ಇಲ್ಲಿದೆ ರೈತರಿಗೊಂದು ನೆಮ್ಮದಿಯ ಸುದ್ದಿ! ಪಶು ಕ್ರೆಡಿಟ್ ಕಾರ್ಡ್ ಅಡಿ ಸಿಗುತ್ತಿದೆ ಬಡ್ಡಿ ರಹಿತ ಸಾಲ

ಯಾವುದೇ ಓರ್ವ ರೈತ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ 1.60 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಸಾಲ ಪಡೆದರೆ ಆತನಿಗೆ ಸಾಮಾನ್ಯ ಬಡ್ಡಿದರದ ಮೇಲೆ ಸಾಲ ಸಿಗಲಿದೆ.

Last Updated : Jun 11, 2020, 03:13 PM IST
ಇಲ್ಲಿದೆ ರೈತರಿಗೊಂದು ನೆಮ್ಮದಿಯ ಸುದ್ದಿ! ಪಶು ಕ್ರೆಡಿಟ್ ಕಾರ್ಡ್ ಅಡಿ ಸಿಗುತ್ತಿದೆ ಬಡ್ಡಿ ರಹಿತ ಸಾಲ title=

ನವದೆಹಲಿ: ವರ್ಷ 2022ರವರೆಗೆ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದೆ ಸರಣಿಯಲ್ಲಿ ಇದೀಗ ಕ್ರಿಸಾನ್ ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿಯೇ, ಪಶು ಕ್ರಿದಿತ್ ಕಾರ್ಡ್ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನಯಡಿ ಕೂಡ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ.

ಪಶು ಸಂಗೊಪನೆಗೆ ಒತ್ತು ನೀಡುವ ಉದ್ದೇಶದಿಂದ ಈ ಸಾಲ ನೀಡಲಾಗುತ್ತಿದೆ. ಈ ಯೋಜನೆಯ ಅಡಿ ಮೀನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೇಕೆ-ಕುರಿ ಸಾಕಾಣಿಕೆ, ಗೋವು-ಎಮ್ಮೆ ಸಾಕಾಣಿಕೆಗಾಗಿ ರೈತರಿಗೆ ಸಾಲ ನೀಡಲಾಗುತ್ತದೆ. 

ಹರ್ಯಾಣ ಸರ್ಕಾರ ಪಶುಸಂಗೋಪನೆಗೆ ಒಟ್ಟು ನೀಡುವ ಉದ್ದೇಶದಿಂದ ಪಶುಧನ್ ಕ್ರೆಡಿಟ್ ಕಾರ್ಡ್ ಯೋಜನೆ ಆರಂಭಿಸಿದೆ.

ಬಡ್ಡಿ ರಹಿತ ಸಾಲ
ಈ ಯೋಜನೆಯ ಅಡಿ 1.60 ಲಕ್ಷ ರೂ. ವರೆಗಿನ ಸಾಲ ಪಡೆಯಲು ಪಶುಪಾಲಕರು ಅಥವಾ ರೈತರು ಕೇವಲ ಪಶುಸಂಗೋಪನಾ ಹಾಗೂ ಡೆಯರಿ ಇಲಾಖೆಯ ಉಪನಿರ್ದೇಶಕರ  ಅಫಿಡವಿಟ್ ಮಾತ್ರ ಸಲ್ಲಿಸಬೇಕು. ಈ ಹಣಕ್ಕೆ ಯಾವುದೇ ರೀತಿಯ ಬಡ್ಡಿ ವಿಧಿಸಲಾಗುವುದಿಲ್ಲ. ಇದಕ್ಕೂ ಮೊದಲು ರೈತರು ತಮ್ಮ ಪಶುವಿನ ವಿಮೆ ಕೂಡ ಮಾಡಬೇಕು ಹಾಗೂ ಇದಕ್ಕಾಗಿ ಕೇವಲ ರೂ.100 ಮಾತ್ರ ಪಾವತಿಸಬೇಕು . ಈ ಯೋಜನೆಯಡಿ ಪಡೆದ ಸಾಲಕ್ಕೆ ರೈತರು ಶೇ.7ರಷ್ಟು ಬಡ್ಡಿ ಪಾವತಿಸಬೇಕು. ಆದರೆ, ಇದರಲ್ಲಿಯೂ ಕೂಡ ಸರ್ಕಾರ ಶೇ.3 ಸಬ್ಸಿಡಿ ನೀಡುತ್ತಿದ್ದರೆ, ಉಳಿದ ಶೇ. 4ರಷ್ಟು ಬಡ್ಡಿಯನ್ನು ಹರಿಯಾಣಾ ಸರ್ಕಾರ ಭರಿಸಲಿದೆ. ಹೀಗಾಗಿ ಈ ಯೋಜನೆಯಡಿ ರೈತರು ಪಡೆಯುವ ಒಟ್ಟು ಸಾಲ ಬಡ್ಡಿ ರಹಿತವಾಗಲಿದೆ.

