ಇಂದೂ ಸಹ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್ ದರ

ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ದರ 33 ಪೈಸೆ ಹಾಗೂ ಡೀಸೆಲ್ ದರ 23 ಪೈಸೆ ಇಳಿಕೆಯಾಗಿದೆ.

Last Updated : Jun 4, 2018, 09:46 AM IST
ಇಂದೂ ಸಹ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್ ದರ title=

ಬೆಂಗಳೂರು: ದೇಶಾದ್ಯಂತ ಇಂದು ತೈಲ ದರ ಪರಿಷ್ಕರಣೆಯಾಗಿದ್ದು, ಜೂನ್ 4, 2018ರ ಸೋಮವಾರದಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ದರ 33 ಪೈಸೆ ಹಾಗೂ ಡೀಸೆಲ್ ದರ 23 ಪೈಸೆ ಇಳಿಕೆಯಾಗಿದೆ. ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ.
 
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 77.96 68.97
ಕೋಲ್ಕತ್ತಾ 80.60 71.52
ಮುಂಬೈ 85.77 73.43
ಚೆನ್ನೈ 80.94 72.82
ಬೆಂಗಳೂರು 79.23 70.16
ಹೈದರಾಬಾದ್ 82.59 74.97
ತಿರುವನಂತಪುರಂ 81.10 73.81

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx

Trending News