಾಗುವುದು ಎಂದು ಎಎಸ್‌ಐ  (ASI) ಹೇಳಿದೆ.  ಈ ದಿನ, ದೇಶಾದ್ಯಂತ ಎಎಸ್ಐನ ಎಲ್ಲಾ ಸ್ಮಾರಕಗಳಿಗೂ  ಮಹಿಳೆಯರಿಗೆ ಉಚಿತ  ಪ್ರವೇಶ (Free entry)ಕಲ್ಪಿಸಲಾಗುವುದು.  ಈ ಸ್ಮಾರಕಗಳಿಗೆ ಭೇಟಿ ನೀಡಲು ಮಹಿಳೆಯರಿಗೆ ಯಾವುದೇ ಪ್ರವೇಶ ಶುಲ್ಕ ವಿಧಿಸಲಾಗುವುದಿಲ್ಲ. ತಾಜ್ ಮಹಲ್ (Tajmahal),  ಲಾಲ್ ಕಿಲಾ ಅಥವಾ ಕುತುಬ್ ಮಿನಾರ್ ನಂತಹ ಐತಿಹಾಸಿಕ ಸ್ಥಳಗಳಿಗೆ ಭೆಟಿ ನೀಡಲು ಇಚ್ಛಿಸುವವರಿಗೆ ಇದೊಂದು ಸುವರ್ಣಾವಕಾಶ.

ಇದನ್ನೂ ಓದಿ : Ujjwala Yojana: ಉಜ್ವಲ ಯೋಜನೆಯಡಿ ಸಿಗುತ್ತಾ 3 ಉಚಿತ LPG ಸಿಲಿಂಡರ್?

ವಿದೇಶಿ ಮಹಿಳೆಯರಿಗೂ ಅವಕಾಶ :
ಮಾರ್ಚ್ 8 ರಂದು ಎಎಸ್ಐ ಅಡಿಯಲ್ಲಿ ಬರುವ ಎಲ್ಲಾ ಸ್ಮಾರಕಗಳಿಗೂ (Monuments)ಮಹಿಳೆಯರಿಗೆ ಉಚಿತ ಪ್ರವೇಶವಿರುತ್ತದೆ. ಎಎಸ್ಐ ಮಹಾನಿರ್ದೇಶಕರು ಈ ಬಗ್ಗೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಈ ಆದೇಶದ ಪ್ರಕಾರ ದೇಶ ಮಾತ್ರವಲ್ಲ ವಿದೇಶಿ ಮಹಿಳೆಯರು (womens) ಕೂಡಾ ಈ ಉಚಿತ ಪ್ರವೇಶದ ಲಾಭವನ್ನು ಪಡೆಯಬಹುದು. ದೇಶದಲ್ಲಿ ಎಎಸ್‌ಐನ 3691 ಸಂರಕ್ಷಿತ ಸ್ಮಾರಕಗಳಿವೆ.

ಇದನ್ನೂ ಓದಿ : EPF ವರ್ಗಾವಣೆ ಗೆ ಇನ್ನು ಸುಲಭ ; ಆನ್ ಲೈನ್ ನಲ್ಲಿ ಖಾತೆದಾರನೇ ಅಪ್ ಡೇಟ್ ಮಾಡಬಹುದು ಡೇಟ್ ಆಫ್ ಎಕ್ಸಿಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News