ಎಷ್ಟು ಸಾಲ ಸಿಗುತ್ತದೆ.
ಈ ಯೋಜನೆಯ ಅಡಿ ರಾಜ್ಯದಲ್ಲಿನ ಯಾವ ರೈತರ ಬಳಿ ಒಂದು ಹಸು ಇದೆಯೋ, ಅವರಿಗೆ ರಾಜ್ಯ ಸರ್ಕಾರ ರೂ.40783 ಸಾಲ ನೀಡುತ್ತದೆ. ಈ ಸಾಲವನ್ನು ಒಟ್ಟು 6 ಮಾಸಿಕ ಕಂತುಗಳ ರೂಪದಲ್ಲಿ ಕ್ರೆಡಿಟ್ ಕಾರ್ಡ್ ಮಾಧ್ಯಮದ ಮೂಲಕ ಸಿಗಲಿದೆ. ಇದೆ ರೀತಿ ಒಂದು ಎಮ್ಮೆ ಹೊಂದಿದವರಿಗೆ ರೂ.60, 249 ಸಾಲ ನೀಡಲಾಗುತ್ತದೆ. ಈ ಹಣ ರೈತರಿಗೆ ಒಟ್ಟು 1 ವರ್ಷದ ಅವಧಿಯೊಳಗೆ ನೀಡಲಾಗುತ್ತದೆ. ಇದಕ್ಕೆ ವಾರ್ಷಿಕವಾಗಿ ಶೇ.4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸುವವರಿಗೆ ಶೇ.100 ರಷ್ಟು ಬಡ್ಡಿ ವಿನಾಯ್ತಿ ನೀಡಲಾಗುತ್ತದೆ.1.60 ಲಕ್ಷ ರೂ.ಗಳಿಗಿಂತ ಹೆಚ್ಚಿನ ಸಾಲ ಪಡೆಯುವವರಿಗೆ ಬಡ್ಡಿಯಲ್ಲಿ ಯಾವುದೇ ರೀತಿಯ ವಿನಾಯ್ತಿ  ನೀಡಲಾಗುವುದಿಲ್ಲ ಮತ್ತು ಬಡ್ಡಿ ಸಾಮಾನ್ಯವಾಗಿರಲಿದೆ.

ಈ ಕಾರ್ಡ್ ಹೇಗೆ ಪಡೆಯಬೇಕು
-ನೀವು ನಿಮ್ಮ ಬ್ಯಾಂಕ್‌ಗೆ ಶಾಖೆಗೆ ಹೋಗಿ ಪಶು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು.
-ಅರ್ಜಿಯೊಂದಿಗೆ, ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
- ಈ ಯೋಜನೆ ಹರಿಯಾಣದ ನಿವಾಸಿಗಳಿಗೆ ಮಾತ್ರ ಎಂಬುದನ್ನು ನೆನಪಿನಲ್ಲಿಡಿ.
- ಅರ್ಜಿ ನಮೂನೆಯನ್ನು ಪರಿಶೀಲಿಸಿದ ನಂತರ, ನಿಮ್ಮ ಪಶು ಕ್ರೆಡಿಟ್ ಕಾರ್ಡ್ ಅನ್ನು 1 ತಿಂಗಳೊಳಗೆ ಸಿದ್ಧಗೊಳ್ಳುತ್ತದೆ.

Trending News